ಗುರುವಾರ, ಜುಲೈ 28, 2016

ಸೋತವನ ರಾತ್ರಿ ಪದ್ಯಗಳು-1

ಕವಿತೆ ಹುಟ್ಟೊ ಕಾಲದಲ್ಲಿ ಮುಂಗಾರಿನ ಮಿಂಚು
ಎದುರಿಗಿದ್ದವಳ ಕಣ್ಣಲ್ಲಿ ಪ್ರೇಮ ನಿವೇದನೆಯ ಸಂಚು
ಹಗಲಲ್ಲಿ ಕಂಡ ಬಾವಿಗೆ ಬೀಳಲು ಭಾವನೆಗಳ ಹೊಂಚು
ಇದನರಿತು ಹೊರಟವನ ಬ್ಯಾಗಿನಲ್ಲಿತ್ತು ಸಾವಿನ ಅಂಚು
- ಸೋತವನು

****

ಅಹಮಿಗೆ ಪೆಟ್ಟು ಬೀಳುವ ಕ್ಷಣ
ನಾನು ನಾನೆಂಬುವುದೆ ಪರಕೀಯ
ಇರುವ ನಾಲ್ಕು ಕ್ಷಣಗಳಲ್ಲಿ
ನೂರು ದಾರಿ ಹಲವು ಕವಲು
ಕೊನೆಗೆ ಸೇರುವುದೆಲ್ಲವೊ ಶೊನ್ಯ ಸಾಧನೆ
-ಸೋತವನು

****

ಹಾಡುವ ಕನಲಿಕೆ ಎದೆಯೊಳಗೆ
ತುರಿಸುವ ತಿಕ್ಕಾಟಗಳು ಅದರೊಳಗೆ
ಎದ್ದೇಳುವ ಬಿರಿಸು ಭಾವಗಳಿಗೆ
ಜೀವ ತುಂಬುವ ಕಲೆ ಅವಳಿಗೆ
ಮೇಲೆ ಹಾರಿ ಕೆಳಗೆ ಬೀಳುವ ಜಿದ್ದು
ಗೆಲ್ಲುವುದಕ್ಕಲ್ಲ ಸೋಲುವುದಕ್ಕೆ
ಗೆಲುವಿಗೆ ಒಂದೇ ಒಂದು ಖುಷಿ
ಸೋಲಿಗೆ ಗೆಲುವಿನ ಸಾವಿರ ನಿರೀಕ್ಷೆ
ಹಾಡುವ ಕನಲಿಕೆ ಕೊನೆಯಾಗುವುದೇ?
-ಸೋತವನು

ಸೋಮವಾರ, ಜುಲೈ 18, 2016

ಏನು ಆಗಬಾರದಿತ್ತೋ ಅದೇ ಆಯಿತು...

- ಹುಡುಗನೊಬ್ಬ ಗಜಲ್‌ಗಳು-

- ಪ್ರದ್ಯುಮ್ನ
ಜೀವನವೇ ಹಾಗೆ. ನಮ್ಮ ನಿರೀಕ್ಷೆಗಳು, ಆಕಾಂಕ್ಷೆಗಳು ಈಡೇರುವ ಹೊತ್ತಿನಲ್ಲಿ ಸಡನ್ನಾಗಿ ಯು ಟರ್ನ್ ತೆಗೆದುಕೊಳ್ಳುತ್ತದೆ. ಮತ್ತೆ ವಿರುದ್ಧ ದಿಕ್ಕಿನಲ್ಲಿ  ಓಡುತ್ತಿರುವಾಗಲೇ ಮತ್ತೊಂದಿಷ್ಟು ತಿರುವುಗಳು. ಈ ತಿರುವುಗಳ ತಿರುಗಣಿಯಲ್ಲಿ ಜೀವನ ಸುರಳಿಯಾಗುತ್ತ, ಅದರೊಳಗೆ ನೋವು, ಹತಾಶೆ, ಸುಖ, ದುಃಖ, ಸಂತೋಷ, ಸಂಭ್ರಮಗಳೆಲ್ಲವೂ ಲೀನವಾಗಿ ಶೂನ್ಯವಾಗುವ ಎಲ್ಲ ಅಪಾಯಗಳಿರುತ್ತವೆ. ನಾವು ಅಂದಕೊಂಡ ರೀತಿಯಲ್ಲಿ ಬದುಕು ಸಾಗದಿದ್ದಾಗ, ಬದುಕು ಅಂದುಕೊಂಡ ರೀತಿಯಲ್ಲಿ ನಾವು ನಡೆಯಬೇಕು. ಈ ತರ್ಕದಿಂದಲೇ ಜೀವನ ಹೆಚ್ಚು ಸಂತೋಷವಾಗಿರುತ್ತದೆ...
- ಹೀಗೆ ನೀನು ಅಂದು ಊರಾಚೆ ಇದ್ದೂ ಇಲ್ಲದಂತಿರುವ ಉದ್ಯಾನದ ಮೂಲೆಯೊಂದರ ಮುರುಕಲು ಬೆಂಚ್‌ನಲ್ಲಿ  ಕುಳಿತು ಜೀವನದ ಪಾಠ ಮಾಡುತ್ತಿರುವಾಗ, ನಿನ್ನ ಮಾತುಗಳು ತಲೆಯೊಳಗೆ ಇಳಿದಿರಲಿಲ್ಲ. ಅಂದಿಗೆ, ನಿನ್ನ ಮುಂಗುರುಳು ನೃತ್ಯ ನೋಡುತ್ತಾ.... ನಿನ್ನ ಸಾನ್ನಿಧ್ಯ, ನಿನ್ನ ಸಾಮೀಪ್ಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೊತ್ತು ಕಳೆಯುವುದೇ ಬದುಕಾಗಿತ್ತು. ಅಂದಿಗೆ ಅದು ನನ್ನ ಜೀವನದ ಏಕ ಮಾತ್ರ ಗುರಿಯಾಗಿತ್ತು. ಅಂದು ನೀನು ಹೇಳಿದ ಪ್ರತಿಯೊಂದು ಮಾತುಗಳು ನನ್ನ ಅನುಭವಕ್ಕೆ ಈಗ ಬರುತ್ತಿವೆ. ನನ್ನ ಬದುಕಿನ ಅತಿದೊಡ್ಡ ಜೀವನಸೆಲೆ, ಸ್ಫೂರ್ತಿಯ ಚಿಲುಮೆಯಾಗಿದ್ದ ನೀನೇ ಹಠಾತ್ತನೇ ಯು ಟರ್ನ್ ತೆಗೆದುಕೊಂಡು, ನನ್ನನ್ನು ದಾರಿಯ ಮಧ್ಯೆ ಬಿಟ್ಟು ಹೋಗಿತ್ತೀಯ ಎಂಬ ಸಣ್ಣ ಸುಳಿವು ಇರಲಿಲ್ಲ. ಜೀವನದ ದಾರಿಯಲ್ಲಿ ಇಬ್ಬರೂ ಸಹಯಾತ್ರಿಕರಾಗಿ ಪಯಣ ಆರಂಭಿಸಿ, ಮುಗಿಸೋಣ ಎಂದು ಹೇಳಿದವಳು ನೀನು ಮಾತು ತಪ್ಪಿದೆ; ದಾರಿ ತಪ್ಪಿದೆ ನಾನು. ಈಗ ದಿಕ್ಕು ಕಾಣದೆ ನಿಂತಿದ್ದೇನೆ. ನನ್ನ ಮುಂದೆ ಅನೇಕ ಕವಲು ದಾರಿಗಳಿವೆ. ಯಾವ ದಾರಿಯನ್ನು ಆಯ್ಕೆ ಮಾಡಿಕೊಂಡರೆ, ಅದು ಎಲ್ಲಿ ಗೆ ಹೋಗಿ ಮುಟ್ಟತ್ತದೆ ಎಂಬ ಅರಿವು ನನಗಿಲ್ಲ. ಅದರ ಅರಿವು ಇದ್ದವಳು ನೀನು ನನ್ನ ಜತೆಯಲ್ಲಿ ಇದ್ದು ಇಲ್ಲದಂತೆ ಇರುವೆ. ಆಯ್ಕೆಗಳು ವಿಷಯ ಬಂದಾಗ ನನ್ನದು ಕನ್‌ಫ್ಯೂಸ್ಡ್ ಸೋಲ್. ಯಾವ ಆಯ್ಕೆ ನನ್ನನ್ನು ಎಲ್ಲಿಗೆ ಹೋಗಿ ಮುಟ್ಟಿಸುತ್ತದೆ ಎಂಬುದೇ ಗೊತ್ತಿಲ್ಲ. ಆದರೂ ಒಬ್ಬಂಟಿಯಾಗಿ ನಡೆಯುವ ಸಾಹಸ ಮಾಡುತ್ತಿದ್ದೇನೆ. ಯಾಕೆ ಹೇಳು..? ನಿನಗಾಗಿ, ನಿನ್ನ ಮೇಲಿನ ಪ್ರೀತಿಗಾಗಿ. ಆ ಪ್ರೀತಿಯೇ ನನ್ನನ್ನು ಕಷ್ಟದಲ್ಲೂ ಇಂದಿಗೂ ನಡೆಯುವುದನ್ನು ನಿಲ್ಲದಂತೆ ಮಾಡುತ್ತದೆ.
ನಿನ್ನದು ಯಾವಾಗಲೂ ಲೆಕ್ಕಾಚಾರದ ಬದುಕು. ಇಂಚುಪಟ್ಟಿಯನ್ನು ಹಿಡಿದು ಗೆರೆ ಕೊರೆದ ಹಾಗೆ ಬದುಕಬೇಕು ಎನ್ನುತ್ತಿದ್ದವಳು. ನನ್ನದೋ... ಯಾವುದೇ ಶಿಸ್ತಿಗೆ ಒಳಪಡದ, ಯಾವ ಅಂಕೆಗೂ ಸಿಗದ, ಸೂತ್ರ ಹರಿದ ಗಾಳಿ ಪಟದ ಚಲನೆಯಂಥ ಬದುಕು. ನಮ್ಮಿಬ್ಬರಿಗೂ ಸಾಮ್ಯತೆ ಏನು ಎಂದು ಹುಡುಕ ಹೊರಟರೆ ಏನಂದರೆ ಏನೂ ಇರಲಿಲ್ಲ.  ಆದರೂ ನಮ್ಮಿಬ್ಬರಲ್ಲೂ ಪ್ರೀತಿ ಎಂಬ ಗಾಢವಾದ  ಬಂಧ. ನಮ್ಮ ನಡುವೆ ಇದ್ದ ಎಲ್ಲ ವೈರುಧ್ಯಗಳನ್ನು ಮೀರಿ ನಮ್ಮನ್ನು ಒಂದಾಗಿಸಿತ್ತು. ನನ್ನ ಅಸ್ತವ್ಯಸ್ತ ಬದುಕಿನ ರೀತಿಯನ್ನು ನೀನು ಸಹಿಸಿಕೊಂಡಿದ್ದು ನಿಜವಾಗಲೂ ಅದು ನಿನ್ನ ಸಹನೆಯ ಶಕ್ತಿಯ ಪ್ರತೀಕ.  ಕಾಡು, ಗುಡ್ಡ, ಬೆಟ್ಟ, ಪ್ರಾಣಿ, ಪಕ್ಷಿ, ಚಿಟ್ಟೆ, ಕ್ರೀಮಿ, ಕೀಟಗಳ ಫೋಟೋ ತೆಗೆಯುತ್ತೇನೆ ಎಂದು ಬಗಲಿಗೆ ಕ್ಯಾಮೆರಾ ಏರಿಸಿಕೊಂಡು ಹೋರಡುತ್ತಿದ್ದವನು ನಾನು. ಕ್ಯಾಮೆರಾ ಮೇಲಿನ ಮೋಹ, ಒಂದೊಂದು ಸಾರಿ ನಿನ್ನ ಮೇಲಿನ ಪ್ರೀತಿಗಿಂತ ಹೆಚ್ಚಾಗುತ್ತಿತ್ತು. ಆಗ ನೀನು ತಮಾಷೆಯಾಗಿ, ‘‘ನಿನಗೆ ಕ್ಯಾಮೆರಾ ಫಸ್ಟ್ ಲವ್. ನಾನು ಸೆಕೆಂಡ್ ಲವ್,’’ ಎಂದು ಕಿಚಾಯಿಸುತ್ತಿದ್ದೆ. ಆದರೆ, ಈಗ ನಿಜ ಹೇಳುತ್ತೇನೆ ಕೇಳು; ನನ್ನ ಜೀವನದಲ್ಲಿ ಎಂದಿಗೂ ನೀನೇ ಮೊದಲ ಪ್ರೀತಿ. ನನ್ನ ಅಷ್ಟೂ ಜೀವನದ ಅನುಭವದಲ್ಲಿ ನಿನಗೆ ಕೊಟ್ಟ ಸ್ಥಾನ ನನ್ನ ಕ್ಯಾಮೆರಾಗೂ ಕೊಟ್ಟಿಲ್ಲ. ಆಫ್‌ಕೋರ್ಸ್, ಕ್ಯಾಮೆರಾ ಇಸ್ ಮೈ ಪ್ಯಾಶನ್... ಹಾಗಂತ ಸುಮಾರು ಸಾರಿ ಹೇಳಲು ಯತ್ನಿಸಿದ್ದೆ. ಆದರೆ, ಹೇಳಲು ಆಗಲಿಲ್ಲ. ಅದನ್ನು ಈಗ ಹೇಳುತ್ತಿದ್ದೇನೆ; ನೀನು ಕೇಳಿಸಿಕೊಳ್ಳುತ್ತೀಯ ಎಂಬ ನಂಬಿಕೆ ನನಗಿಲ್ಲ. ಕೇಳಿಸಿಕೊಂಡರೂ ಅದರೊಳಗಿನ ಭಾವನೆಗಳು ಎಬ್ಬಿಸುವ ಸಂಟರಗಾಳಿ ನಿನ್ನನ್ನು ತಾಕಲು ಸಾಧ್ಯವಿಲ್ಲ. ನೀನೀಗ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುವ ಸಹನಾಮೂರ್ತಿ. ಈ ಜಗತ್ತಿನ ಆಗು ಹೋಗುಗಳ ಅರಿವು ನಿನಗಿಲ್ಲ. ಅಷ್ಟ್ಯಾಕೆ... ನಾನಾರು ಎಂಬುದು ಗೊತ್ತಿರಲಿಕ್ಕಿಲ್ಲ. ಅಂಥ ಸ್ಥಿತಿಯಲ್ಲಿದ್ದೀಯ.
ನೀನು ಹೇಳಿದ ಹಾಗೇ ಬದುಕುತ್ತಿದ್ದೇನೆ ಎಂದರೆ ನಂಬಲಾರೆ. ಅಂದು ನೀನು ಹೇಳಿದ ಹಾಗೆ ಬದುಕು ಅಂದುಕೊಂಡ ರೀತಿಯಲ್ಲಿ ಬದುಕುತ್ತಿದ್ದೇನೆ. ನನಗೀಗ, ಯಾವುದೇ ಬೆಟ್ಟ, ಗುಡ್ಡ, ಪ್ರಾಣಿ, ಪಕ್ಷಿಗಳು ಆಕರ್ಷಕವಾಗಿ ಕಾಣುತ್ತಿಲ್ಲ. ನನ್ನ ಕ್ಯಾಮೆರಾ ಲೆನ್ಸ್ ಮೇಲೆ ಧೂಳು ಕೂತಿದೆ. ನನಗೆ ಕ್ಯಾಮೆರಾ ಮೋಹ ಇನಿತು ಇಲ್ಲ. ಹೇಗೆ ಇರುತ್ತೇ ಹೇಳು..? ನನ್ನ ಕ್ಯಾಮೆರಾ ಕಣ್ಣಿಗೆ ಶಕ್ತಿ ತುಂಬಿದವಳು ನೀನೇ ನಿತ್ರಾಣ ಸ್ಥಿತಿಯಲ್ಲಿರುವಾಗ? ನೀನು ಜತೆಯಲ್ಲಿದ್ದಾಗ, ಸಣ್ಣ ಕೀಟವೂ ನನ್ನ ಕಣ್ಣೀಗೆ ಅಮೇಜಿಂಗ್ ಪ್ರಾಣಿಯಾಗಿ ಕಾಣುತ್ತಿತ್ತು. ಅದಕ್ಕಿರುವ ಬದುಕುವ ಛಲ ರೋಮಾಂಚನಗೊಳಿಸುತ್ತಿತ್ತು. ಎಲ್ಲ ಸಣ್ಣ ಸಣ್ಣ ಖುಷಿಗಳು ದೊಡ್ಡ ಸಂಭ್ರಮಗಳಾಗುತ್ತಿದ್ದವು; ದೊಡ್ಡ ದುಃಖಗಳೆಲ್ಲವೂ ಸಣ್ಣ ಸಣ್ಣ ತೊಂದರೆಗಳಾಗಿ ಬದಲಾಗುತ್ತಿದ್ದವು. ಅದಕ್ಕೆಲ್ಲ ನೀನೇ ಕಾರಣ. ನಿನ್ನ ನಿಷ್ಕಲ್ಮಷ ಪ್ರೇಮ ಕಾರಣ. ಆದರೆ ಈಗ...?

***
ಫೇಸ್‌ಬುಕ್‌ನಲ್ಲಿ ಮಹಿಳೆಯರು ಸೀರೆಯಲ್ಲಿ ಮಿಂಚುತ್ತಿರುವ ಫೋಟೋಗಳನ್ನು ಅಪ್‌ಲೋಡ್ ಮಾಡಿ, ತಮ್ಮ ಸ್ನೇಹಿತರಿಗೆ ಖೋ ಕೊಟ್ಟು ಅದನ್ನೊಂದು ಆಂದೋಲನ ರೀತಿ ಮಾಡುತ್ತಿದ್ದಾರೆ. ಇದನ್ನು ನೋಡುತ್ತಿದ್ದಂತೆ ನನಗೆ ಅಪರಾಧಿ ಭಾವನೆ ಒತ್ತರಿಸಿ ಬರುತ್ತಿದೆ. ಎಲ್ಲವೂ ಚೆನ್ನಾಗಿ ಇದ್ದರೆ, ನಿನ್ನವು ಇಂಥ ಹಲವು ಫೋಟೋಗಳು ನಿನ್ನ ಪ್ರೊಫೈಲ್‌ನಲ್ಲಿ ರಾರಾಜಿಸುತ್ತಿದ್ದವು. ಯಾಕೆಂದರೆ, ಸೀರಿಯುಟ್ಟರೆ, ನಿನ್ನ ಸೌಂದರ್ಯ ದುಪ್ಪಟ್ಟಾಗುತ್ತಿತ್ತು. ಅದಕ್ಕೊಂದು ಚೆಲವು ಬರುತ್ತಿತ್ತು, ಒಲವು ಮೂಡುತ್ತಿತ್ತು. ಆದರೆ, ನನ್ನಿಂದಾದ ತಪ್ಪಿನಿಂದ ನೀನು ಇಂಥ ಎಲ್ಲ ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸಲು ಆಗುತ್ತಿಲ್ಲ. ಅಂದು ನಿನ್ನ ಮಾತು ಕೇಳಬೇಕಿತ್ತು. ಅಂಥ ಅರ್ಜೆಂಟ್ ಏನೂ ಇರಲಿಲ್ಲ. ವಿದೇಶದಿಂದ ಬರುತ್ತಿದ್ದ ಗೆಳೆಯನೊಬ್ಬನನ್ನು ಆರಾಮವಾಗಿ ಕರೆದುಕೊಂಡು ಬರಬಹುದಿತ್ತು. ಬಹಳ ದಿನಗಳ ನಂತರ ನನ್ನ ಬಾಲ್ಯದ ಸ್ನೇಹಿತ ನನ್ನನ್ನು ಮಾತ್ರ ಭೇಟಿಯಾಗಲು ಬರುತ್ತಿದ್ದಾನೆಂಬ ಹುಚ್ಚು ಸಂತೋಷದ ನಡುವೆ ನಿನ್ನ ಎಚ್ಚರಿಕೆಯ ಮಾತುಗಳು ಕೇಳಿಸಲಿಲ್ಲ. ನಿಧಾನವಾಗಿಯೇ ಕಾರು ಓಡಿಸಿದ್ದರೆ ಎಲ್ಲವೂ ಚೆನ್ನಾಗಿರುತ್ತಿತ್ತು. ಅತಿಯಾದ ಉತ್ಸಾಹ, ಹುಚ್ಚು ಸಂತೋಷದಲ್ಲಿ ಎಲ್ಲೇ ಮೀರಿ ಓಡುತ್ತಿದ್ದ ಕಾರು ದಿಕ್ಕು ತಪ್ಪದೇ ಇರುತ್ತದೆಯೇ? ತಪ್ಪೀತು. ಖಂಡಿತ ಏನು ಆಗ ಬಾರದಿತ್ತೋ... ಅದೇ ಆಗಿತ್ತು. ನನಗೆ ಎಚ್ಚರವಾದಾಗ ಎಲ್ಲವೂ ಸ್ಪಷ್ಟವಾಗಿತ್ತು. ಚಿಕ್ಕ ಪುಟ್ಟ ಗಾಯಗಳಿಂದ ನಾನು ಬಚಾವಾಗಿದ್ದೆ. ಆದರೆ, ನೀನು ಜೀವಂತ ಹೆಣವಾಗಿದ್ದೆ. ‘‘ಶಿ ಈಸ್ ಇನ್ ಕೋಮಾ,’’ ಎಂದು ಡಾಕ್ಟರ್ ಹೇಳಿದಾಗ ನನಗೆ ಇಡೀ ಆಕಾಶವೇ ಮೈ ಮೇಲೆ ಕಳಚಿ ಬಿದ್ದ ಅನುಭವ. ಕಳೆದ ಒಂದು ವರ್ಷದಿಂದ ನಿನ್ನ ಸಾನ್ನಿಧ್ಯದಲ್ಲೇ ಇದ್ದೇನೆ. ಯಾವ ಕ್ಯಾಮೆರಾವೂ ನಿನ್ನ ಸಾನ್ನಿಧ್ಯದಿಂದ ನನ್ನನ್ನು ಬೇರ್ಪಡಿಸುತ್ತಿಲ್ಲ. ಯಾವ ಪಕ್ಷಿ, ಪ್ರಾಣಿಯ ಅಮೇಜಿಂಗ್ ಆಗಿ ಕಾಣುತ್ತಿಲ್ಲ.  ನನಗೆ ಈಗಿರುವ ಒಂದೇ ಧ್ಯಾನ. ಅದು ನಿನ್ನ ಸಾನ್ನಿಧ್ಯದಲ್ಲಿ, ನಿತ್ಯ ನೆನಪುಗಳನ್ನು ಮೆಲಕು ಹಾಕುವುದಷ್ಟೆ  ನನ್ನ ಒಂದೇ ಸರಳ ರೇಖೆಯಲ್ಲಿ ಎಳೆಯಬಹುದಾದ ಜೀವನ. ನನ್ನ ಜೀವನಕ್ಕೀಗ ಈಗೊಂದು ಅರ್ಥ ಸಿಕ್ಕಿದೆ. ನನ್ನ ಉಸಿರು ಇರೋವರಿಗೆ ನಿನಗೆ ಉಸಿರಾಗಿರುವುದು. ಅದನ್ನು ಬಿಟ್ಟು ನನಗೆ ಬೇರೆ ಯಾವುದೇ ಮೋಹಗಳಿಲ್ಲ...
***
ಹೀಗೆ ಹೇಳಿಕೊಳ್ಳುತ್ತಾ ಆಕೆಯ ತೊಡೆಯ ಮೇಲೆ ಕಣ್ಣೀರಿಟ್ಟವನಿಗೆ, ಆಕೆಯ ಸ್ಪಂದನ ಏನೋ ಎನ್ನುವಂತೆ, ಕಣ್ಣು ಸ್ವಲ್ಪ ಸಂಚಲನಗೊಂಡಿದ್ದು ಅವನ ಅರವಿಗೆ ಬರಲಿಲ್ಲ. ಆದರೆ, ಆತನೇ ತೆಗೆದ ಫೋಟೋದಲ್ಲಿದ್ದ ಅದಾವುದೋ ಕಾಡು ಹಕ್ಕಿಯೊಂದು ಕಂಡು ಕಾಣದಂತೆ ಆಕೆಯ ಕಣ್ ಚಲನೆಯನ್ನು ನೋಡಿಯೂ ನೋಡಿದಂತಿತ್ತು. 

ಸೋಮವಾರ, ಮೇ 23, 2016

ನಾವು ಏನೋ ಅಂದುಕೊಳ್ಳುತ್ತೇವೆ, ಅದು ಇನ್ನೇನೋ ಆಗುತ್ತದೆ!

ಹುಡುಗನೊಬ್ಬನ ಗಜಲ್ ಗಳು-
ಯಾವುದೇ ಕಲ್ಮಶವಿಲ್ಲದೇ ನಿರ್ವ್ಯಾಜ ಪ್ರೀತಿಯಾಗಿದ್ದರೆ ನಾವು ಹೇಗೆ ದೂರು ಆಗುತ್ತಿದ್ದೆವು..

- ಪ್ರದ್ಯುಮ್ನ
ಒಲಿದ ಹೃದಯಗಳು ಒಂದಾದರೆ ಬಾಳು ಇಂಪಾದ ಸಂಗೀತದಂತೆ ಕೇಳಿಸಲಾರಂಭಿಸುತ್ತದೆ. ಒಮ್ಮೊಮ್ಮೆ ಅಪಸ್ವರಗಳೇ ಹೆಚ್ಚಾದರೆ ಬಾಳು ನಾನೊಂದು ತೀರ... ನೀನೊಂದು ತೀರ... ಆಗುವುದು ಗ್ಯಾರಂಟಿ. ಆಗ ಕುಹಕ ಮಾತು, ವ್ಯಂಗ್ಯ ನಿಮ್ಮನ್ನು ಚುಚ್ಚಿ ಹೈರಾಣಾಗಿಸುತ್ತವೆ. ಕ್ರಿಕೆಟಿಗ ವಿರಾ್ ಕೊಹ್ಲಿ ಮತ್ತು ನಟಿ ಅನುಷ್ಕಾ ಜತೆಗಿನ ಮಧುರ ಬಾಂಧವ್ಯ ಇಂಥ ಅಪಸ್ವರದ ಮಧ್ಯೆ ಹೊರಳಾಡುತ್ತಿರುವಾಗಲೇ ಅವಳನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣ ಅಪಹಾಸ್ಯ ಮಾಡಿ ನಗುತ್ತಿತ್ತು. ಆದರೆ, ಒಲಿದ ಹೃದಯಕ್ಕೆ ಉಂಟಾದ ನೋವನ್ನು ನೋಡಿ ಸುಮ್ಮನಿರದ ಕೊಹ್ಲಿ, ``ನಿಮಗೆ ನಾಚಿಕೆಯಾಗಲ್ವಾ...? ಆಕೆ ನನಗೆ ಯಾವಾಗಲೂ ಸಕಾರಾತ್ಮಕ ಭಾವನೆಯನ್ನೇ ಕಟ್ಟಿಕೊಟ್ಟಿದ್ದಾಳೆ,'' ಎಂದು ಹೂಂಕರಿಸಿದಾಗಲೇ ಕುಹಕಿಗಳು ಸುಮ್ಮನಾದರು. ಇದೆಲ್ಲ ಯಾಕೆ ಹೇಳುತ್ತಿದ್ದೇನೆ ಎಂದರೆ, ನಮ್ಮಿಬ್ಬರಿಗೂ ಹಾಗೆ ಆಗಿತ್ತಲ್ಲವೇ? ನಾವು ಒಲಿದ ಸ್ವರಾಗಳಾಗಿ ಇಂಪಾದ ಸಂಗೀತ ಹಾಡುತ್ತಿರುವಾಗಲೇ ಅಪಸ್ವರ ನಾದ ಹೆಚ್ಚಾಗಿ ಸಂಗೀತ ಹಳ್ಳ ಹಿಡಿದು, ನಾವಿಬ್ಬರೂ ದೂರ ಆದದ್ದು. ಆಗ ಕಾಲೇ್ ಕಾರಿಡಾ್ನಲ್ಲಿ ನಿನ್ನ ಬಗ್ಗೆ ಆಡಿಕೊಂಡವರೆಷ್ಟು? ನಿನ್ನಡೆಗೆ ಕುಹಕ ನಗೆ ಚೆಲ್ಲಿ, ವ್ಯಂಗ್ಯವಾಗಿ ನಕ್ಕವರೆಷ್ಟು..? ಆಗ ನಾನು ಕೂಡ ಥೇ್ ಕೊಹ್ಲಿ ರೀತಿಯಲ್ಲಿ ಪ್ರತಿಕ್ರಿಯಿಸಿದ್ದೆ. ಕೊಹ್ಲಿ ಈ ಘಟನೆಯು ಆ ನೆನಪುಗಳನ್ನೆಲ್ಲ ಒಂದು ಸಾರಿ ತಿರುವಿ ಹಾಕಿದವು. ಸಿನಿಮಾ ಥಿಯೇಟ್ನ ಪ್ರೊಜೆಕ್ಟ್ನಲ್ಲಿ ಫಿ್‌ಮಗಳು ಒಂದೊಂದಾಗಿ ಒಂದರ ಹಿಂದೆ ಒಂದು ಓಡುವ ಹಾಗೆ ನನ್ನ ಮನಪಟಲದಲ್ಲಿ ಈ ನೆನಪುಗಳು ಮಿಂಚಿ ಮಾಯವಾದವು.
ನಾವಿಬ್ಬರೂ ಎಷ್ಟು ಅನ್ಯೋನ್ಯವಾಗಿದ್ದೆವಲ್ಲ. ನಮ್ಮನ್ನು ನೋಡಿ ಇಡೀ ಕ್ಯಾಂಪಸ್ಸೇ ಹೊಟ್ಟೆಕಿಚ್ಚು ಪಡುತ್ತಿತ್ತು. ಕಾಲೇ್ ಚರ್ಚಾಕೂಟಗಳಲ್ಲಿ ನನ್ನನ್ನು ಮೀರಿಸಿದವರೇ ಇರಲಿಲ್ಲ. ಸುತ್ತಲಿನ ಕಾಲೇಜುಗಳಲ್ಲೂ ಪ್ರಖ್ಯಾತಿ ಹಬ್ಬಿತ್ತು. ಚರ್ಚಾಕೂಟದಲ್ಲಿ ಭಾಗವಹಿಸಿದೆನೆಂದರೆ ಅಲ್ಲಿ ಪ್ರಥಮ ಬಹುಮಾನವನ್ನು ಮೊದಲೇ ಮೀಸಲಿಡುತ್ತಿದ್ದರು. ಆದರೆ, ಅಂದಿನ ಆ ಚರ್ಚಾಕೂಟದಲ್ಲಿ ನಾನು ಸೋತು ಹೋಗಿದ್ದೆ. ಅದಕ್ಕೆಲ್ಲ ನೀನೇ ಕಾರಣ ಎಂದು ನನ್ನ ಸ್ನೇಹಿತರಾದಿಯಾಗಿ ಎಲ್ಲರೂ ಕಾರಿಡಾ್ನಲ್ಲಿ ಹಂಗಿಸುತ್ತಿದ್ದರು. ಇದನ್ನೆಲ್ಲ ಹೇಗೆ ಸಹಿಸಿಕೊಳ್ಳಲಿ ಹೇಳು? ನೀನು ಯಾವತ್ತೂ ನನ್ನ ಸಾಧನೆಗೆ ಅಡ್ಡಿಯಾದವಳೇ ಅಲ್ಲ. ನನ್ನ ಸ್ಫೂರ್ತಿ ನೀನು. ನನ್ನ ಯಶಸ್ಸಿನ ಹಿಂದಿನ ಶಕ್ತಿ ನೀನು. ಅದು ನಿನಗೂ ಗೊತ್ತಿತ್ತು. ಆದರೆ, ನೀನು ಮಾತ್ರ ಕಾರಿಡಾ್ ರೂಮ್ಗಳಿಗೆ ಬೆಲೆ ಕೊಟ್ಟು, ಬೆಲೆಕಟ್ಟಲಾಗದ ನನ್ನ ಸ್ನೇಹವನ್ನು ಪೂರ್ತಿ ಕಡಿದುಕೊಂಡೆ. ಇದ್ಯಾವ ನ್ಯಾಯ ಹೇಳು? ನಿನಗೆ ಹಂಗಿಸುತ್ತಿದ್ದವರೆಗೆಲ್ಲ ಸರಿಯಾಗಿಯೇ ನೀರಿಳಿಸಿದ್ದೆ. ಆದರೂ ನಮ್ಮಿಬ್ಬರ ಮಧ್ಯ ಆ ಇಂಪಾದ ಸಂಗೀತ ಮತ್ತೆ ಒಡಮೂಡಲೇ ಇಲ್ಲ. ನಮ್ಮಿಬ್ಬರ ಸ್ನೇಹ-ಪ್ರೀತಿ-ಪ್ರೇಮ ತಿಳಿ ಕೊಳದಲ್ಲಿ ರೂಮ್ ಕಲ್ಲುಗಳು ದೊಡ್ಡ ಅಲ್ಲೋಲ ಕಲ್ಲೋಲ ಅಲೆಗಳನ್ನು ಸೃಷ್ಟಿಸಿದ್ದವು. ಆ ಅಲೆಗಳ ಸುಳಿಯಿಂದ ನಾನು ಹೊರ ಬಂದೆ. ಆದರೆ ನೀನು ಮಾತ್ರ ಅದೇ ಸುಳಿಯಲ್ಲಿ ಆಳವಾಗಿ ಸಿಲುಕುತ್ತಾ, ಮತ್ತಷ್ಟು ಸುಕ್ಕಾಗುತ್ತಾ ಹೋದೆ.
ಈ ಘಟನೆಗಳನ್ನೆಲ್ಲ ಈಗ ರಿವೈಂ್ ಮಾಡಿ ನೋಡಿದಾಗ ಒಂದೊಂದು ಸಾರಿ ಸಿಲ್ಲಿ ಅನ್ನಿಸುತ್ತದೆ. ಮತ್ತೊಂದು ಸಾರಿ ನಾವಿಬ್ಬರೂ ಎಂಥ ಕುಹಕಕ್ಕೆ ಬಲಿಯಾದವೆಲ್ಲ ಎಂಬ ವ್ಯಥೆಯಾಗುತ್ತದೆ. ನಮ್ಮ ನಡುವಿನ ಬಾಂಧವ್ಯ ಅಷ್ಟು ಅಲ್ಪ ಕಾಲದ್ದಾಗಿತ್ತೆಂದರೆ ಅದು ಪೂರಿಪೂರ್ಣವಾಗಿರಲಿಲ್ಲ ಎಂದರ್ಥಲ್ಲವೇ? ಬಾಂಧವ್ಯದ ಬಿಲ್ಡಿಂ್ಗೆ ನಂಬಿಕೆ ಎಂಬ ತಳಪಾಯ ಗಟ್ಟಿಯಾಗಿರಲಿಲ್ಲ.  ಇಲ್ಲದಿದ್ದರೆ, ರೂಮ್ಗಳೆಂಬ ಸಣ್ಣ ಬಿರುಗಾಳಿಗೆ ಇಡೀ ಬಿಲ್ಡಿಂ್ ಕುಸಿದು ಬಿತ್ತು ಎಂದು ನಂಬುವುದಾದರೂ ಹೇಗೆ? ಆದರೆ, ಅದೇ ವಾಸ್ತವ ಅಲ್ಲವೇ? ನಂಬಲೇ ಬೇಕು. ನಂಬಿದ್ದೇನೆ ಕೂಡ. ಇದನ್ನು ಬಿಟ್ಟು ಇನ್ಯಾವ ದಾರಿ ಇತ್ತು ಹೇಳು ನನಗೆ? ಆದರೆ, ನೀನು ಮಾತ್ರ ಏನೂ ಆಗಿಯೇ ಇಲ್ಲ ಎನ್ನುವ ಹಾಗೇ ಇದ್ದೆ. ನಿನ್ನ ಮನಸ್ಸು ಅದ್ಹೇಗೆ ಅಷ್ಟೊಂದು ಕಠೋರವಾಗಿತ್ತು? ಕಿಂಚಿ್ ಆದರೂ ಕರುಣೆ ಗಾಳಿ ತಾಕಲಿಲ್ಲವೇ? ಬಹುಶಃ ತಾಕಿದ್ದರೆ ನನ್ನಂತೆಯೇ ನೀನು ಕುಹುಕಿಗಳಿಗೆಲ್ಲ ಒಂದು ಪಾಠ ಕಲಿಸುತ್ತಿದ್ದೆ. ಈಗೀಗ ನನಗನ್ನಿಸುತ್ತದೆ ನಮ್ಮಿಬ್ಬರದ್ದು ಒತ್ತಾಯಪೂರ್ವಕವಾಗಿ ನಂಬಿಸಿಕೊಂಡು ಪ್ರೀತಿಯಾಗಿತ್ತಾ.. ಸ್ನೇಹವಾಗಿತ್ತಾ ಅಂತ. ಸಹಜವಾದ ಮತ್ತು ಯಾವುದೇ ಕಲ್ಮಶವಿಲ್ಲದ ನಿರ್ವಾಜ್ಯ ಪ್ರೀತಿಯಾಗಿದ್ದರೆ ನಾವು ಹೇಗೆ ದೂರ ಆಗುತ್ತಿದ್ದೆವು?
ಒಂದು ವಿಷಯವನ್ನು ನೀನು ಮರೆತಿದ್ದೆ. ನನ್ನನ್ನು ಎಷ್ಟು ಸಲೀಸಾಗಿ ದಿಕ್ಕರಿಸಿ ಹೋದೆಯಲ್ಲ ನೀನು. ಆದರೆ, ನೀನಾದರೂ ಸುಖವಾಗಿದ್ದಾ? ಇಲ್ಲ. ಇರಲಿಲ್ಲ. ನಿಮ್ಮ ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಅದ್ಯಾವುದೋ ಎಂಜಿನಿಯ್ನನ್ನು ಮದುವೆಯಾಗಿ ಮುಂಬಯಿಗೆ ಹಾರಿ ಹೋದೆ. ಎಲ್ಲರಂತೆ ನಾನು, ನಿನ್ನ ಜೀವನವನ್ನು ನೀನು ಕಟ್ಟಿಕೊಂಡೇ ಬಿಡು ಎಂದು ಭಾವಿಸಿ, ಅದೇ ಹಳೆ ನೆನಪುಗಳ ಕ್ಯಾಸೆ್ ಅನ್ನು ರೀವೈಂ್ ಮಾಡುತ್ತಾ ನನ್ನದೇ ಲೋಕದಲ್ಲಿ ಕಳೆದು ಹೋದೆ. ಹಳೇ ದೇಗುಲ, ಗೋರಿಗಳನ್ನು ಹುಡುಕಿಕೊಂಡು ಹೋದೆ. ಅವುಗಳ ಹಿಂದಿರುವ ಇತಿಹಾಸ ಕೆದಕುತ್ತಾ ನಮ್ಮಿಬ್ಬರ ಗತಪ್ರೇಮ ಮರೆಯಲು ಪ್ರಯತ್ನಿಸುತ್ತಿದ್ದೆ. ಈ ಕೆಲಸ ನನಗೆ ಒಂದಿಷ್ಟು ನೆಮ್ಮದಿ ಮತ್ತು ಇನ್ನೊಂದಿಷ್ಟು ಉತ್ಸಾಹ ತುಂಬುತ್ತಿತ್ತು. ಯಾಕೆ ಗೊತ್ತಾ? ಕೆಲವು ರಾಜರು, ಶ್ರೀಮಂತರು ತಮ್ಮ ಪ್ರೀತಿಯ ಪ್ರತೀಕವಾಗಿ, ಪತ್ನಿಯರ ನೆನಪಿಗೆ ಗುಡಿಯನ್ನೋ, ಗೋರಿಯನ್ನೋ ಕಟ್ಟಿ ತಮ್ಮ ಪ್ರೇಮವನ್ನು ಚಿರಸ್ಥಾಯಿಯಾಗಿಸಲು ಪ್ರಯತ್ನಿಸಿದ್ದರು. ಇಂಥವುಗಳ ಹಿಂದೆ ದಂತಕತೆಗಳು ಹುಟ್ಟಿಕೊಂಡು, ನಿರ್ವಾಜ್ಯ ಪ್ರೇಮವೆಲ್ಲ ಗಾಳಿಗೆ ತೂರಿ ಹೋಗಿತ್ತು. ಸ್ಥಾನಪಲ್ಲಟವಾದ ಪ್ರೇಮದ ಚುಕ್ಕೆಗಳನ್ನು ಸೇರಿಸಿ ಸುಂದರವಾದ ಕಲಾಕೃತಿ ರಚಿಸಲು ಪ್ರಯತ್ನಿಸುತ್ತಿದ್ದೆ. ತುಸು ಮಟ್ಟಿಗೆ ಯಶಸ್ವಿಯಾದೆ ಅಂದುಕೊಂಡರೂ ತಪ್ಪಿಲ್ಲ. ಆದರೆ, ಎದೆಯಾಳದಲ್ಲಿ ನೀನು ಬಿಟ್ಟು ಹೋದ ನೆನಪುಗಳು ಮಾತ್ರ ಸಾಯುತ್ತಲೇ ಇರಲಿಲ್ಲ. ಆಗೆಲ್ಲ ನಾನು ಇನ್ನಾವುದೋ ಗುಡಿಯನ್ನೋ, ಗೋರಿಯನ್ನೋ ಹುಡುಕಿಕೊಂಡು ಹೋಗುತ್ತಿದ್ದೆ.
ಅಂದೊಂದು ದಿನ ನಾನು ಯಾವುದನ್ನು ಕೇಳಬಾರದು ಎಂದುಕೊಂಡಿದ್ದೇನೋ ಅದೇ ಸುದ್ದಿಯನ್ನು ಕೇಳಬೇಕಾಯಿತು. ನೀನು ಊರಿಗೆ ಬಂದಿದ್ದು ಗೊತ್ತಾಯಿತು ನಿಜ. ಆದರೆ ನಿನ್ನನ್ನು ನೋಡುವ, ನಿನ್ನ ಎದುರಿಗೆ ಬರುವ ಧೈರ್ಯ ಇರಲಿಲ್ಲ. ವಿಧಿಯಾಟ ಬೇರೆನೇ ಅಲ್ಲವೇ? ಅದೊಂದು ಸಂಜೆ ಊರ ಹೊರಗಿನ ಗುಡಿಯಲ್ಲಿ ನೀನು ನಿನ್ನ ಅಮ್ಮನ ಜತೆ ನಿಂತಿದ್ದೆ,  ಆದರೆ, ನಿನ್ನ ನೋಡಿ ನನ್ನ ನಾನೇ ನಂಬಲಿಲ್ಲ. ನಿಜಕ್ಕೂ ಅದು ನೀನೇನಾ? ಹೇಗಿದ್ದೆ ನೀನು- ಬಳಕುವ ಬಳ್ಳಿ. ಸೂಜಿಮಲ್ಲಿಗೆಯಂಥವಳು. ಸೂಜಿಗಲ್ಲಿನವಳು. ಕಾಲೇ್ನಲ್ಲಿದ್ದಾಗ ಎಲ್ಲ ಹುಡುಗರು ಒಂದು ಕ್ಷಣವಾದರೂ ನಿನ್ನನ್ನು ನೋಡದೆ ಹೋಗುತ್ತಿರಲಿಲ್ಲ. ಅಂಥ ವ್ಯಕ್ತಿತ್ವ ನಿನ್ನದು. ಅವಳೇನಾ ನೀನು ಎಂಬ ಮಟ್ಟಿಗೆ ಬದಲಾಗಿದ್ದೆ. ಮುಖದಲ್ಲಿ ಕಳೆ ಇಲ್ಲ; ನಕ್ಕು ಎಷ್ಟೋ ದಿನಗಳವಾಗಿರುವ ಹಾಗಿತ್ತು. ಕೃಶ ಶರೀರದಲ್ಲಿ ಸುಮ್ಮನೇ ನೆಪಕ್ಕೆ ಮಾತ್ರ ಎನ್ನುವಂಥ ಜೀವ. ನಿನ್ನ ಜೀವನದಲ್ಲಿ ಹೀಗೆಲ್ಲ ಆಗಬಾರದೆಂದು ನಾನು ಬಯಸಿದ್ದೆ. ಆದರೆ, ಅದೇ ಆಗಿ ಹೋಗಿತ್ತು. ನಿನ್ನ ಇಂದಿನ ಪರಿಸ್ಥಿತಿಗೆ ಆ ನಿನ್ನ ಹಣ, ಹೆಣ್ಣುಬಾಕ ಗಂಡನೇ ಕಾರಣ ಎಂಬುದು ಗೊತ್ತಾಗಿದ್ದು ನಿನ್ನ ಗೆಳತಿಯಿಂದಲೇ. ಗೊತ್ತಿದ್ದು ಗೊತ್ತಿದ್ದು ನಿಮ್ಮ ಮನೆಯವರು ಅಂಥವನ ಖೆಡ್ಡಾಕ್ಕೆ ನಿನ್ನನ್ನು ಕೆಡವಿದ್ದರು ಎಂದು ಆಕೆ ಕಣ್ಣೀರಾಗಿದ್ದಳು.
ನೋಡು ಜೀವನವೇ ಹೀಗೆ. ನಾವು ಏನು ಅಂದುಕೊಂಡು ಹೋಗುತ್ತೇವೆ. ಅದು ಇನ್ನೇನೋ ಆಗುತ್ತದೆ. ಕಾರಿಡಾ್ಗಳಲ್ಲಿನ ಹಂಗಿಸುವ ಮಾತುಗಳನ್ನು, ರೂಮ್ಗಳನ್ನು ನೀನು ಅಷ್ಟು ಸೀರಿಯ್ ಆಗಿ ತೆಗೆದುಕೊಳ್ಳದಿದ್ದರೆ ಇಂದು ನಮ್ಮಿಬ್ಬರದೇ ಒಂದು ಪುಟ್ಟ ಸಂಸಾರ ಆನಂದ ಸಾಗರವಾಗಿರುತ್ತಿತ್ತು. ಆದರೆ, ಈಗ ಕಾಲ ಮಿಂಚಿ ಹೋಗಿದೆ. ಚಿಂತಿಸಿ ಫಲವಿಲ್ಲ ಎನ್ನುವ ಹಾಗಿಲ್ಲ. ನಿನ್ನ ನೆನಪಲ್ಲಿ ನಾನು ಇಂದಿಗೂ ಹಾಗೆಯೇ ಇದ್ದೇನೆ. ಅಂದು ಹೇಗಿದ್ದೇನೋ ಹಾಗೆ. ಮುಂದಿನ ನಿರ್ಣಯ ನಿನಗೆ ಬಿಟ್ಟದ್ದು.

ಸೋಮವಾರ, ಮೇ 2, 2016

ವೀಸಾ ಗದ್ದಲ್ಲದಲ್ಲಿ ಸಿಕ್ಕ ಇಸಾ

ಪೂರ್ವ ತುರ್ಕಿಸ್ತಾನ ಎಂದೂ ಕರೆಯಲಾಗುವ ಚೀನಾದ ಕ್ಸಿ್ಜಿಯಾಂ್ ಉಯಿಗು್ ಸ್ವಾಯತ್ತ ಪ್ರದೇಶದ ಪತ್ಯೇಕತಾವಾದಿ ನಾಯಕ ದೋಲ್ಕು್ ಇಸಾ ಅಲ್ಪ ಸಂಖ್ಯಾತ ಉಯಿಗ್ ಪಂಗಡದ ನಾಯಕ.

ದೋಲ್ಕು್ ಇಸಾ.
ಕಳೆದ ವಾರ ಭಾರತದ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಪ್ರಸಿದ್ಧಿಯಾದ `ಅಪರಿಚಿತ' ವ್ಯಕ್ತಿ ಇವರು. ಚೀನಾದಲ್ಲಿ ಸ್ವಾಯತ್ತ ಪ್ರಾಂತವಾಗಿರುವ ಕ್ಸಿ್ಜಿಯಾಂ್ ಸ್ವಂತ್ರಗೊಳ್ಳಲು ಹೋರಾಟ ನಡೆಸುತ್ತಿರುವ ನಾಯಕ ಇವರು. ಆದರೆ, ಕಮ್ಯುನಿ್‌ಟ ಚೀನಾ ಸರಕಾರಕ್ಕೆ ಇವರೊಬ್ಬ `ಮೋ್‌ಟ ವಾಂಟೆ್ ಟೇರರಿ ್‌ಟ'.
ಇತ್ತೀಚೆಗಷ್ಟೇ ಭಾರತ ವಿಶ್ವಸಂಸ್ಥೆಯಲ್ಲಿ ತನ್ನ ಪ್ರಭಾವ ಬೀರುವ ಕೆಲಸಕ್ಕೆ ಕೈ ಹಾಕಿತ್ತು. ಪಠಾ್ಕೋ್ ವಾಯು ನೆಲೆ ದಾಳಿಯ ಪ್ರಮುಖ ಸಂಚುಕೋರ ಹಾಗೂ ಜೈಷೆ ಮೊಹಮ್ಮ್ ಉಗ್ರ ಸಂಘಟನೆಯ  ನಾಯಕ ಮಸೂ್ ಅಜ್ನನ್ನು ವಿಶ್ವಸಂಸ್ಥೆಯ ಉಗ್ರರ ಪಟ್ಟಿಗೆ ಸೇರಿಸುವ ಪ್ರಯತ್ನವನ್ನು ಭಾರತ ನಡೆಸಿತ್ತು. ಆದರೆ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ವಿಟೋ ಪವ್ ಹೊಂದಿರುವ ಚೀನಾ ಎಂದಿನಂತೆ ಭಾರತದ ಯತ್ನಕ್ಕೆ ಅಡ್ಡಗಾಲು ಹಾಕಿತ್ತು. ಚೀನಾದ ಈ ನಡೆ ಸಹಜ ಕೂಡ. ಪಾಕಿಸ್ತಾನ ಮತ್ತು ಚೀನಾ ಅತ್ಯಾಪ್ತ ರಾಷ್ಟ್ರಗಳೆಂಬುದು ಈಗೇನೂ ಗುಟ್ಟಾಗಿ ಉಳಿದಿಲ್ಲ. ಈ ವಿಷಯದಲ್ಲಿ ಕೊಂಚ ಮುಜಗರ ಎದುರಿಸಿದ್ದ ಭಾರತಕ್ಕೆ, ಚೀನಾಗೆ ತಿರುಗೇಟು ನೀಡಲು ಸಿಕ್ಕಿದ್ದ ಹೊಸ ಅಸ್ತ್ರವೇ ಈ `ದೋಲ್ಕು್ ಇಸಾ'.
ಅಮೆರಿಕ ನೆರವಿನಿಂದ ಭಾರತದ ಧರ್ಮಶಾಲಾದಲ್ಲಿ ಏಪ್ರಿ್ 30ರಿಂದ ಎರಡು ದಿನಗಳ ಕಾಲ ನಡೆದ `ಇನಿಶಿಯೇಟಿ್‌ಸ ಫಾ್ ಚೀನಾ' ಸಮಾವೇಶದಲ್ಲಿ ಪಾಲ್ಗೊಳ್ಳಲು ವಿಶ್ವ ಉಯಿಗು್ ಕಾಂಗ್ರೆ್(ಡಬ್ಲ್ಯೂಯುಸಿ)ನ ಪ್ರಧಾನ ಕಾರ್ಯದರ್ಶಿ ದೋಲ್ಕು್ ಇಸಾಗೆ ಆಹ್ವಾನ ನೀಡಲಾಗಿತ್ತು. ಇದಕ್ಕಾಗಿ ಇಸಾ ಭಾರತಕ್ಕೆ ಬರುವ ಸಿದ್ಧತೆ ನಡೆಸಿದ್ದರು. ವೀಸಾ ಕೂಡ ಸಿಕ್ಕಿತ್ತು. ಈ ವಿಷಯ ಭಾರತೀಯ ಮಾಧ್ಯಮಗಳಲ್ಲಿ `ಚೀನಾಗೆ ಭಾರತದ ಎದಿರೇಟು' ಎಂದು ಬಿಂಬಿತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಚೀನಾ; ಭಾರತದ ಮೇಲೆ ಒತ್ತಡ ತಂದು, ದೋಲ್ಕು್ಗೆ ನೀಡಿದ್ದ ವೀಸಾ ರದ್ದಾಗುವಂತೆ ನೋಡಿಕೊಂಡಿತು. ಇಸಾ ಚೀನಾಕ್ಕೆ ಬೇಕಾಗಿರುವ ಮೋ್‌ಟ ವಾಟೆಂ್ ಉಗ್ರ ನಾಯಕ. ಆತನ ವಿರುದ್ಧ ಇಂಟ್ಪೋ್ನಲ್ಲಿ ರೆ್ ಕಾರ್ನ್ ನೋಟಿ್ ನೀಡಲಾಗಿದೆ. ಅಂಥವನಿಗೆ ಹೇಗೆ ವೀಸಾ ನೀಡುತ್ತೀರಿ ಎಂದು ಪ್ರಶ್ನಿಸಿತು. ಚೀನಾದ ಒತ್ತಡಕ್ಕೆ ಕೊನೆಗೂ ಮಣಿದ ಭಾರತ, ಯಾವುದೇ ವಿವರ ನೀಡದೆ ದೋಲ್ಕು್ ಇಸಾ ಅವರಿಗೆ ನೀಡಲಾಗಿದ್ದ ವೀಸಾ ರದ್ದು ಮಾಡಿತು. ಅಲ್ಲಿಗೆ ಮತ್ತೊಂದು ಬಾರಿ ಭಾರತ ಅಂತಾರಾಷ್ಟ್ರೀಯವಾಗಿ ಮುಜಗರ ಎದುರಿಸುವಂತಾಯಿತು. ಯಾವುದೇ ದೂರದೃಷ್ಟಿ ಇಲ್ಲದೆ, ಭಾವನಾತ್ಮಕ, ಸೇಡಿನ ಕ್ರಮಗಳಿಂದ ನಿರ್ಧಾರ ಕೈಗೊಂಡರೆ ಇಂಥ ಮುಜಗರದ ಸನ್ನಿವೇಶಗಳು ಎದುರಿಸಲೇಬೇಕಾಗುತ್ತದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ.
ಇದೆಲ್ಲ ಸರಿ. ಆದರೆ, ಈ ದೋಲ್ಕು್ ಇಸಾ ಯಾರು? ಆತನ ಮೇಲೇಕೆ ಚೀನಾಗೆ ಮುನಿಸು? ಎಂಬಂಥ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಚೀನಾದ ವಾಯವ್ಯ ಭಾಗಕ್ಕಿರುವ ವಿಶಾಲವಾದ ಭೂ ಪ್ರದೇಶವೇ `ಕ್ಸಿ್ಜಿಯಾಂ್ ಉಯಿಗು್ ಸ್ವಾಯತ್ತ ಪ್ರದೇಶ.' ಖನಿಜಗಳು ಮತ್ತು ನೈಸರ್ಗಿಕ ಅನಿಲ ಹೇರಳವಾಗಿರುವ ಈ ಪ್ರದೇಶ ಚೀನಾಗೆ ಅಕ್ಷರಶಃ ಚಿನ್ನದ ಗಣಿ. ಈ ಪ್ರದೇಶದಲ್ಲಿ ಅನೇಕ ಪಂಗಡಗಳಿದ್ದು ಈ ಪೈಕಿ ಉಯಿಗು್ ಪಂಗಡದವರೇ ಹೆಚ್ಚಾಗಿದ್ದಾರೆ. ಚೀನಾದಲ್ಲಿ ಅಲ್ಪಸಂಖ್ಯಾತರಾಗಿರುವ ಇವರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. `ವಿಶ್ವ ಉಯಿಗು್ ಕಾಂಗ್ರೆ್' ಎಂಬ ಸಂಘಟನೆ ಈ ಹೋರಾಟದ ನೇತೃತ್ವ ವಹಿಸಿಕೊಂಡಿದೆ. ಇದರ ಅಧ್ಯಕ್ಷ ರೆಬಿಯಾ ಖಾದಿ್. ಇವರು ಅಮೆರಿಕದಲ್ಲಿದ್ದಾರೆ. ಈ ಸಂಘಟನೆಯ ಪ್ರಧಾನ ಕಾರ್ಯದರ್ಶಿಯೇ ಈ ದೋಲ್ಕು್ ಇಸಾ. ಸದ್ಯ ಜರ್ಮನಿಯಲ್ಲಿ ವಾಸವಾಗಿರುವ ಇಸಾ, ಪ್ರಜಾಪ್ರಭುತ್ವದ ಪರ ಹೋರಾಟಗಾರ. 1997ರಲ್ಲಿ ಚೀನಾದಿಂದ ಪಲಾಯನ ಮಾಡಿ ಜರ್ಮನಿಯಲ್ಲಿ ಆಶ್ರಯ ಪಡೆದರು. 2006ರಲ್ಲಿ ಜರ್ಮನಿ ಇವರಿಗೆ ಅಲ್ಲಿನ ಪೌರತ್ವ ನೀಡಿದೆ.
ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ವಿಶ್ವ ಉಯಿಗು್ ಕಾಂಗ್ರೆ್ ಚಟುವಟಿಕೆಗಳನ್ನು ಚೀನಾ ಸರಕಾರ ಉಗ್ರ ಕೃತ್ಯಗಳಂದೇ ಪರಿಗಣಿಸುತ್ತದೆ. ಹೀಗಾಗಿ, ಈ ಹೋರಾಟದಲ್ಲಿ ಪಾಲ್ಗೊಳ್ಳುವವರೆಲ್ಲರೂ ಉಗ್ರರೇ. ಕ್ಸಿ್ಜಿಯಾಂ್ಗೆ ಪೂರ್ವ ತುರ್ಕಿಸ್ತಾನ ಎಂದೂ ಕರೆಯಲಾಗುತ್ತದೆ. ಹಾಗೆ ನೋಡಿದರೆ, ವೀಸಾಗೆ ಸಂಬಂಧಿಸದಂತೆ ಇಸಾ ಇದೇ ಮೊದಲ ಬಾರಿಗೇನೂ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿಲ್ಲ. 2003ರಿಂದಲೇ ದೋಲ್ಕು್ ಚೀನಾದ ಉಗ್ರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಉಯಿಗು್ರ  ಹೋರಾಟಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಡಲು 2008ರಲ್ಲಿ ಬೀಜಿಂ್ನಲ್ಲಿ ನಡೆದ ಒಲಿಂಪಿಕ ಬಹಿಷ್ಕರಿಸುವಂತೆಯೂ ದೋಲ್ಕು್ ಕರೆ ನೀಡಿದ್ದರು. ಇದಕ್ಕೂ ಮುಂಚೆ 2006ರಲ್ಲಿ ತೈವಾ್ಗೆ ೇಟಿ ನೀಡಿ, ಅಲ್ಲಿನ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇದು ಚೀನಾಕ್ಕೆ ಗೊತ್ತಾಗುತ್ತಿದ್ದಂತೆ ಒತ್ತಡ ತಂದು, ತೈವಾ್ ಪ್ರವೇಶವನ್ನು ನಿರಾಕರಿಸುವಂತೆ ಮಾಡಿತು. ಇದೇ ವೇಳೆ, ವಿಶ್ವ ಉಯಿಗು್ ಕಾಂಗ್ರೆ್ನ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ದೋಲ್ಕು್ ಹಿಂದೆ ಸರಿದರೆ ಅವರ ಮೇಲಿರುವ ನಿಷೇಧವನ್ನು ಹಿಂತೆಗದುಕೊಳ್ಳಲಾಗುವುದು ಎಂದೂ ಪ್ರಕಟಿಸಿತು. ಆದರೆ, ದೋಲ್ಕು್ ಇದಾವುದಕ್ಕೂ ಬಗ್ಗದೆ, ಉಯಿಗು್ ಪ್ರತ್ಯೇಕತೆಯ ಹೋರಾಟದ ಮುಂಚೂಣಿಯಲ್ಲೇ ಇದ್ದಾರೆ. ಇಸಾ ಮತ್ತೊಮ್ಮೆ ಇಂಥ ತೊಂದರೆಗೆ ಸಿಕ್ಕಿ ಹಾಕಿಕೊಂಡಿದ್ದು ದಕ್ಷಿಣ ಕೊರಿಯಾಗೆ ಹೋದಾಗ. ಅದು 2009ನೇ ಇಸ್ವಿ. ದಕ್ಷಿಣ ಕೊರಿಯಾದಲ್ಲಿ `ಏಷ್ಯಾ ಪ್ರಜಾಪ್ರಭುತ್ವೀಕರಣ ವಿಶ್ವ ವೇದಿಕೆ'ಯ ಸಮಾವೇಶ ಆಯೋಜನೆಯಾಗಿತ್ತು. ಇದಕ್ಕೆ ಇಸಾ ಕೂಡ ಆಮಂತ್ರಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ದಕ್ಷಿಣ ಕೊರಿಯಾಕ್ಕೆ ತೆರಳುತ್ತಿದ್ದಂತೆ ಅವರನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಈ ಬಗ್ಗೆಯೂ ಇಸಾ ತಮ್ಮ ವಿರೋಧವನ್ನು ದಾಖಲಿಸಿದ್ದರು. ಅಲ್ಲದೆ, ಅ್ರೀಪ್ರಸೆಂಟೆ್ ಆ್ಯಂ್ ಪೀಪ್‌ಸ ಆರ್ಗನೈಷೇ್ ಕೂಡ, ದಕ್ಷಿಣ ಕೊರಿಯಾದ ಕ್ರಮವನ್ನು ಖಂಡಿಸಿತ್ತು. ಇಸಾ ವಿರುದ್ಧ ಚೀನಾ ಮಾಡುತ್ತಿರುವ ಆರೋಪಗಳೆಲ್ಲವೂ ನಿರಾಧಾರ. ಅವರು ಯಾವುದೇ ಉಗ್ರ ಚಟುವಟಿಕೆ ನಡೆಸಿಲ್ಲ ಮತ್ತು ಅಂಥ ಸಂಘಟನೆಗಳ ಜತೆ ಗುರುತಿಸಿಕೊಂಡಿಲ್ಲ ಎಂದು ಹೇಳಿತು. ಎರಡು ದಿನಗಳ ಕಾಲ ದಕ್ಷಿಣ ಕೊರಿಯಾ ವಶದಲ್ಲಿದ್ದ ಇಸಾರನ್ನು ಬಿಡುಗಡೆ ಮಾಡಲಾಯಿತಾದರೂ, ಅವರಿಗೆ ದಕ್ಷಿಣ ಕೊರಿಯಾ ಪ್ರವೇಶಕ್ಕೆ ಅವಕಾಶ ಸಿಗಲೇ ಇಲ್ಲ. ಇದೀಗ ಭಾರತಕ್ಕೆ ಪ್ರವೇಶಿಸುವ ವಿಷಯದಲ್ಲೂ ಇಸಾ ಇಂಥದ್ದೇ ಸಮಸ್ಯೆಯನ್ನು ಎದುರಿಸಿದ್ದಾರೆ.
ದೋಲ್ಕು್ ಇಸಾ ಅವರ ವೈಯಕ್ತಿಕ ಜೀವನದ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ. ಆದರೆ, ಅವರು ವಿದ್ಯಾರ್ಥಿ ದೆಸೆಯಿಂದಲೂ ಹೋರಾಟರರಾಗಿದ್ದರು ಎಂಬುದಂತೂ ಸತ್ಯ. 1980ರ ದಶಕದಲ್ಲಿ ಅವರು ಕ್ಸಿ್ಜಿಯಾಂ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗಲೇ ಪ್ರಜಾಪ್ರಭುತ್ವ ಪರ ಹೋರಾಟಗಳನ್ನು ಸಂಘಟಿಸುತ್ತಿದ್ದರು. ಇದರಿಂದಾಗಿಯೇ ಅವರು ವಿಶ್ವವಿದ್ಯಾಲಯದಿಂದ ಹೊರಬೀಳಬೇಕಾಯಿತು. ಈ ವೇಳೆಯಲ್ಲಿ ಚೀನಾದ ಕಮ್ಯುನಿ್‌ಟ ಶಾಲೆಗಳಲ್ಲಿ ಕಲಿಯುತ್ತಿರುವ ಉಯಿಗು್ ಮಕ್ಕಳಿಗೆ, ಉಯಿಗು್ ಪಂಗಡದ ನಿಜವಾದ ಇತಿಹಾಸ, ಸಂಸ್ಕೃತಿ ತಿಳಿಸುವ ಪುಸ್ತಕಗಳನ್ನ ಹಂಚಲಾರಂಭಿಸಿದರು. ಇದು ಕೂಡ ಅಲ್ಲಿನ ಸರಕಾರದ ಕಣ್ಣು ಕೆಂಪಗಾಗುವಂತೆ ಮಾಡಿತು. ಅವರನ್ನು ಗಡಿಪಾರು ಮಾಡಿದ್ದರಿಂದ ಇಸಾ ಟರ್ಕಿಗೆ ತೆರಳಬೇಕಾಯಿತು. ಅರ್ಧಕ್ಕೆ ನಿಂತಿದ್ದ ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸಲು ನಿರ್ಧರಿಸಿದ ಇಸಾ, ಟರ್ಕಿಯ ಘಾಜಿ ವಿಶ್ವವಿದ್ಯಾಲಯದಿಂದ ಪಾಲಿಟಿಕ ಮತ್ತು ಸೋಸಿಯಾಲಾಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಕಮ್ಯುನಿ್‌ಟ ಸರಕಾರದ ಹತ್ತಿಕ್ಕುವ ಧೋರಣೆಯ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿರುವ ಇಸಾ, ಅಲ್ಪಸಂಖ್ಯಾತ ಉಯಿಗು್ ಮುಸ್ಲಿಮರ ಆಶಾಕಿರಣ. ಇಂದಲ್ಲ ನಾಳೆ, ಕ್ಸಿ್ಜಿಯಾಂ್ ಉಯಿಗು್ ಸ್ವಾಯತ್ತ ಪ್ರದೇಶ ಪೂರ್ವ ತುರ್ಕಿಸ್ತಾನವಾಗಿ ಬದಲಾಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಆದರೆ, ಅದು ಅಷ್ಟು ಸರಳವಲ್ಲ. ಟಿಬೆಟಿಯನ್ನರು ಮತ್ತು ಉಯಿಗು್ರು ಸಮಾನ ದುಃಖಿಗಳು. ಟಿಬೆಟಿಯನ್ನರು ಕೂಡ ಪ್ರತ್ಯೇಕತೆಗಾಗಿ ದಶಕಗಳಿಂದಲೂ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಏಷ್ಯಾದಲ್ಲೇ ಆರ್ಥಿಕ ಬಲಾಢ್ಯ ರಾಷ್ಟ್ರವಾಗಿರುವ ಚೀನಾದಲ್ಲಿ  ಪ್ರಜಾಪ್ರಭುತ್ವದ ಬೀಜಗಳನ್ನು ಬಿತ್ತುವ ಕೆಲಸವನ್ನು ದೋಲ್ಕು್ ಇಸಾ ಸೇರಿದಂತೆ ಕೆಲವರು ಮಾಡುತ್ತಿದ್ದಾರೆ. ಈ ಬೀಜ ಮೊಳಕೆಯೊಡೆಯುತ್ತಿದ್ದಂತೆ ಚೀನಾ ಅದನ್ನು ಹಿಸುಕುವುದರಲ್ಲಿ ಯಶಸ್ವಿಯಾಗುತ್ತದೆ. ವ್ಯಕ್ತಿಗಳನ್ನು ಹತ್ತಿಕ್ಕಬಹುದು. ಆದರೆ ಚಳವಳಿಗಳನ್ನ ಹತ್ತಿಕ್ಕಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ದೋಲ್ಕು್ ಇಸಾರಂಥ ಅನೇಕ ಹೋರಾಟಗಾರರು ಮಹತ್ವದ ವ್ಯಕ್ತಿಗಳು ಎನಿಸಿಕೊಳ್ಳುತ್ತಾರೆ.

This article published in VK on May 1, 2016 Edition

ಸೋಮವಾರ, ಮಾರ್ಚ್ 28, 2016

ಭಾವಕೋಶ ಕಳೆದುಕೊಂಡ ಹೋಳಿಯಾಟ!

ಆಕೆಯ ಕನಸುಗಳನ್ನು ಈಡೇರಿಸುವ ಸೌಭಾಗ್ಯ ನನಗಿಲ್ಲ ಎಂದುಕೊಂಡು ಇಡೀ ದಿನ ಅತ್ತ


- ಪ್ರದ್ಯುಮ್ನ
ಮನೆಯ ಕಿಟಕಿಯಾಚೆ, ಮಕ್ಕಳು ಕೈಯಲ್ಲಿ ಪಿಚಕಾರಿ ಹಿಡಿದು ಒಬ್ಬೊರಿಗೊಬ್ಬರು ಬಣ್ಣ ಎರಚುತ್ತಿದ್ದರು. ಅವರ ಮುಖದಲ್ಲಿ ಸಂತೋಷದ ಹೊನಲು. ಬಣ್ಣದ ಓಕುಳಿಯಾಟದಲ್ಲಿ ಮಿಂದೆದ್ದ ಅವರಿಗೆ ಜಗತ್ತಿನ ಪರಿವೇ ಇರಲಿಲ್ಲ. ಖಾಲಿಯಾದ ಪಿಚಕಾರಿಗಳನ್ನು ಬಣ್ಣದ ನೀರು ತುಂಬಿದ್ದ ಕ್ಯಾ್ಗಳಲ್ಲಿ ಅದ್ದಿ ಮತ್ತೆ ಓಡುತ್ತಿದ್ದರು. ಒಬ್ಬೊರ ಮೈ ಮೇಲೆ ಒಬ್ಬರು ಬೀಳುತ್ತಿದ್ದರು, ಏಳುತ್ತಿದ್ದರು. ಮುಖದ ತುಂಬ ಬಣ್ಣ ಬಣ್ಣದ ಭಾವ. ಕೇಕೆ ನಲಿವುಗಳಿಗೆ ಮಿತಿಯೇ ಇಲ್ಲದ ಕ್ಷಣಗಳವು. ಹೋಳಿಯಾಟವೇ ಅಂಥದ್ದು. ಬಣ್ಣಗಳ ಜತೆಗಿನ ಸಂವಹನ ನಿಮ್ಮನ್ನು ಅನುಭೂತಿಯ ಸಾಂಗತ್ಯಕ್ಕೆ ಕೊಂಡೊಯ್ಯುತ್ತದೆ. ಬಣ್ಣಗಳೇ ಹಾಗೆ, ನಿಮ್ಮ ನೆನಪುಗಳ ಪುಟ್ಟ ಗೂಡನ್ನು ಹೊಕ್ಕು, ಬೆಚ್ಚಿಗೆ ಕುಳಿತಿದ್ದ ನೆನಪುಗಳಿಗೆ ರೆಕ್ಕೆ ಕಟ್ಟುತ್ತುದೆ, ಗರಿ ಬಿಚ್ಚಿ ಹಾರಾಡಲು ಪ್ರೇರೇಪಿಸುತ್ತದೆ. ಬಣ್ಣ ಬಿಂಬಿಸುವ ಭಾವಗಳೇ ನೂರಾರು. ಪ್ರತಿ ಬಣ್ಣವೂ ಸಂಕೇತಿಸುವ ಅದರದ್ದೇ ಆದ ಭಾವನಾಲೋಕ. ಆದರೆ, ಈ ಬಿಳಿ ಬಣ್ಣವಿದೆಯಲ್ಲ ಅದು ಮಾತ್ರ ನನ್ನನ್ನು ಇಂದಿಗೂ ಕಾಡುತ್ತಲೇ ಇದೆ. ಅವಳು ಆ ಬಣ್ಣದ ಸೀರೆಯುಟ್ಟು ಎದುರಾದಾಗಲೆಲ್ಲ ನನ್ನ ಎದೆಯಲ್ಲಿ ನೋವುಗಳ ಕಂಪನ, ಅವಳ ಮುಖ ನೋಡಲು ಧೈರ್ಯವೂ ಸಾಲದು. ವಿಪರ್ಯಾಸ ಎಂದರೆ, ಆಕೆ ಎಂದೂ ಬಿಳಿ ಬಣ್ಣ ಇಷ್ಟಪಟ್ಟವಳಲ್ಲ. ಅವಳಿಗೆ ತಿಳಿ ನೀಲಿ, ಎಂದರೆ ಎಲ್ಲಿಲ್ಲದ ಇಷ್ಟ. ಅದು ಆಕಾಶದ ಬಣ್ಣ. ಆಕಾಶ ಎಂದರೆ ಮಿತಿ ಇಲ್ಲದ್ದು. ಆಕೆಯ ಕನಸು, ಮಹತ್ವಾಕಾಂಕ್ಷೆಗೂ ಇರಲಿಲ್ಲ ಎಲ್ಲೆ. ಆಕಾಶದಂತೆ ಸ್ವಚ್ಛಂದವಾಗಿ ಇರಬೇಕು ಎಂದುಕೊಂಡವಳು. ಆದರೆ, ಜೀವನದಲ್ಲಿ ನಾವು ಅಂದುಕೊಂಡಂತೆ ಏನೂ ನಡೆಯುವುದಿಲ್ಲವಲ್ಲ. ಅದು ಆಕೆಗೂ ಗೊತ್ತಿತ್ತು. ಆದರೆ ಕನಸು ಕಾಣುವುದು ಬಿಟ್ಟಿರಲಿಲ್ಲ. ತನ್ನೆಲ್ಲ ಕನಸುಗಳನ್ನು ನನ್ನ ಜತೆ ಹಂಚಿಕೊಂಡಿದ್ದಳು. ಆಕಾಶವನ್ನು ಹುಚ್ಚು ರೀತಿಯಲ್ಲಿ ಇಷ್ಟಪಡುತ್ತಿದ್ದ ಅವಳು, ಗಗನ ಸಖಿಯಾಗಿ ದಿನವೆಲ್ಲ ಆಕಾಶದಲ್ಲಿ ಹಾರಾಡುತ್ತ, ದೇಶದಿಂದ ದೇಶಕ್ಕೆ ಸುತ್ತತ್ತಲೇ ಇರಬೇಕೊ ಕಣೋ ಎಂದು ದೊಡ್ಡದಾಗಿ ನಗುತ್ತಿದ್ದಳು.
ನನ್ನ ಅವಳ ಗೆಳೆತನ ತುಂಬ ಹಳೆಯದ್ದು. ಅಂದರೆ, ನಾವಿಬ್ಬರೂ ಒಟ್ಟಾಗಿಯೇ ಓದುತ್ತಿದ್ದೆವು. ನಮ್ಮ ನಡುವಿನ ಸಂಬಂಧಕ್ಕೆ ಹೆಸರೇ ಇರಲಿಲ್ಲ. ನೀವು ಅದನ್ನು ಯಾವುದೇ ಸಂಬಂಧದ ಚೌಕಟ್ಟಿಗೆ ಕಟ್ಟಿ ಹಾಕಲು ಸಾಧ್ಯವಿರಲಿಲ್ಲ. ಯಾವುದೇ ಸಂಬಂಧದ ಹೆಸರು ಹೇಳಿದರೂ ಅದನ್ನು ಮೀರಿದ ಅನುಬಂಧ ನಮ್ಮಿಬ್ಬರದ್ದು. ಆದರೆ, ಆಕೆಯ ಕುಟುಂಬ ಮಾತ್ರ ತುಂಬ ತುಂಬ ಟ್ರೆಡೀಷನ್. ಸಂಪ್ರದಾಯಸ್ಥ ಕುಟುಂಬದಲ್ಲಿ ಈಕೆ ಕಾಣುವ ಕನಸುಗಳಿಗೆ ಬೆಲೆ ದೊರೆಯುತ್ತಾ ಎಂದು ಒಂದೊಂದು ಸಾರಿ ನನಗೆ ಭಯವಾಗುತ್ತಿತ್ತು. ಆದರೆ ಆಕೆಗೆ ಹುಂಬ ಧೈರ್ಯ. ತಾನು ಅಂದುಕೊಂಡಿದ್ದನ್ನು ಸಾಧಿಸಿಯೇ ತೀರುತ್ತೇನೆಂಬ ಹುಚ್ಚು ಭರವಸೆ. ಆಕೆಯ ಇಷ್ಟಪಟ್ಟಿದ್ದೆಲ್ಲ ನೆರವೇರಲಿ ಎಂಬ ಸಣ್ಣ ಪ್ರಾರ್ಥನೆ ನನ್ನಿಂದ. ನಮ್ಮಿಬ್ಬರ ನಡುವಿನ ಸಲುಗೆ ಬೇರೆಯವರ ಕಣ್ಣಿಗೆ ಕುಕ್ಕುತ್ತಿತ್ತು. ಕಣ್ಣು ಕುಕ್ಕಿಸಿಕೊಂಡವರು ಸುಮ್ಮನಿದ್ದಾರೆಯೇ? ಏನು ಆಗಬೇಕಿತ್ತೋ.. ಅದೇ ಆಯ್ತು. ನಮ್ಮಿಬ್ಬರ ನಿರ್ವಾಜ್ಯ ಗೆಳತನಕ್ಕೆ ಕಲ್ಲು ಹಾಕುವ ಕೆಲಸವಾಗಿತ್ತು. ಹೀಗಿದ್ದಾಗ್ಯೂ.. ಕಾಲೇ್ನಲ್ಲಿ ನಾನು ಆಕೆ ಒಟ್ಟೊಟ್ಟಿಗೆ ಇರುತ್ತಿದ್ದೆವು. ಅದೊಂದು ದಿನ ಏನು ಆಯ್ತೋ ಗೊತ್ತಿಲ್ಲ. ಲೈಬ್ರರಿಯಲ್ಲಿ ಕೂತಿದ್ದವನ್ನು ಹೊರಗೆ ಕರೆ ತಂದು, ``ನನ್ನನ್ನು ಮದುವೆ ಆಗ್ತಿಯಾ? ನಿನ್ನ ಜತೆಗಿದ್ದರೆ ನನ್ನ ಕನಸೆಲ್ಲ ಈಡೇರುತ್ತದೆ,'' ಎಂದು ಒಂದೇ ಸವನೆ ಅಳಲಾರಂಭಿಸಿದಳು. ಎಂದೂ ಆ ರೀತಿಯಲ್ಲಿ ಯೋಚಿಸದ ನನಗೆ ಏನು ಹೇಳಬೇಕೋ... ಏನು ಹೇಳಬಾರದೋ ಒಂದು ಗೊತ್ತಾಗಲಿಲ್ಲ. ಆಕೆಯ ಕಣ್ಣೀರು ಮಾತ್ರ ಧಾರಾಕಾರವಾಗಿದೆ. ``ನೀನು ಮೊದಲು ಅಳುವುದನ್ನು ನಿಲ್ಲಿಸು,'' ಎಂದು ಸಂತೈಸಿದೆ. ನಮ್ಮಿಬ್ಬರ ಸಂಬಂಧಕ್ಕೆ ಹೊಸ ಅರ್ಥ, ಹೆಸರು ಕೊಡಬೇಕೆಂದು ನಿರ್ಧರಿಸಿಕೊಂಡೇ ಬಂದವಳಂತೆ ಕಾಣುತ್ತಿತ್ತು ಆಕೆ. ಆದರೆ, ನನಗೆ ಮಾತ್ರ ಆಕೆ ಹೀಗೇಕೆ ಒಮ್ಮಿಂದೊಮ್ಮೆ ಈ ರೀತಿ ಹೇಳುತ್ತಿದ್ದಾಳೆ ಎಂದು ಗೊಂದಲ. ಸ್ವಲ್ಪ ಹೊತ್ತಿನ ಬಳಿಕ ಸುಧಾರಿಸಿಕೊಂಡು, ಆಕೆ ಎಲ್ಲ ಹೇಳಿದಳು. ``ನೋಡೋ.. ನಾನು ಏನೆಲ್ಲ ಕನಸುಗಳನ್ನು ಇಟ್ಟುಕೊಂಡಿದ್ದೇನೆ. ಹೇಗೆಲ್ಲ ಬದುಕು ಕಟ್ಟಿಕೊಳ್ಳಬೇಕು ಎಂದುಕೊಂಡಿದ್ದೇನೆ. ಆದರೆ, ನಮ್ಮ ಮನೆಯಲ್ಲಿ ಮಾತ್ರ ಮದುವೆ ಮಾಡಿಕೊಡಲು ನಿರ್ಧರಿಸಿದ್ದಾರೆ. ನನ್ನ ಅತ್ತೆಯ ಮಗನಿಗೆ,'' ಎಂದವಳೇ ಮಾತು ಹೊರಡಲಾರದೆ ಮತ್ತೆ ಅಳುವಿಗೆ ಶರಣಾದಳು. ಈಗ ನನಗೆಲ್ಲ ಅರ್ಥವಾಗಿತ್ತು. ಬಹುಶಃ ಈಕೆಯ ಗಗನಸಖಿಯಾಗಿ ಆಕಾಶದಲ್ಲಿ ಹಾರಾಡುತ್ತ, ದೇಶ ದೇಶ ಸುತ್ತುವ ಆಸೆ ಮತ್ತು ನನ್ನೊಂದಿಗಿನ ಈ ಒಡನಾಟವೇ ಆಕೆಯ ಮನೆಯವರು ಇಂಥ ನಿರ್ಧಾರಕ್ಕೆ ಬರಲು ಕಾರಣ. ಆದರೆ ನಾನು ನಿಜವಾಗಲೂ ಆಕೆಯ ಆಸೆ ಆಕಾಂಕ್ಷೆಗಳನ್ನು ಈಡೇರಿಸಬಲ್ಲೆನಾ? ಅಂಥ ಶಕ್ತಿ ನನಗಿದೆಯಾ? ನನ್ನ ಜೀವನವೇ ಇನ್ನೂ ಒಂದು ಹಂತಕ್ಕೆ ಬರಬೇಕು. ಇದರ ಮಧ್ಯೆಯೇ ಆಕೆಯ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳಲು ಶಕ್ತನಾ? ಎಲ್ಲಕ್ಕಿಂತ ಹೆಚ್ಚಾಗಿ ನಾನು ಅವಳನ್ನು ಪ್ರೀತಿಸುತ್ತಿದ್ದೇನಾ.. ಹೀಗೆ ನಾನಾ ಪ್ರಶ್ನೆಗಳು ತಲೆಯಲ್ಲಿ ಓಡಲಾರಂಭಿಸಿದ್ದವು. ನಾನು ಕೇಳಿಕೊಂಡ ಆ ಕೊನೆಯ ಪ್ರಶ್ನೆ ಮಾತ್ರ ತುಸು ಹೊತ್ತು ಯೋಚಿಸುವಂತೆ ಮಾಡಿತು.  ಆಕೆಯೆಡೆಗೆ ನನ್ನಲ್ಲಿರುವ ಭಾವ ಪ್ರೀತಿಯದ್ದಾ.. ಬರೀ ಗೆಳೆತನದ್ದಾ..? ಹೀಗೆ ಪೂರ್ತಿ ಕ್ಪ್ಯೂಷ್. ಯಾವುದನ್ನು ನಿರ್ಧರಿಸಲಿಕ್ಕಾಗದ ಕ್ಷಣಗಳು ಅವು. ``ನನಗೆ ಒಂದಿಷ್ಟು ಸಮಯ ಕೊಡು. ಯೋಚಿಸಿ ಹೇಳುತ್ತೇನೆ,'' ಎಂದು ಆಕೆಯನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಿಕೊಟ್ಟೆ.
ಮನೆಗೆ ಹೋದವನಿಗೆ ತಲೆ ತುಂಬ ಇದೇ ವಿಚಾರಗಳ ಸಂಘರ್ಷ. ಕೊನೆಗೂ ಒಂದು ನಿರ್ಧಾರಕ್ಕೆ ಬಂದೆ. ಹೌದು... ನಾನು ಅವಳನ್ನು ಇಷ್ಟಪಡುತ್ತೇನೆ. ಆದರೆ, ಅದಕ್ಕೊಂದು ರೂಪವಿರಲಿಲ್ಲ ಅಷ್ಟೆ. ಅವಳೇ ಅದಕ್ಕೊಂದು ಸ್ಪಷ್ಟವಾದ ರೂಪ ಕೊಟ್ಟಿದ್ದಾಳೆ. ಇನ್ನೇನು ಕಾಲೇ್ ಮುಗಿಯುವ ಹಂತದಲ್ಲಿದೆ. ಒಂದಿಷ್ಟು ಕಷ್ಟಪಟ್ಟರೆ ಒಳ್ಳೆಯ ಕೆಲಸ ಪಡೆಯುವ ಸಾಮರ್ಥ್ಯ ನನ್ನಲ್ಲಿದೆ. ಆಕೆಯ ಕನಸು ಈಡೇರಿಸುವಷ್ಟು ಸಶಕ್ತನಾಗಬಲ್ಲೆ. ನಮ್ಮಿಬ್ಬರ ನಡುವಿನ ಈ ನಿರ್ವಾಜ್ಯ ಸಂಬಂಧಕ್ಕೆ ಒಂದು ಅರ್ಥ ಹೊಳೆಯುತ್ತಿದೆ. ಅದಕ್ಕೊಂದು ಚೌಕಟ್ಟು ವಿಧಿಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎನಿಸುತ್ತದೆ ಎಂದು ನಿರ್ಧರಿಸಿಕೊಂಡೆ.
ಆದರೆ, ವಿಧಿಯಾಟ ಬೇರೆ ಇತ್ತು. ನನ್ನ ನಿರ್ಧಾರ ತಿಳಿಸಲು ನಾಲ್ಕೈದು ದಿನ ತೆಗೆದುಕೊಂಡೆ. ಕೊನೆಗೆ, `ನಿನ್ನೊಂದಿಗೆ ಹೆಜ್ಜೆ ಹಾಕಲು ನಾನು ಸಿದ್ಧ' ಎಂಬ ವಾಕ್ಯವನ್ನು ಆಕೆಯ ಮುಂದೆ ಕಣ್ಣುಮ್ಚುಚಿಕೊಂಡು ಹೇಳಬೇಕೆಂದುಕೊಂಡು ಕಾಲೇ್ಗೆ ಬಂದೆ. ಆದರೆ ಅಲ್ಲಿ ಆಕೆಯಿಲ್ಲ. ಒಂದು ವಾರವಾದರೂ ಆಕೆ ಕಾಲೇ್ನತ್ತ ಸುಳಿಯತ್ತಲೇ ಇಲ್ಲ. ಎಲ್ಲಿ ಹೋದಳು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆಕೆಯ ಮನೆಗೆ ಹೋಗಿ ಕೇಳುವಷ್ಟು ಧೈರ್ಯ ನನ್ನಲ್ಲಿ ಇರಲಿಲ್ಲ. ಕೊನೆಗೂ ಗೊತ್ತಾಯಿತು. ಆಕೆಯನ್ನು ಬೇರೆ ಊರಿಗೆ ಕರೆದುಕೊಂಡು ಹೋಗಿದ್ದಾರೆ. ಮುಂದಿನ ವಾರದಲ್ಲಿ ಮದುವೆ ಇದೆ ಎಂಬ ಮಾಹಿತಿ. ಅಲ್ಲಿಗೆ ಸ್ಪಷ್ಟವಾಗಿತ್ತು. ಇನ್ನು ಆಕೆ ನನಗೆ ಸಿಗಲ್ಲ. ಆಕೆಯ ಕನಸುಗಳನ್ನು ಈಡೇರಿಸುವ ಸೌಭಾಗ್ಯ ನನಗಿಲ್ಲ ಎಂದುಕೊಂಡು ಇಡೀ ದಿನ ಅತ್ತೆ. ಆದರೆ, ಜೀವನ ಮುಂದೆ ಹೋಗಬೇಕಲ್ಲ. ದಿನಗಳು ಉರುಳಿದವು, ವರ್ಷವೂ ಕಳೆಯಿತು. ಅಂದೂ ಹೋಳಿ ಇತ್ತು. ಎಲ್ಲೆಲ್ಲೂ ಬಣ್ಣಗಳ ರಂಗೋಲಿ. ಅಂದು ಹೀಗೆಯೇ ಮಕ್ಕಳ ಹೋಳಿಯಾಟ ನೋಡುತ್ತ ನಿಂತಿದ್ದವನಿಗೆ ಎದುರಾದವಳು ಅವಳೇ. ಅರೇ ಏನಾಯಿತು...? ಹೇಗಿದ್ದವಳು ಹೇಗಾಗಿದ್ದಾಳೆ. ಬಿಳಿ ಬಣ್ಣ ಕಂಡರೆ ಆಗದವಳು ಅದೇ ಬಣ್ಣದ ಸೀರೆ ಉಟ್ಟುಕೊಂಡಿರುವುದ್ಯಾಕೆ? ಛೇ ಅವಳ ಜೀವನದಲ್ಲಿ ಏನೆಲ್ಲ ಅನಾಹುತಗಳಾಗಿರಬಹುದು. ಅವಳ ಕನಸುಗಳಿಗೆ ಕೊಳ್ಳಿ ಇಟ್ಟವರಾರು ಎಂದು ಅವಳನ್ನೇ ಕೇಳಬೇಕು ಎಂದುಕೊಂಡೆ. ಆದರೆ, ಆಕೆ ಮಾತ್ರ, ನಾನು ಪರಿಚಯ ಇಲ್ಲದವನಂತೆ, ನೋಡಿಯೋ ನೋಡಿದಂತೆ ಹೊರಟೇ ಹೋದಳು. ಆಕೆಯ ಮುಖದಲ್ಲೀಗ ಭಾವಗಳಿಲ್ಲ. ಕಣ್ಣುಗಳಲ್ಲಿ ಕನಸುಗಳಿಲ್ಲ. ನಿರ್ಭಾವುಕತೆಯನ್ನು ಹೊದ್ದುಕೊಂಡವಳಂತಿದ್ದಾಳೆ. ಆಕೆಯನ್ನು ನೋಡಿದ ಮೇಲೆ ತಪ್ಪಿತಸ್ಥ ಭಾವ ನನ್ನದು. ಈಗ ಹೋಳಿಗಳು ನನ್ನ ಪಾಲಿಗೆ ಅರ್ಥ ಕಳೆದುಕೊಂಡಿವೆ. ಎಲ್ಲ ಬಣ್ಣಗಳ ನಡುವೆಯೂ ಬಿಳಿ ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಆಕೆಯ ಬಾಳಿನಲ್ಲಿ ಬಣ್ಣ ಬಣ್ಣಗಳ ಚಿತ್ತಾರ ಬಿಡಿಸಬೇಕಿತ್ತು ನಾನು. ಅವಳ ಇಂದಿನ ಪರಿಸ್ಥಿತಿಗೂ ನಾನು ಕೂಡ ಕಾರಣ ಎಂದು ನೆನಪಾದಾಗಲೆಲ್ಲ ಕಣ್ಣು ತೇವವಾಗುತ್ತದೆ.
ಮೇರೆ ಲಿಯೇ ತುಮ್ಹಾರಿ ಯಾದೇ ಹೀ ಕಾಫೀ ಹೈ
ಮೊಹಬ್ಬ್ ಮೇ ಜರೂರಿ ಮುಲಾಖ್ ನಹೀ
--------------------
Published in VK on 28th March 2016 edition

ಮಂಗಳವಾರ, ಮಾರ್ಚ್ 22, 2016

ಕವಿತೆ

ಕವಿತೆ ನನ್ನೊಳಗಿನ
ಕಾಣದ ಕಡಲಿನ ಹುಡುಕಾಟ
ಭಾವಗಳ ಜತೆ ಚೆಲ್ಲಾಟ
ಎಲ್ಲೆ ಮೀರಿದ ಮೌನದ ಚೀರಾಟ
ಮಾತು ಮೌನವಾಗಿ,
ಮೌನ ಮಾತಾಗುವ ಹೊತ್ತಲ್ಲಿ
ಮೆಲ್ಲನೆ ಉಸಿರು ಪಿಸುಗುಟ್ಟುವ ಕ್ಷಣವೇ ಕವಿತೆ

ಸೋಮವಾರ, ಫೆಬ್ರವರಿ 15, 2016

ಪ್ರೇಮೋದ್ಯಾನ ಸೀಳಿದ ಆ ಮೆಟ್ರೋ ಮಾರ್ಗ!

ಬೆಂಗಳೂರೆಂಬ ಮಹಾನಗರದಲ್ಲಿ ಪಾಕ ಬರ? ಅದಕ್ಕೆ ಅಲ್ಲವೇ ಇದಕ್ಕೆ `ಉದ್ಯಾನನಗರಿ' ಎಂಬ ಅಡ್ಡ ಹೆಸರು. ಈ ಪಾಕ ಬೆಳಗ್ಗೆಯಿಂದ ರಾತ್ರಿಯವರೆಗೂ  ಮಕ್ಕಳಿಂದ ಹಿಡಿದು ವಯಸ್ಸಾದವರೂ ಇರುತ್ತಾರೆ; ಬರುತ್ತಾರೆ, ಹೋಗುತ್ತಾರೆ. ಯಾವುದೋ ಕನಸುಗಳನ್ನು ಕಟ್ಟಿಕೊಂಡು, ದೂರದ ಊರಿನಿಂದ ಬರುವ ಅಬ್ಬೇಪಾರಿಗಳಿಗೂ ಇದೇ ಆಶ್ರಯ; ನಿರ್ಗತಿಕರಿಗೂ ಇದುವೆ ಅರಮನೆ. ಬಣ್ಣ ಬಣ್ಣದ ಕನಸುಗಳನ್ನು ಕಾಣುವವರಿಗೆ ಹುಲ್ಲಿನ ಹಾಸುಗೆ.., ವೃದ್ಧಾಪ್ಯದಲ್ಲಿ ಯೌವನದ ಮೆಲಕು ಹಾಕುವವರಿಗೆ ಸಿಟ್ಟಿಂ್ ಪಾಯಿಂ್... ಜೀವನದ ಜಂಜಾಟಕ್ಕೆ ಬೇಸತ್ತು ಸ್ವಲ್ಪ ಹೊತ್ತು ಕುಳಿತು ಹೋಗುವವರಿಗೆ ವಿರಾಮ ತಾಣ... ಬೊಜ್ಜು ಕರಗಿಸಿಕೊಳ್ಳುವವರಿಗೆ ವಾಕಿಂ್ ಟ್ರ್ಯಾಕ ಇವರ ಮ`್ಯೆಯೇ ಮೈಗೆ ಮೈ ತಾಕಿಸಿಕೊಂಡು, ಒಬ್ಬರ ಉಸಿರು ಮತ್ತೊಬ್ಬರಿಗೆ ಬಿಸಿಯಾಗುವಷ್ಟು ಹತ್ತಿರ ಕುಳಿತುಕೊಳ್ಳುವ ಪ್ರೇಮಿಗಳಿಗೆ ಲವ್ ಸ್ಪಾ್... ಆಗಾಗ ಪಾಕ ನಿರ್ವಾಹಕರು ಬಂದು ಕಾಟು ಕೊಡುವುದು ಬಿಟ್ಟರೆ ಎಲ್ಲವೂ ನಿತ್ಯ ಹರಿದ್ವರ್ಣ. ಎಲ್ಲರಿಗೂ ಒಂದಲ್ಲ ರೀತಿಯಲ್ಲಿ ತನ್ನ ನೆರವಿನ ಬಾಗಿಲು ಓಪ್ ಮಾಡಿಕೊಂಡಿರುವ ಉದ್ಯಾನಗಳು ಅದೆಷ್ಟೋ ಈ ಮಾಯಾನಗರಿಯಲ್ಲಿ.
ಈ ಉದ್ಯಾನವೂ ಅಷ್ಟೇ. ತುಂಬ ಚಿಕ್ಕದೂ ಅಲ್ಲ; ತುಂಬ ದೊಡ್ಡದು ಅಲ್ಲ. ರೋಡಿಗೆ ಅಂಟಿಕೊಂಡಿರುವ ಈ ಪಾಕ ಹಕ್ಕಿಗಳ ಕಲರವ.. ಅದನ್ನು ಸೀಳುವ ವಾಹನಗಳ ಕರ್ಕಶ ಹಾರ್ನು. ಅಂದು ಹಾಗೆಯೇ ಆಗಿತ್ತು. ಬೆಳ್ಳಂಬೆಳಗ್ಗೆ ಎದ್ದು, ಇದ್ದ ಡ್ರೆ್ಗಳಲ್ಲಿ ನೀಟಾಗಿರುವ ಪ್ಯಾಂಟು, ಶರ್ಟು ಹಾಕ್ಕೊಂಡು ಆ ಪಾಕ ಮುಂದೆ ಬಂದು ನಿಂತವನಿಗೆ, ಆರ್ಕು್ನಲ್ಲಿ ಪರಿಚಯವಾಗಿ, ಮೇ್ನಲ್ಲಿ ಚಾಟಿಂ್ ಮಾಡಿಕೊಂಡು, ಮೊಬೈ್ ನಂಬ್ಗಳು ಎಕ್ಸೆಂ್ ಆದ ಮೇಲೆ, ಗಂಟೆಗಟ್ಟಲೇ ಹರಟೆ ಹೊಡ್ಕೊಂಡು, ಒಂದು ರೇಂಜಿಗೆ ಇಬ್ಬರು ಲ್ ಮಾಡಿಕೊಂಡು ಅಥವಾ ಹಾಗೆ ಅನ್ನಕೊಂಡಿದ್ದೆವು ನಾವು. ಅಂದು ಅವಳು ಕಡುಕಪ್ಪು ನೀಲಿ ಬಣ್ಣದ ಜೀ್‌ಸ ತೊಟ್ಟು, ಅದರ ಮೇಲೊಂದು ಕಂದು ಬಣ್ಣದ ಜುಬ್ಬಾ ತರಹದ್ದು ಟಾ್ ಹಾಕ್ಕೊಂಡು ಬಂದವಳ ಕೈಯಲ್ಲಿ ಇನ್ನೇನೂ ಮೂಲೆ ಸೇರಲೇಬೇಕಾದ ಸ್ಥಿತಿಯಲ್ಲಿದ್ದ ಮೊಬೈ್ ಫೋ್ ಇತ್ತು. ಅವಳು ಬರುತ್ತಿದ್ದನ್ನು ದೂರದಿಂದಲೇ ನೋಡಿದ ನನ್ನೆದೆಯೊಳಗೆ ಖಾರ ಕುಟ್ಟುವ ಮಷೀ್ನ ಸೌಂಡು. ಏನೋ ಒಂಥಾರ ಹೆದರಿಕೆ, ತಳಮಳ; ಅರೆ... ಫೋ್ನಲ್ಲಿ ಸರಿ ರಾತ್ರಿ ಮಾತಾಡಿಕೊಂಡರೂ ಆಗದ ಈ ಅವಸ್ಥೆ ಎದುರಿಗೆ ಬರುತ್ತಿದ್ದವಳನ್ನು ನೋಡಿದ ಕೂಡಲೇ ಯಾಕೆ? ಅದಕ್ಕೆ ಇರಬೇಕು, ಫೇ್ಬುಕ ಮೇ್ ಚಾ್ಗಳಲ್ಲಿ ಫ್ರೆಂ್ಶಿ್ ಸುಲ`. ಅದೇ ಮುಖ ಎದುರಾದಾಗ ಮಾತನಾಡಲು ಪದಗಳೇ ಸಿಗುವುದಿಲ್ಲ; ಚಾ್ನಲ್ಲಿ ಮಾತುಗಳಿಗೆ ಬರವೇ ಇರುವುದಿಲ್ಲ. ಏನಾಗುತ್ತಿದೆ ಎನ್ನುವಷ್ಟರಲ್ಲಿ ನನ್ನ ಮುಂದೆ ಬಂದವಳೇ ``ಆ್ ಯೂ ಪ್ರದ್ಯುಮ್ನ..?'' ಎಂದು ಕತ್ತು ಕೊಂಕಿಸಿ ಕೇಳಿದವಳಿಗೆ, ಹಂ.. ಹಂ.. ತಡಬಡಾಯಿಸುತ್ತಲೇ ಎಂದೆ. ನನಗಾದ ತಳಮಳ, ಹೆದರಿಕೆ ಅವಳಿಗಾಗುತ್ತಿತ್ತಾ? ಗೊತ್ತಿಲ್ಲ. ಒಂದು ವೇಳೆ ಆಗುತ್ತಿದ್ದರೂ ಅವಳು ಅಂದು ತೋರಿಸಿಕೊಳ್ಳಲಿಲ್ಲ ಅನ್ನಿಸುತ್ತದೆ. ಪಾಕ ಆ ಮೇ್ ಗೇ್ನಿಂದ ಒಳಗೆ ಹೊರಟವರಿಗೆ ಎಡ -ಬಲದಲ್ಲಿ ಯಾರಿದ್ದಾರೆಂಬ ಅರಿವು ನನಗೆ ಇರಲಿಲ್ಲ. ಅವಳೇನೂ ಅಂಥ ಅಪೂರ್ವ ಸುಂದರಿಯಲ್ಲದಿದ್ದರೂ ಕೃಷ್ಣ ಸುಂದರಿ. ತುಸು ಕಪ್ಪನೆ ಮುಖದಲ್ಲಿ ಬೆಳ್ಳನೆಯ ಕೊಳದಂಥ ಕಣ್ಣಿಗೆ ಹಚ್ಚಿದ್ದ ಕಾಡಿಗೆ ತುಸು ಹೆಚ್ಚೇ ಅವಳ ಸೌಂದರ್ಯ ಹೆಚ್ಚಿಸಿತ್ತು. ಅವಳ ನಡಿಗೆಯಲ್ಲಿ ಅಂಥ ಅವಸರವೇನೂ ಇರಲಿಲ್ಲ. ನಿ`ಾನವಾಗಿ, ನಾಜೂಕಾಗಿ ಹೆಜ್ಜೆ ಹಾಕುತ್ತಿದ್ದವಳನ್ನು ಹಿಂಬಾಲಿಸುತ್ತಿದ್ದೆ, ಪಾಕ ತುಸು ದೂರ ಹೋಗುತ್ತಿದ್ದಂತೆ ಖಾಲಿಯಾದ ಬೆಂ್ ಕಾಣಿಸಿತು. ಅದನ್ನು ತೋರಿಸಿ, ``ಕುಳಿತುಕೊಳ್ಳೋಣವಾ?'' ಎಂದವಳೇ ನನ್ನ ಉತ್ತರಕ್ಕೂ ಕಾಯದೇ ಕೂತೇ ಬಿಟ್ಟಳು. ಅವಳ ಪಕ್ಕದಲ್ಲೇ ಕುಳಿತುಕೊಳ್ಳಲೇ  ಮಂಗ್ಯಾ... ಅಂತಾ ಒಂದು ಮನಸ್ಸು ಹೇಳಿದರೆ, ಮತ್ತೊಂದು ಮನಸ್ಸು, ಲೋ... ಹಾಗೇನಾದರೂ ಕುತ್ಕೊಂಡ್ರೆ ಇ್ಡಿಸೆಂ್ ಫೆಲೋ ಅಂದ್ಕೊಂಡು ಬಿಟ್ಟಾಳು. ಬೆಂಚಿನ ಆ ತುದಿಯಲ್ಲಿ ಕುತ್ಕೊ ಎನ್ನುತ್ತಾ ಎರಡು ಮನಸ್ಸುಗಳು ಸಂಘರ್ಷಕ್ಕಿಳಿಯುತ್ತಿರುವಾಗಲೇ ಆಕೆ, ನನ್ನ ಕೈ ಹಿಡಿದು... ಬಾ ಕುತ್ಕೊ ಎಂದು ಜಗ್ಗಿ ಕುಳ್ಳರಿಸಿದಳು. ಅರೆ.. ಏನಾಗುತ್ತಿದೆ? ನಾನು ಪೂರ್ತಿ ಅವಳ ಅಣತಿಯಂತೆ ನಡೆದುಕೊಳ್ಳುತ್ತಿದ್ದೇನಾ? ಅವಳಿಗೆ ಶರಣಾಗಿ ಬಿಟ್ದಿದ್ದೀನಾ? ಎಲ್ಲಿ ಕುತ್ಕೊಬೇಕು ಎನ್ನುವ ಅವಕಾಶದ ಆಯ್ಕೆಯೂ ನನಗಿಲ್ಲವಲ್ಲಾ ಎಂಬ ಯೋಚನೆಯಲ್ಲಿ ಮುಳುಗಿರುವಾಗಲೇ, ಹಾಂ.., ಮತ್ತೆ ಎಂದು ಮಾತು ಶುರು ಮಾಡಿದಳು. ``ಫೋ್ನಲ್ಲಿ ಅಷ್ಟೊಂದು ಲೀಲಾಜಾಲವಾಗಿ ಮಾತಾಡೋನು, ಇವತ್ತು ಯಾಕೆ ಒಳ್ಳೆ ಮೂಗನ ತರಹ ಆಡ್ತಿದ್ದೀಯಾ? ಮಾತಾಡು,'' ಎಂದವಳ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದೆ. ಆದರೆ ಬಹಳ ಹೊತ್ತಿನವರೆಗೆ ಹಾಗೆ ನೋಡುವುದು ನನ್ನಿಂದಾಗಲಿಲ್ಲ. ಆದಷ್ಟು ನಮ್ಮಿಬ್ಬರ ನಡುವಿನ ದೃಷ್ಟಿ ಯುದ್ಧವನ್ನು ತಪ್ಪಿಸಲು ಯತ್ನಿಸುತ್ತಿದ್ದೆ. ಅವಳಿಗೆ  ನನ್ನ ಮೊದಲನೆ ಬಾರಿಗೆ ನೋಡುತ್ತಿದ್ದೆನೆಂಬ ಯಾವ ಉದ್ವೇಗ, ಉನ್ಮಾದ, ತಳಮಳ ಇದ್ದಂತಿರಲಿಲ್ಲ; ನನಗಿತ್ತು.
ನಾವಿದ್ದ ಬೆಂ್ನತ್ತಲೇ ಒಬ್ಬ ಹೆಂಗಸು, ಬಗಲಲ್ಲಿ ಮಗುವನ್ನು ಎತ್ತಿಕೊಂಡು ಬಂದವಳೇ, ``ಅಣ್ಣಾ.. ನಿ್ ಜೋಡಿ `ಾಳ ಚಲೋ ಐತಿ, ನೀವು ಲಗ್ನಾ ಆಗ್ತೀರಿ. ಆ ಎಲ್ಲವ್ವನ ಆಣೆ ಮಾಡಿ ಹೇಳಕತ್ತಾನ್ರೀ,'' ಅಂದು ಬಿಟ್ಟಳು! ಈ ಮಾತು ಕೇಳಿ ಆಕೆ ನನ್ನ ಮುಖವನ್ನೊಮ್ಮೆ, ಆಕೆ ಮುಖವನ್ನೊಮ್ಮೆ ನೋಡಿ ಬಿದ್ದು ಬಿದ್ದು ನಕ್ಕಿದ್ದೇ ನಕ್ಕಿದ್ದೆ. ``ಏ.. ಏ್ ಹೇಳಾಕತ್ತೀರಿ ನೀವು. ರೊಕ್ಕಾ ಬೇಕಿದ್ದರ ಕೇಳರಿ ಕೊಡ್ತೇನಿ. ಹಿಂ್ ಬಾಯಿಗೆ ಬಂದಿಲ್ಲ ಹೇಳಬ್ಯಾಡಿ,'' ಎಂದು ಜೇಬಿನಿಂದ ಹತ್ತಿಪ್ಪತ್ತು ರೂಪಾಯಿ ತೆಗೆದು ಕೊಟ್ಟೆ. ``ಇಲ್ಲ.. ಅಣ್ಣಾರ, ನಾ ಸುಳ್ಳು  ಹೇಳಾಕತ್ತಿಲ್ಲ. ಖರೇನ ಹೇಳಾಕತ್ತೀನಿ. ಮುಂದ ನಿಮಗ ಗೊತ್ತಾಗತ್ತೈತಿ,'' ಎನ್ನುತ್ತಾ ನಮ್ಮತ್ತ ತಿರುಗಿ ನೋಡದೆ ಹೊರಟ ಹೋದಳು.
ಅವಳು ಹೋಗದ್ದೇ ತಡ, ತೀರಾ ಗಾಂಭಿರ್ಯವನ್ನು ಮುಖದ ಮೇಲೆ ತಂದುಕೊಂಡು ನನ್ನನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿ ನೋಡಿದ ಅವಳು, ನನ್ನ ಕೆನ್ನೆಗೆ ಒಂದು ಮುತ್ತನ್ನು ಕೊಟ್ಟು ತಲೆ ತಗ್ಗಿಸಿಕೊಂಡು ಕುಳಿತಳು! ಹಾಗೇ ಮುತ್ತು ಕೊಟ್ಟವಳ ಮನಸ್ಸಿನಲ್ಲಿ ಏನಿತ್ತು? ಆ ಹೆಂಗಸು ಹೇಳಿದ `ವಿಷ್ಯದ ನುಡಿಗಳ ಬಗ್ಗೆ ಯೋಚಿಸುತ್ತಿದ್ದಳೇನೋ..? ಅಂದ ಹಾಗೆ, ಅಂದು ಪ್ರೇಮಿಗಳ ದಿನವಾಗಿತ್ತು. ಇದಕ್ಕೆ ಆ ಪಾಕ ಸಾಕ್ಷಿಯಾಗಿತ್ತು.
---
ಪೇಪ್... ಪೇಪ್... ಎಂದು ರಪ್ಪಂತ ಬಾಗಿಲಿಗೆ ಎಸೆದು ಹೋದವನನ್ನು ಬೈಯ್ದುಕೊಳ್ಳುತ್ತಾ, ಅನಾಥವಾಗಿ ಬಾಗಿಲ ಬಳಿ ಬಿದ್ದಿದ್ದ ಆ ಪೇಪ್ ಎತ್ತಿಕೊಂಡು, ಪುಟಗಳನ್ನು ತಿರುವುತ್ತಿರುವಾಗಲೇ ಕಂಡದ್ದು, `ಉದ್ಯಾನ ಸೀಳಿದ ಮೆಟ್ರೋ ಮಾರ್ಗ' ಎಂಬ ಹೆಡ್ಡಿಂಗು. ಏನಿದು ಎಂದು ಸುದ್ದಿಯ ಮೇಲೆ ಕಣ್ಣಾಡಿಸುತ್ತಿರುವಾಗಲೇ ಗೊತ್ತಾಗಿದ್ದು, ಇದು ಅದೇ ಉದ್ಯಾನ. ನಮ್ಮ ಪ್ರೀತಿಯ ಬೀಜಾಂಕುರಕ್ಕೆ ಕಾರಣವಾಗಿದ್ದ ಉದ್ಯಾನ. ಅನಿರೀಕ್ಷಿತವಾಗಿ ಮುತ್ತುಕೊಟ್ಟ ಹುಡುಗಿ ಕುಳಿತುಕೊಂಡಿದ್ದ ಅದೇ ಉದ್ಯಾನ. ಅದೇ ಉದ್ಯಾನದ ನಟ್ಟ ನಡುವೆ ಮೆಟ್ರೋ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ ಎಂಬುದು ಆ ಸುದ್ದಿಯ ಸಾರಾಂಶ. ಅದೆಷ್ಟೋ ಹುಡುಗ, ಹುಡುಗಿಯರ ಪ್ರೀತಿ ನಿವೇದನೆಗೆ ನಿವೇಶನ ಒದಗಿಸಿತ್ತೋ..? ಅದೆಷ್ಟು ಹಿರಿಯ ಜೀವಗಳು ತಮ್ಮ ಯೌವ್ವನ ದಿನಗಳನ್ನು ಅಲ್ಲಿ ಕುಳಿತು ನೆನಪಿಸಿಕೊಂಡಿದ್ದರೋ..? ಅದೆಷ್ಟೋ ಅಬ್ಬೇಪಾರಿಗಳು ಆ ಹುಲ್ಲು  ಹಾಸಿನ ಮೇಲೆ ಮಲಗಿ ಕನಸುಗಳನ್ನು ಕಟ್ಟಿಕೊಂಡಿದ್ದರೋ..? ನಗರ ಬದುಕಿನ ವೇಗದ ಮ`್ಯೆ ತುಸು ವಿರಾಮ ನೀಡುವ ಬ್ರೇಕ ಪಾಯಿಂ್ ಆಗಿದ್ದ ಆ ಉದ್ಯಾನ ಇನ್ನು ನೆನಪಷ್ಟೇ ಎಂದು ಯೋಚಿಸುತ್ತಿದ್ದವನಿಗೆ, ಕಣ್ಣು ತುಸು ತೇವ ಆಗಿದ್ದು ಗೊತ್ತಾಗಲಿಲ್ಲ.
- ಪ್ರದ್ಯುಮ್ನ