ಶುಕ್ರವಾರ, ಡಿಸೆಂಬರ್ 5, 2014

ಪಾಕಿಸ್ತಾನ: ಕೊನೆಯಿಲ್ಲದ ಕದನದ ಈಗಿನ ತಾರಾಗಣ




ಪಾಕಿಸ್ತಾನದಲ್ಲಿ ಅರಾಜಕತೆ ಎಂಬುದು ಯಾವತ್ತಿಗೂ ಹೊಸ ಸುದ್ದಿ ಅನ್ನಿಸುವುದಿಲ್ಲ. ಪ್ರತಿಬಾರಿಯ ಆಂತರಿಕ ಕಲಹಗಳಲ್ಲಿ ಪಾತ್ರಗಳು ಬದಲಾಗುತ್ತಿರುತ್ತವೆ ಅಷ್ಟೆ. ಈ ಬಾರಿ ಅಲ್ಲಿನ ಮುಖ್ಯಪಾತ್ರಗಳಲ್ಲಿರುವವರು ತಾಹಿರುಲ್ ಖಾದ್ರಿ ಎಂಬ ಧರ್ಮಗುರು, ಇಮ್ರಾನ್ ಖಾನ್ ಎಂಬ ಒಂದು ಕಾಲದ ಕ್ರಿಕೆಟಿಗ ಹಾಗೂ ಈಗಿನ ರಾಜಕಾರಣಿ ಮತ್ತು ನವಾಜ್
ಷರೀಫ್. ಈ ವ್ಯಕ್ತಿಗಳ ಜಾತಕ ಓದುತ್ತ ಪಾಕಿಸ್ತಾನದ ಪ್ರಸ್ತುತ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇದು.

ಧರ್ಮಗುರುವಿಗೆ ಅಧಿಕಾರದ ಕನಸು ಬಿದ್ದೊಡೆ...
ಪಾಕ್ ಪ್ರಧಾನಿ ಷರೀಫ್ ಅವರ ಕುರ್ಚಿಗೆ ಸಂಚಕಾರ ತರಲು ಇಮ್ರಾನ್ ಖಾನ್ ಜತೆ ಜಂಟಿ ಕಾರ್ಯಾಚಾರಣೆ ನಡೆಸುತ್ತಿರುವ ತಾಹಿರುಲ್ ಖಾದ್ರಿ ಒಂದು ಕಾಲದಲ್ಲಿ ಷರೀಫ್ ಅವರಿಗೆ ಬೇಕಾದ ವ್ಯಕ್ತಿ! ಷರೀಫ್ ಅವರ ತಂದೆ ಮೊಹಮ್ಮದ್ ಅವರು ಕಬ್ಬಿಣ ಮತ್ತು ಸ್ಟೀಲ್ ಕೈಗಾರಿಕಾ ಸಮೂಹದ ಅಧ್ಯಕ್ಷರಾಗಿದ್ದಾಗ ಆಸ್ಪತ್ರೆ ಮತ್ತು ಫೌಂಡ್ರಿಸ್ ಆವರಣದಲ್ಲಿ ನಿರ್ಮಿಸಲಾಗಿದ್ದ ಮಸೀದಿಗಾಗಿ ಒಬ್ಬ ವಿದ್ವಾಂಸರನ್ನು ಹುಡುಕುತ್ತಿದ್ದರು. ಅವರ ಕಣ್ಣಿಗೆ ಬಿದ್ದಿದ್ದು ಇದೇ ಖಾದ್ರಿ. ಮುಂದೆ ನವಾಜ್ ಷರೀಫ್ ಪಂಜಾಬ್ ಸಚಿವರಾದಾಗ, ಟಿವಿಯಲ್ಲಿ ಖಾದ್ರಿ ಅವರ ಅಧ್ಯಾತ್ಮಿಕ ಕಾರ್ಯಕ್ರಮ ಪ್ರಸಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇಷ್ಟೆಲ್ಲ ಯಾಕೆ ಹೇಳಬೇಕಾಯಿತು ಎಂದರೆ, ಷರೀಫ್ ಜತೆ ಆ ಮಟ್ಟಿಗಿನ ಸಾಮೀಪ್ಯ ಹೊಂದಿದ್ದ ಖಾದ್ರಿ ಯಾಕೆ ಅವರು ವಿರುದಟಛಿ ತಿರುಗಿ ಬಿದ್ದಿದ್ದಾರೆ? ಇದರಲ್ಲಿ ನಿಜವಾಗಲೂ ಏನಾದರೂ ತಾರ್ಕಿಕ ವಿಚಾರಗಳಿವೆಯಾ? ಮೇಲ್ನೋಟಕ್ಕೆ ಚುನಾಯಿತ ಸರ್ಕಾರದ ವಿರುದಟಛಿದ ‘ದಂಗೆ’ ಎಬ್ಬಿಸುವ ಹುನ್ನಾರದಂತೆ ಕಂಡರೂ ಖಾದ್ರಿ ಅವರ ಹೋರಾಟದಲ್ಲಿ ಸ್ವಲ್ಪವಾದರೂ ಪ್ರಾಮಾಣಿಕತೆಯಿದೆ. ಇದೇ ಮಾತನ್ನು ಇಮ್ರಾನ್ ಖಾನ್ ಅವರಿಗೆ ಅನ್ವಯಿಸುವುದು ಕಷ್ಟ. ಖಾದ್ರಿ ಇಸ್ಲಾಂ ವಿದ್ವಾಂಸರಾದರೂ ಮತಾಂಧರಲ್ಲ. ಇಸ್ಲಾಮ್‌ನ ನಿಜವಾದ ಸಂದೇಶವನ್ನು ಪಾಕ್ ಯುವ ಜನರಿಗೆ ಹೆಚ್ಚು ಅರ್ಥವಾಗುವ ರೀತಿಯಲ್ಲಿ ಹೇಳುತ್ತಿದ್ದಾರೆ. ಇದರಿಂದಾಗಿಯೇ ಕೆನಡಾದ ‘ಮಾನಸಪುತ್ರ’ರಂತಾಗಿರುವ ಖಾದ್ರಿ ಮಾತಿಗೆ ಪಾಕ್‌ನ ಯುವ ಜನ ಮರಳಾಗಿದ್ದಾರೆ. ಸದಾ ಯುದಟಛಿದ ಭೀತಿಯಲ್ಲಿ, ಅರಾಜಕತೆ ನೆರಳಲ್ಲಿ, ಬಡತನದ ಬೇಗೆಯಲ್ಲಿ ಬೇಯುತ್ತಿರುವ ಅಲ್ಲಿನ ಜನರಿಗೆ ಖಾದ್ರಿ ಹೇಳುತ್ತಿರುವ ಮಾತುಗಳು ಮನಸ್ಸಿಗೆ ತಟ್ಟಲಾರಂಭಿಸಿವೆ. ಅವರ ಬೆಂಬಲಕ್ಕಾಗಿ ಬೀದಿಗಿಳಿಯುತ್ತಿದ್ದಾರೆ.
ಇಸ್ಲಾಮ್ ವಿದ್ವಾಂಸ ಎಂಬ ಖ್ಯಾತಿಯಿದ್ದರೂ ಕೂಡಾ ಖಾದ್ರಿಯೇನೂ ‘ಅಧಿಕಾರ ಬೇಡ ಎನ್ನುವ ತ್ಯಾಗಿ’ಯಲ್ಲ. ಈಗಿನ ಅವರ ಹೋರಾಟ ಮೇಲ್ನೋಟಕ್ಕೆ ಭ್ರಷ್ಟ ಹಾಗೂ ಅಕ್ರಮ ಮಾರ್ಗದಿಂದ ಚುನಾಯಿತರಾಗಿರುವ ಸರ್ಕಾರವನ್ನು ಕಿತ್ತೊಗೆಯುವುದು. ಚುನಾವಣೆ ಸುಧಾರಣೆ ತರುವುದು. ಆದರೆ, ಅಂತರಾಳದಲ್ಲಿ ಅವರಿಗೆ ಅಧಿಕಾರದ ದರ್ಬಾರ್ ನಡೆಸುವ ಉಮೇದು ಇದೆ. ಈಗ ಎಷ್ಟೇ ಅವರು ಸೇನೆಯ ಜೊತೆ ನೆಂಟಸ್ತನ ಇಲ್ಲ, ಅಧಿಕಾರದ ವ್ಯಾಮೋಹ ಇಲ್ಲ ಎನ್ನಬಹುದು. ಆದರೆ, ಅದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಾಗದು. ಅವರ ಇತಿಹಾಸವನ್ನು ಗಮನಿಸಿದರೆ ಇದನ್ನು ಪುಷ್ಟೀಕರಿಸುತ್ತದೆ. ೧೯೮೧ರಲ್ಲಿ ತೆಹ್ರಿಕ್ ಮಿನ್ಹಾಜುಲ್ಕು ರಾನ್ ಪಕ್ಷ ಕಟ್ಟಿದ್ದರು. ಈ ಪಕ್ಷದ ಉದ್ದೇಶ ನಿಜವಾದ ಪ್ರಜಾಪ್ರಭುತ್ವ, ಆರ್ಥಿಕ ಪ್ರಗತಿ, ಮಾನವ ಹಕ್ಕಗಳ ರಕ್ಷಣೆ,
ನ್ಯಾಯದಾನ, ಮಹಿಳೆ ಮತ್ತು ಅಲ್ಪಸಂಖ್ಯಾತರ ರಕ್ಷಣೆಯಾಗಿತ್ತು. ಆದರೆ, ಅದ್ಯಾಕೋ ಪಾಕ್ ಜನರು ಆಗ ಇವರನ್ನು ನಂಬಲಿಲ್ಲ. ಅದಕ್ಕೂ ಕಾರಣವಿದೆ. ಖಾದ್ರಿ ಅವರು ಸ್ವಲ್ಪ ಉದಾರಿ ಎನ್ನಬಹುದಾದ ಸುನ್ನಿ ಪಂಗಡದ ಬರ್ಲೇವಿ ಒಳಪಂಗಡಕ್ಕೆ ಸೇರಿದವರು. ಇದು ಇತರರು ಅವರನ್ನು ಅನುಮಾನದಿಂದ ನೋಡುವಂತಾಗಲು ಕಾರಣವಾಯಿತು. ೧೯೯೦ ಮತ್ತು ೧೯೯೩ರಲ್ಲಿ ಖಾದ್ರಿ ಅವರ ರಾಜಕೀಯ ಪ್ರಯತ್ನಗಳು ವಿಫಲಗೊಂಡವು. ೧೯೯೫ರಲ್ಲಿ ರಾಜಕೀಯ ತೊರೆದರು. ಆದರೆ, ೧೯೯೯ರಲ್ಲಿ ಜನರಲ್ ಪರ್ವೇಜ್ಮು ಷರಫ್ ಸೇನಾ ಕ್ಷೀಪ್ರ ಕ್ರಾಂತಿಯಲ್ಲಿ ಪಾಕ್ ಅಧ್ಯಕ್ಷರಾದರು. ಆಗ ಅವರೊಂದಿಗೆ ಬೆಳೆದ ಸ್ನೇಹದ ಫಲವಾಗಿ ೨೦೦೨ರಲ್ಲಿ ನ್ಯಾಷನಲ್ ಅಸೆಂಬ್ಲಿಯ ಸದಸ್ಯರಾದರು. ಆಗಲೇ ಖಾದ್ರಿ ಅವರಿಗೆ ಸೇನೆಯ ಒಳ ದಾರಿಗಳು ಗೊತ್ತಾಗಿದ್ದು. ಖಾದ್ರಿಗೆ ಧಾರ್ಮಿಕ ವ್ಯವಹಾರಗಳ ಸಚಿವರಾಗುವ ಬಯಕೆ ಇತ್ತು. ಆದರೆ, ಸಾಧ್ಯವಾಗಲಿಲ್ಲ. ಕೊನೆಗೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ೨೦೦೫ರಲ್ಲಿ ಕೆನಡಾಕ್ಕೆ ವಲಸೆ ಹೋದರು. ಇದೆಲ್ಲವನ್ನು ಗಮನಿಸದರೆ ಪಾಕ್ ರಾಜಕೀಯ, ಅಧಿಕಾರದ ಪಡಸಾಲೆಯಲ್ಲಿ ‘ಕಾಯಂವಾಸಿ’ಯಾಗುವ ಅವರ ಬಯಕೆ ಇದ್ದೇ ಇದೆ ಎಂಬುದು ವೇದ್ಯ. ಹಾಗಾಗಿ, ಇಮ್ರಾನ್ ಖಾನ್ ಜತೆಗೂಡಿ ಷರೀಫ್ ಅವರ ರಾಜಿನಾಮೆಗೆ ಹೋರಾಟದ ಸ್ವರೂಪ ನೀಡಿದ್ದಾರೆ ಎಂಬ ಆರೋಪಗಳಿವೆ.

ಇಮ್ರಾನ್ ಖಾನ್ ಪಾಕ್‌ನ ಕೇಜ್ರಿವಾಲಾ?
೧೯೯೨ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಇಮ್ರಾನ್ ಖಾನ್. ಅಂದಿನಿಂದ ಈವರೆಗೂ ಪಾಕ್ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಹಾಗಾಗಿ, ಕ್ರಿಕೆಟಿಗರಾಗಿ ಈಗಲೂ ಇಮ್ರಾನ್ ಖಾನ್ ಪಾಕಿಸ್ತಾನದ ಹೀರೋ. ರಾಜಕೀಯದಲ್ಲೂ ಅದೇ ‘ನಾಯಕ’ನಾಗುವ ಹುಮ್ಮಸ್ಸಿನಲ್ಲಿ ಸ್ವಲ್ಪ ಆತುರಕ್ಕೆ ಬಿದ್ದಿದ್ದಾರೆ ಅನ್ನಿಸುತ್ತದೆ. ಒಂದು ರೀತಿಯಲ್ಲಿ ನಮ್ಮ ಅರವಿಂದ್ ಕೇಜ್ರಿವಾಲ್ ಅವರಿಗೂ ಇವರನ್ನು ೋಲಿಸಬಹುದು. ಪಾಕ್‌ನ ನಗರವಾಸಿಗಳ ಬೆಂಬಲ ಇರುವಇಮ್ರಾನ್ ಅವರ ಪಾರ್ಟಿ ಆಫ್ ತೆಹ್ರಿಕ್ ಇ ಇನ್ಸಾಫ್(ಪಿಟಿಐ)2೦೧೩ರ ನ್ಯಾಷನಲ್ ಅಸೆಂಬ್ಲಿ ಚುನಾವಣೆಯಲ್ಲಿ ೩೪ ಸ್ಥಾನ ಗೆದ್ದಿದೆ. ಇದೇ ಉತ್ಸಾಹದಲ್ಲಿ ಸೇನೆಯ ಬೆಂಬಲದೊಂದಿಗೆ ಸದ್ಯ ಪಾಕ್‌ನಲ್ಲಿ ಹೋರಾಟಕ್ಕಿಳಿದಿದ್ದಾರೆ. ಆದರೆ, ಅವರ ಈ ನಡೆ ಅವರ ಬೆಂಬಲಿಗರಲ್ಲಿ ಸಮಾಧಾನ ತಂದಿಲ್ಲ. ಇಮ್ರಾನ್ ಖಾನ್ ಅವರ ಹೋರಾಟ ಅರಾಜಕತೆ ಮತ್ತು ಸೇನಾಡಳಿತಕ್ಕೆ ದಾರಿ ಮಾಡಿಕೊಡುತ್ತಿದೆ ಎಂಬುದು ಅವರ ಆರೋಪ. ಆದರೆ, ಇಮ್ರಾನ್ ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣುತ್ತಿಲ್ಲ.
ಸದ್ಯ ಇಮ್ರಾನ್ ಹೆಗಲ ಮೇಲೆ ಬಂದೂಕು ಇಟ್ಟು ಸೇನೆ ಷರೀಫ್‌ರತ್ತ ಗುಂಡು ಹಾರಿಸುತ್ತಿದೆ. ಖಾದ್ರಿ ಮತ್ತು ಇಮ್ರಾನ್ ಅವರು ಸೇನೆ ಜತೆ ನಂಟಿಲ್ಲ ಎಂದು ಎಷ್ಟೇ ಹೇಳಿದರೂ ಯಾರೂ ನಂಬಲಾರರು. ಯಾಕೆಂದರೆ, ಸದ್ಯದ ರಾಜಕೀಯ ಬಿಕ್ಕಟ್ಟು ಬಗೆಹರಿಸಲು ಅವರು ಸಂಧಾನಕಾರರನ್ನಾಗಿ ಆಯ್ಕೆ ಮಾಡಿಕೊಂಡಿರುವುದು ಸೇನಾಧಿಕಾರಿಯನ್ನೇ! ಪಾಕ್ ಸೇನೆಗೂ
ಷರೀಫ್ ತಮ್ಮ ಮೇಲೆ ಸವಾರಿ ಮಾಡುವುದು ಸಹಿಸಿಕೊಳ್ಳಲಾಗುತ್ತಿಲ್ಲ. ಇದು ಈಗಾಗಲೇ ಷರೀಫ್ ಅವರ ಭಾರತದ ಭೇಟಿ ವೇಳೆ ಜಗಜ್ಜಾಹೀರಾಗಿದೆ. ಪ್ರಧಾನಿ ಯಾಗಲೇಬೇಕು ಎಂಬ ಅದಮ್ಯ ಬಯಕೆ ಹೊಂದಿರುವ ಖಾನ್, ೨೦೧೩ರ ಚುನಾವಣೆಯನ್ನು ‘ಫೇಕ್ ಮ್ಯಾಂಡೆಟ್’ ಎನ್ನುತ್ತಾ, ಷರೀಫ್ ಅವರ ರಾಜಿನಾಮೆ ಹಾಗೂ ಹೊಸದಾಗಿ ಚುನಾವಣೆಯ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆಲ್ಲ ತೆರೆಮರೆಯಲ್ಲಿ ಸೇನೆಯ ಕರಾಮತ್ತು ಇದ್ದೇ ಇದೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೆಲವು ಸ್ಥಾನಗಳ ಬಗ್ಗೆ ಮರು ಎಣಿಕೆಯನ್ನು ಇಮ್ರಾನ್ ಬಯಸಿದ್ದರು. ಆದರೆ, ಇದು ಸಾಧ್ಯವಾಗಿರಲಿಲ್ಲ. ಇದಕ್ಕೆಲ್ಲ ಕಾರಣ ಷರೀಫ್ ಎಂಬುದು ಅವರ ಗುಮಾನಿ. ಈಗತಮ್ಮ ಸ್ವಹಿತಾಸಕ್ತಿ ಮತ್ತು ಸೇನೆಯ ಆಸಕ್ತಿಗಳೆರಡನ್ನು ಸೇರಿಸಿ ಕೊಂಡು ಷರೀಫ್ ಅವರಿಗೆ ಮಗ್ಗುಲು ಮುಳ್ಳಾಗುತ್ತಿದ್ದಾರೆ.

ಷರೀಫ್‌ಗೆ ಸಾಮ್ರಾಜ್ಯ ಉಳಿಸಿಕೊಳ್ಳುವ ತವಕ 
೨೦೧೩ಕ್ಕೆ ಮುಂಚೆ ಪಾಕ್ ಜನ ಇವರ ಮೇಲಿಟ್ಟಿದ್ದ ವಿಶ್ವಾಸ ಈಗ ಉಳಿದಿಲ್ಲ. ಇದು ಪ್ರಧಾನಿ ಷರೀಫ್ ಅವರ ಸ್ವಯಂಕೃತ ಅಪರಾಧ. ಷರೀಫ್ ಅವರ ಅತಿಯಾದ ಸ್ವಜನ ಪಕ್ಷಪಾತ ಮತ್ತು ಅತಿಯಾದ ಭ್ರಷ್ಟಾಚಾರ ಜನರಲ್ಲಿ ಭ್ರಮನಿರಸನಕ್ಕೆ ಕಾರಣ. ಷರೀಫ್ ಅವರ ನೀತಿ ಯಾವಾಗಲೂ ಬಿಸಿನೆಸ್ ಪರವಾಗಿರುತ್ತ ವೆ ಎಂಬುದು ಗೊತ್ತಿರುವ ಸಂಗತಿ. ಪಾಕಿಸ್ತಾನದಲ್ಲಿರುವ ಸಕ್ಕರೆ, ಉಕ್ಕು ಸೇರಿದಂತೆ ಸುಮಾರು ಕೈಗಾರಿಕೆಗಳು ಇವರು ಮತ್ತು ಇವರ ಸಂಬಂಧಿಕರ ಹಿಡಿತದಲ್ಲಿವೆ. ಹಾಗೆ ನೋಡಿದರೆ ಇಡೀ ಕೈಗಾರಿಕೋದ್ಯಮ ಇವರ ಅಂಗೈಯಲ್ಲಿದೆ ಎಂದರೆ ಉತ್ಪ್ರೇಕ್ಷೆ ಅಲ್ಲ. ಚುನಾವಣೆಯ ಮುಂಚೆ ‘ಅಂಗೈಯಲ್ಲಿ ಆಕಾಶ’ ತೋರಿಸುವ ಭರವಸೆ ನೀಡಿದ್ದ ಷರೀಫ್ ಅದರತ್ತ ಕಿಂಚಿತ್ ಪ್ರಯತ್ನ ಮಾಡಿಲ್ಲ. ಇದುವರೆಗೆ ಒಂದೇ ಒಂದು ಕಾಯ್ದೆಯನ್ನು ಅವರು ಜಾರಿಗೆ ತಂದಿಲ್ಲ. ಅವರ ಆಡಳಿತ ನಿಷ್ಕ್ರಿಯತೆ ಎಷ್ಟಿದೆ ಎಂದರೆ, ಇದುವರೆಗೂ ಪ್ರಮುಖ ಖಾತೆಗಳಿಗೆ ಸಚಿವರನ್ನೇ ನೇಮಿಸಿಲ್ಲ! ಷರೀಫ್ ಅವರ ಸ್ವಜನ ಪಕ್ಷಪಾತಕ್ಕೆ ಮಿತಿಯೇ ಇಲ್ಲ. ಇರುವ ಮಂತ್ರಿಗಳ ಪೈಕಿ ಬಹುತೇಕರು ಅವರ ಸಂಬಂಧಿಕರೇ ಇದ್ದಾರೆ. ಅವರ ವಿರುದಟಛಿ ಭ್ರಷ್ಟಾಚಾರ ಆರೋಪಗಳು ಹೇರಳ. ಎಲ್ಲಕ್ಕಿಂತ ಹೆಚ್ಚಾಗಿ ಸೇನೆಯ ಜತೆ ಷರೀಫ್ ಅವರು ಸಂಘರ್ಷಕ್ಕಿಳಿದಿದ್ದು ಈಗಿನ ಪರಿಸ್ಥಿತಿಗೆ ಕಾರಣ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಷರೀಫ್ ಬಂದಿದ್ದು ಕೂಡಾ ಯಡವಟ್ಟಾಗಿದೆ. ಸದ್ಯಕ್ಕಂತೂ ಅತ್ತ ಸೇನೆಯ ಜತೆಗೂ ಸಂಬಂಧ
ನೆಟ್ಟಗಿಲ್ಲ, ಇತ್ತ ಜನರು ತಮ್ಮ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಂಡಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದಾರೆ ಷರೀಫ್. ಪಾಕ್ ಸಂಸತ್ತು ಷರೀಫ್ ಬೆನ್ನಿಗೆ ನಿಂತಿದೆಯಾದರೂ ಅದು ಎಷ್ಟು ದಿನ ಎಂಬುದು ಯಾರಿಗೂ ಗೊತ್ತಿಲ್ಲ. ಅಲ್ಲದೆ, ಅವರ ಎದುರಾಳಿ ಜನರಲ್ ಪರ್ವೇಜ್ಮು ಷರ‌್ರಫ್ ಕೂಡಾ ಖಾದ್ರಿ ಜೊತೆ ಕೈಜೋಡಿಸಿದ್ದಾರೆ.
------
ಮೂರು ಮುಖ್ಯ ಪಾತ್ರಗಳು ಹೀಗಿರಲಾಗಿ ಪಾಕಿಸ್ತಾನದ ಭವಿಷ್ಯದ ಕುರಿತ ಭರತವಾಕ್ಯ ಏನು? ಉತ್ತರ: ಥರಹೇವಾರಿ ಪಾತ್ರಗಳ ಆಟ ಮತ್ತು ಪಾಕ್ ಸಂಘರ್ಷ ಎರಡಕ್ಕೂಕನ್‌ಕ್ಲೂಷನ್ ಇಲ್ಲ!

(ಈ ಲೇಖನ 10-09-2014ರಲ್ಲಿ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.)

ಭಾನುವಾರ, ಸೆಪ್ಟೆಂಬರ್ 1, 2013

ಗಜಲ್


ನಿನ್ನ ಈ ಮೌನ ಹೊಮ್ಮಿಸಿದೆ ಅರ್ಥ ನೂರು
ನಿನ್ನ ಈ ಕಣ್ಣ ಕಾಂತೀಯ ಹೊಳಪು ನೂರು

ಅರ್ಥವಾಗದೇ ನನ್ನ ಈ ಹೃದಯದ ತಕರಾರು?
ಕಲೆತರೂ ಕಲಿಯದಂತಿರುವುದು ನಿನ್ನದು ಕಲೆ ನೂರು

ನೀನಾಡುವ ಮಾತಿನೊಳಗೆ ಸಾವಿರ ಚುಕ್ಕಿ, ರೇಖೆ
ಹೇಗೇ ಜೋಡಿಸಿದರೂ ಪ್ರೀತಿಯ ತೇರು ನೂರು

ನಿನ್ನ ಈ ಸ್ನಿಗ್ಧ ನಗೆಗೆ ಅರಳವವು ಮುಂಜಾನೆ ಮೊಗ್ಗಗಳು
ನನಗೇ ನಾನರಿಯುವ, ಬೆಳಕು ಚುಂಬಿಸುವ ದಾರಿ ನೂರು

ಮೌನಕ್ಕೆ ಅರ್ಥ ಕಲ್ಪಿಸಿ ಕಲ್ಪಿಸಿ ಸಾಯುವ ಸಮ್ಮೋಹಿ
ಆದಿ-ಅಂತ್ಯದೊಳಗೆ ಸ್ಥಿತ್ಯಂತರ ಕಾಣುತ್ತಿವೆ ನೂರು

ಪರವಾಗಿಲ್ಲ ಬಿಡು ಕೊನೆಯಾದರೂ ಕಾಯುವೆ ಕರಗದೆ
ದೊರೆತೀತು ನನ್ನ ಕಾಯುವಿಕೆ, ನಿನ್ನ ಮೌನಕೆ ಅರ್ಥ ನೂರು

(published in KP's Saptahikprabha)

ಶನಿವಾರ, ಡಿಸೆಂಬರ್ 24, 2011

ಇದು ಟೇಕನ್ ಫಾರ್ ಗ್ರಾಂಟೆಡ್ ಅಲ್ಲ!


ಟೇಕನ್..  ಹಾಲಿವುಡ್ ನ ಸ್ಟಂಟ್ ಚಿತ್ರಗಳಂತೆ ಭಾಸವಾದರೂ ಒಳಪದುರುಗಳಲ್ಲಿ ಫ್ರಾನ್ಸ್್ನಲ್ಲಿ ನಡೆಯುವ ಹುಡುಗಿಯರ ಕಳ್ಳ ಸಾಗಣೆ ಸಮಸ್ಯೆಯನ್ನು ತುಂಬಾ ಪ್ರಭಾವಿಯಾಗಿ ಚಿತ್ರಿಸಿದೆ. ಈ ಚಿತ್ರದ ಸ್ಟಂಟ್ಗೂ ಒಂದು ಸ್ಟೇಟಸ್ ಇದೆ. 2008ರಲ್ಲಿ ಬಿಡುಗಡೆಯಾದ ಈ ಚಿತ್ರ ಸಮ್ಮಿಶ್ರ ಪ್ರತಿಕ್ರಿಯೆ ದಕ್ಕಿಸಿಕೊಂಡಿತ್ತು. ಹಾಗೆಯೇ ನಿಮಾ೯ಪಕರ ಜೇಬನ್ನು ಕೂಡಾ ಭತಿ೯ ಮಾಡಿತ್ತು ಎಂದು ಬೇರೆ ಹೇಳಬೇಕಿಲ್ಲ.

ಇದೊಂಥರಾ ಅಪ್ಪ-ಮಗಳ ನಡುವಿನ ಬಾಂಧವ್ಯ ಚಿತ್ರ. ಒಬ್ಬ ತಂದೆ ತನ್ನ ಮಕ್ಕಳ ಮೇಲೆ ಎಷ್ಟೊಂದು ಮಮಕಾರ ಇಟ್ಟಿರುತ್ತಾನೆ. ಅವರನ್ನು ಎಂಥ ಸಂದಭ೯ದಲ್ಲೂ ಪ್ರಾಣದ ಹಂಗು ತೊರೆದು ರಕ್ಷಿಸುವ ಹೊಣೆಯನ್ನು ನಿಭಾಯಿಸುತ್ತಾನೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ರಕ್ಷಣೆ ವಿಷಯಕ್ಕೆ ಬಂದಾಗ ಅಪ್ಪ ನಿಜವಾಗಲೂ ರಾಕ್ಷಸನೇ ಸರಿ.

ಕೇವಲ ಸಿಐಎನಿಂದ ನಿವೖತ್ತಿಯಾದ ಏಜೆಂಟನೊಬ್ಬಳ ಮಗಳನ್ನು ಮಾನವ ಕಳ್ಳ ಸಾಗಣೆದಾರರು ಅಪಹರಿಸಿ ಅವಳನ್ನು ಸೂಳೆಗಾರಿಕೆಗೆ ತಳ್ಳುವ ಯತ್ನದ ಕಥೆ ಅಷ್ಟೇ ಅಲ್ಲ ಇದು. ಅಪ್ಪ ಮಗಳ ನಡುವಿನ ನವಿರಾದ ಬಂಧ, ಸಂಬಂಧ, ವಾತ್ಸಲ್ಯವನ್ನು ಕೂಡಾ ವೈಭವೀಕರಿಸುತ್ತಾರೆ ಚಿತ್ರದ ನಿದೇ೯ಶಕ ಪಿರೆ ಮಾರೆಲ್. ಅದರ ಜತೆಗೆ ಫ್ರಾನ್ಸ್್ನಲ್ಲಿ ಅಕ್ರಮ ವಲಸೆಗಾರರಾದ ಅಲ್ಬೆರಿಯನ್ನರು ನಡೆಸುವ ಒತ್ತಾಯ ಸೂಳೆಗಾರಿಕೆಯ ವಾಸ್ತವ ಚಿತ್ರಣವನ್ನು ನೀಡುತ್ತಾರೆ. ಇದರೊಟ್ಟಿಗೆ ಸ್ಥಳೀಯ ಪೊಲೀಸರು ಹೇಗೆ ಶಾಮಿಲಾಗಿರುತ್ತಾರೆ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ ಮಾರೆಲ್.

ಫ್ರಾನ್ಸ್್ಗೆ ಬರುವ ಹದಿಹರಿಯ ಹುಡಿಗಿಯರನ್ನು ಹೊಂಚು ಹಾಕಿ ಪಟಾಯಿಸಿ ಅವರನ್ನು ಒತ್ತಾಯವಾಗಿ ಸೂಳೆಗಾರಿಕೆಗೆ ನೂಕುವ ಅಲ್ಬೆರಿಯನ್ನರ ದೊಡ್ಡ ಜಾಲವೇ ಕ್ರಿಯಾಶೀಲವಾಗಿರುತ್ತದೆ. ಹಾಗೇ ಅಪಹರಿಸಿದ ಹುಡುಗಿಯರಿಗೆ ಡ್ರಗ್ಸ್್ ನೀಡಿ ಅವರನ್ನು ಅವರ ಅರವಿಗೆ ಬಾರದಂತೆ ಪಾಪದ ಕೂಪಕ್ಕೆ ತಳ್ಳಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅದೆಷ್ಟೋ ಹಣ್ಣುಮಕ್ಕಳು ಓವರ್್ ಡ್ರಗ್್ನಿಂದ ಸಾವಿಗೀಡಾಗುತ್ತಾರೆ. ಇದೆಲ್ಲವನ್ನೂ ದಾಟಿ ಬದುಕಿದ ಹುಡುಗಿಯರು ಕಾಮಪಿಪಾಸುಗಳ ಹಸಿವೆಗೆ ಆಹಾರವಾಗುತ್ತಾರೆ. ಅರಬ್್ ದೇಶಗಳ ಶ್ರೀಮಂತ ವ್ಯಕ್ತಿಗಳ ಕಾಮತೖಷೆ ತೀರಿಸಲು ಏನೂ ಅರಿಯದ ಮುಗ್ಧ ಹೆಣ್ಣು ಮಕ್ಕಳ ಮಾರಣಹೋಮವೇ ನಡೆಯುತ್ತಿರುತ್ತದೆ. ಇದೆಲ್ಲವನ್ನೂ ಸ್ಥಳೀಯ ಪೊಲೀಸರು ಕಣ್ಣು ಮುಚ್ಚಿ ನೋಡುತ್ತಿರುತ್ತಾರೆ!

ಇಂಥದ್ದೇ ಕಥೆಯನ್ನು ಇಟ್ಟುಕೊಂಡು ಕಮಷಿ೯ಯಲ್ಲಾಗಿ ಕನ್ನಡದಲ್ಲಿ ಯಶಸ್ವಿಯಾದ ಚಿತ್ರವೆಂದರೆ ಸೂರಿ ನಿದೇ೯ಶನದ ಹಾಗೂ ಪುನೀತ್ ರಾಜಕುಮಾರ ಅಭಿನಯದ ಜಾಕಿಯೂ ಒಂದು.

ಅಷ್ಟಕ್ಕೂ ಟೇಕನ್ ಚಿತ್ರದ ಕಥೆ ಏನೆಂದರೆ, ಬ್ರಿಯಾನ್ ಮಿಲ್ಸ್(ಲಿಯಾಂ ನೀಸನ್)ಸಿಐಎ ಏಜೆಂಟ್ ಹುದ್ದೆಯಿಂದ ನಿವೖತ್ತಿಯಾಗುತ್ತಾನೆ. ಈತನಿಗೆ ಮಗಳಿರುತ್ತಾಳೆ. ಆಕೆಯ ಹೆಸರು ಕಿಮ್(ಮ್ಯಾಗಿ ಗ್ರೇಸ್). ಆಕೆಗೆ ಆಗಷ್ಟೇ 17 ವಷ೯ ತುಂಬಿರುತ್ತದೆ. ಆಕೆಯ ತಾಯಿ ಅಂದರೆ ಮಿಲ್ಸ್್ನ ಪ ತ್ನಿ ಲೆನೋರ್(ಫಾಮ್ಕೆ ಜಾನ್ಸನ್) ಮಿಲ್ಸನನ್ನು ತೊರೆದು ಮತ್ತೊಬ್ಬನನ್ನು ವಿವಾಹವಾಗಿರುತ್ತಾಳೆ. ಅದಕ್ಕೂ ಕಾರಣವಿದೆ. ಮಿಲ್ಸ್ ತನ್ನ ಕೆಲಸದ ಮಧ್ಯೆ ಕುಟುಂಬ, ಮಗಳನ್ನು ತುಂಬಾ ನಿಲ೯ಕ್ಷಿಸುತ್ತಾನೆ. ಹಾಗಾಗಿ ಲೆನೋರ್ ಮಿಲ್ಸ್ನನ್ನು ತೊರೆದಿರುತ್ತಾಳೆ. 17ನೇ ವಯಸ್ಸಿಗೆ ಕಾಲಿಟ್ಟ ಕಿಮ್ ತನ್ನ ಗೆಳತಿಯ ಜತೆ ಫ್ರಾನ್ಸ್ಗೆ ರಜೆ ಕಳೆಯಲು ಹೋಗಲು ಇಚ್ಛಿಸುತ್ತಾಳೆ. ಆದರೆ, ಇದಕ್ಕೆ ತಂದೆ ಮಿಲ್ಸ್ ಮೊದಲು ಒಪ್ಪಲ. ಕೊನೆಗೆ ಮೂರು ಷರತ್ತುಗಳೊಂದಿಗೆ ಅನುಮತಿ ನೀಡುತ್ತಾನೆ. ಕಿಮ್ ಫ್ರಾನ್ಸ್್ಗೆ ಹೋದ ನಂತರ ಪ್ರತಿ ರಾತ್ರಿ ಅಪ್ಪ ಮಿಲ್ಸ್್ನಿಗೆ ಫೋನ್್ ಮಾಡಬೇಕೆಂಬುದು ಮೂರು ಷರತ್ತುಗಳಲ್ಲಿ ಒಂದು. ಫ್ರಾನ್ಸ್್ಗೆ ಬರುವ ಕಿಮ್ ಮತ್ತು ಆಕೆಯ ಗೆಳತಿಗೆ ಏರ್್ಪೋಟ್೯ ಹೊರಗೆ ಅಪರಿಚಿತನ ಭೇಟಿಯಾಗುತ್ತದೆ. ಆತನೇ ಹುಡುಗಿಯರ ಕಳ್ಳ ಸಾಗಣೆಯ ಮೊದಲ ಕೊಂಡಿ. ಹೀಗೆ ಕಿಮ್ ಮತ್ತು ಆಕೆಯ ಗೆಳತಿ ಅಪಾಟ್೯ಮೆಂಟ್ ಗೆ ಹೋದ ಸಂಗತಿಯನ್ನು ಆತ ತನ್ನ ಬಾಸ್್ಗೆ ತಿಳಿಸುತ್ತಾನೆ. ಇದೇ ವೇಳೆ, ರಾತ್ರಿ ಕಿಮ್ ಹಾಗೂ ಆಕೆಯ ಗೆಳತಿಯನ್ನು ಸೂಳೆಗಾರಿಕೆಗೆ ನಡೆಸುವವರು ಅಪಹರಿಸುತ್ತಾರೆ. ಬ್ರಿಯಾನ್ ತನ್ನ ಮಗಳನ್ನು ಅಪಹರಣಕಾರರಿಂದ ಹೇಗೆ ಬಿಡಿಸಿಕೊಂಡು ಬರುತ್ತಾನೆ ಎಂಬುದೇ ಕಥೆಯ ತಿರುಳು.

ಇದು ಪಕ್ಕಾ ಸ್ಟಂಟ್್ ಸಿನಿಮಾದಂತೆ ತೋರಿದರೂ ಕೂಡಾ ಚಿತ್ರದ ವೈಭವ ಎದ್ದು ಕಾಣುವುದು ಅದರ ಹಿನ್ನೆಲೆ ಸಂಗೀತ ಮತ್ತು ಸ್ಟಂಟ್್ಗಳಿಂದಾಗಿ. ಚಿತ್ರ ಚಕ ಚಕ ಸಾಗುತ್ತಾ ನೂರು ಕಿ.ಮೀ. ವೇಗದಲ್ಲಿ ಓಡುತ್ತದೆ. ಮುಖ್ಯ ಪಾತ್ರ ಬ್ರಿಯಾನ್ ಕೂಡಾ ಚಿತ್ರದ ಪೂತಿ೯ ಓಡುತ್ತಲೇ ಇರುತ್ತಾರೆ ಎಂಬುದು ಕೂಡಾ ಇದಕ್ಕೆ ರೂಪಕವಾಗಬಹುದು. ಹಾಗೆಯೇ, ಮಗಳ ಗೆಳತಿಯನ್ನು ಓವರ್ ಡ್ರಗ್ ನೀಡಿ ಸಾಯಿಸಿರುವುದನ್ನು ಕಂಡ ಬ್ರಿಯಾನ್ ಕೂಡಾ ನಿಮ್ಮನ್ನು ಕಲಕುತ್ತಾನೆ. ಪ್ರತಿ ಸೀನಿನಲ್ಲೂ ನಿದೇ೯ಶಕರ ಕೈಚಳಕ ಎದ್ದು ಕಾಣುತ್ತದೆ. ಹಾಗಾಗಿಯೇ ಕಥೆ ತುಂಬಾ ಸರಳವಾಗಿದ್ದರೂ ಅದನ್ನು ತೆರೆಗೆ ತಂದ ಪರಿ ಬೆರಗು ಮೂಡಿಸುತ್ತದೆ. ಅತಿಯಾದ ಸ್ಟಂಟ್ ಸಿನಿಮಾ ಆಗಿರುವುದರಿಂದ ನೀವು ಆಳಕ್ಕಿಳಿದು ನೋಡದಿದ್ದರೆ ಮಾಮೂಲಿ ಹಾಲಿವುಡ್ ಸಿನಿಮಾಂತೆ ಭಾಸವಾಗುತ್ತದೆ. ಆದರೆ, ಒಂದು ಸರಳವಾದ ಕಥೆಯನ್ನು ಇಟ್ಟುಕೊಂಡು ಗಂಭೀರವಾದ ಸಮಸ್ಯೆಯನ್ನು ತುಂಬಾ ಚೊಕ್ಕವಾಗಿ ಮನಕ್ಕೆ ಮುಟ್ಟುವಂತೆ ಮಾಡುವ ನಿದೇ೯ಶಕರ ಕರಾಮತ್ತು ಮೆಚ್ಚಲೇ ಬೇಕು.



ಚಿತ್ರ- ಟೇಕನ್, ಭಾಷೆ-ಇಂಗ್ಲಿಷ್, ನಿದೇ೯ಶನ- ಪಿರ್ರೆ ಮರೆಲ್, ತಾರಾಗಣ- ಲಿಯಾಂ ನೀಸನ್, ಫಾಮ್ ಜಾನ್ಸನ್, ಮ್ಯಾಗಿ ಗೇಸ್, ಅಲೆಕ್ಸಾಂಡರ್ ಬ್ರೇಕಲೀ ಇತರರು.

ಶುಕ್ರವಾರ, ಆಗಸ್ಟ್ 26, 2011

ಬದಲಾವಣೆ ರಿಮೋಟ್ ಕಂಟ್ರೋಲ್ಲಾ..?

ನಿರಾಶೆಯಲ್ಲಿ ಮಡುವಿನಲ್ಲಿತ್ತು


ಆ ಸಮುದಾಯ, ಇದು ಇಷ್ಟೇ ಲೈಫು

ಏನೇ ತಿಪ್ಪರಲಾಗ ಹಾಕಿದರೂ

ಬದಲಾಗಲ್ಲ ಸಿಸ್ಟಮ್ಮು

ಟೀವಿ ರಿಮೋಟ್ ಕಂಟ್ರೋಲ್ ಹಿಡಿದುಕೊಂಡೇ

ಹಿಡಿ ಶಾಪ ಹಾಕುತ್ತಿದ್ದರು

ಬದಲಾವಣೆ ಕೂಡಾ ರಿಮೋಟ್

ಹಾಗೇ ಇದ್ದರೆ ಎಷ್ಟು ಚೆನ್ನ

ಎಂದು ಗೊಣಗುತ್ತಿರುವಾಗಲೇ

ಅದ್ಯಾವುದೋ ಹಳ್ಳಿಯಲ್ಲಿ

ಸದ್ದಿಲ್ಲದೇ ಸುಧಾರಿಸಿದ

ಸದ್ದು ಮಾಡುವವರ ಮಧ್ಯೆ

ಕಮ೯ಕ್ಕೆ ತಾರುಣ್ಯ ತಂದುಕೊಟ್ಟ

ಮಹಾತ್ಮನ ಕೋಲು ಹಿಡಿದುಕೊಂಡೇ

ಹೊರಟು ನಿಂತ ಭ್ರಷ್ಟಾಚಾರದ ವಿರುದ್ಧ

ಮತ ಹಾಕುವ ದಿನವನ್ನು ರಜೆಯಾಗಿ

ಅನುಭವಿಸುವ ವಗಾ೯ವಗಿ೯

ಎದ್ದು ನಿಂತಿತ್ತು ಬೆನ್ನು ಹಿಂದೆ, ಮುಂದೆ

ಜೈಕಾರ, ಜೈಘೋಷ

ಅಣ್ಣಾ ಬಂದೇ ಬಿಟ್ಟ, ಗಾಂಧಿ ಪ್ರತಿರೂಪಿ

ತಂದೇ ಬಿಟ್ಟ ಭ್ರಷ್ಟಾಚಾರ ಮುಕ್ತ

ಸ್ವಾತಂತ್ರ್ಯ, ಬದಲಾಗೇ ಹೊಯ್ತು

ಎಂಬ ನಿಟ್ಟಿಸಿರುವ ಬಿಡುವ ಮೊದಲೇ

ಅಲ್ಲಲ್ಲಿ ವೈರುಧ್ಯ, ವೈರತ್ವ ಹೆಡೆ

ಎತ್ತಿ ಕುಕ್ಕುವಾಗಲೇ ಕುಳಿತು ಬಿಟ್ಟ

ಅನ್ನ ನೀರು ಬಿಟ್ಟು ಅಣ್ಣ

ಬದಲಾವಣೆ ರಿಮೋಟ್ ಕಂಟ್ರೋಲ್ಲಾ..?

ಹಾಗಿದ್ದರೆ ಎಷ್ಟು ಚೆನ್ನಣ್ಣ.

ಹೇಗಿದ್ದರೂ ಹಾಗಿದ್ದರೂ

ಏನಂದರೂ ಏನ್ ಅನ್ನದಿದ್ದರೂ

ನಮ್ಮೊಳಗೇ ಕಿಚ್ಚು ಹಚ್ಚಿದ್ದು ಮಾತ್ರ

ನಿಜವಣ್ಣ, ರಜೆಯ ಮಜೆಯಲ್ಲಿದ್ದ

ಮಂದಿಯನ್ನು ಕೊಂಚವಾದರೂ

ಎಬ್ಬಿಸಿದೆಯಲ್ಲ ನಿನಗಿದೋ ಸಲಾಂ





ಗುರುವಾರ, ಆಗಸ್ಟ್ 25, 2011

ಸಾರಿ ಪ್ರೇಮ್... ಯು ಆರ್ ನಾಟ್ ಎ ಜೋಗಿ ಪ್ರೇಮ್!

ತುಂಬಾ ನಿರೀಕ್ಷೆ ಇಟ್ಟುಕೊಂಡು ಜೋಗಯ್ಯ ನೋಡಲು ಹೋಗಿದ್ದೆ. ಆದರೆ, ಸಿನಿಮಾ ನೋಡುತ್ತಿದ್ದ ಅರೆಗಳಿಗೆಯಲ್ಲೇ ನಿರೀಕ್ಷೆಯಲ್ಲಿ ಠುಸ್ ಆಯ್ತು. ಹ್ಯಾಟ್ರಿಕ್ ಸೂಪರ್ ಚಿತ್ರಗಳನ್ನು ನೀಡಿದ್ದ ಪ್ರೇಮ್, ಜೋಗಯ್ಯ ಚಿತ್ರವನ್ನು ಕಥೆಯಿಲ್ಲದೇ ಎಳೆಯಬಾರದಿತ್ತು. ಪ್ರಥಮಾಧ೯ದಲ್ಲಿ ರವಿಶಂಕರ್ ಪಾತ್ರ ನಿಮಗೆ ಕೊಂಚ ರಿಲೀಫ್ ನೀಡುತ್ತದೆ. ಅದೇ ಪಾತ್ರವನ್ನು ದ್ವಿತೀಯಾಧ೯ದಲ್ಲೂ ವಿಸ್ತರಿಸಿದ್ದರೆ ವೀಕ್ಷಕನಿಗೆ ಕೊಂಚವಾದರೂ ನೆಮ್ಮದಿ ಸಿಗುತ್ತಿತ್ತು.


ಅಷ್ಟಕ್ಕೂ ಈ ಚಿತ್ರದ ಕಥೆ ಏನು ಎಂದು ಹುಡುಕಲು ಹೊರಟರೆ ನಿಮ್ಮಂಥ ಮೂಖ೯ರು ಯಾರು ಇಲ್ಲ. ಯಾಕೆಂದರೆ ಕಥೆ ಇಲ್ಲದೆ ಸಿನಿಮಾ ಹೇಗೆ ಮಾಡಬಹುದು ಎಂಬುದನ್ನು ಪ್ರೇಂರಿಂದ ಕಲಿಯಬಹುದು(?). ಕೇವಲ್ ಗಿಮಿಕ್ ಗಳಿಂದ ಚಿತ್ರವನ್ನು ಗೆಲ್ಲಿಸುವುದಾದರೆ ಇಷ್ಟೊತ್ತಿಗೆ ಸುಮಾರು ಚಿತ್ರಗಳು ಗೆಲ್ಲಬೇಕಾಗಿತ್ತು. ಯಾವುದೇ ಗಿಮಿಕ್ ಮಾಡಿದರೂ ಪ್ರೇಕ್ಷಕನನ್ನು ಎರಡು ದಿನಗಳವರೆಗೆ ಚಿತ್ರಮಂದಿರಕ್ಕೆ ಬರವಂತೆ ಮಾಡಬಹುದೇ ಹೊರತು ಪೂತಿ೯ಯಾಗಿಲ್ಲ. ಒಂದು ಚಿತ್ರ ಯಶಸ್ವಿಯಾಗಲು ಗಿಮಿಕ್(ಅತಿಯಾದ ಗಿಮಿಕ್ ಅಲ್ಲ) ಕೂಡಾ ಒಂದು ಅಂಶವಷ್ಟೇ. ಅದನ್ನೇ ನೆಚ್ಚಿಕೊಂಡರೆ ಜೋಗಯ್ಯ ತರಹವಾಗುತ್ತದೆ. ಯಾಕೆಂದರೆ, ಚಿತ್ರ ಬಿಡುಗಡೆಯ ಮುಂಚೆಯೇ ನೀವು ಬೆಟ್ಟದಷ್ಟು ನಿರೀಕ್ಷೆ ಮೂಡಿಸುತ್ತೀರಿ. ಆ ಚಿತ್ರವನ್ನು ನೋಡಿ ಹೊರ ಬಂದಾಗ ಪ್ರೇಕ್ಷಕನ ಮನದಲ್ಲಿ ನಿರೀಕ್ಷೆ ಠುಸ್ಸಾಗಿದ್ದರೆ ಮುಗೀತು ಚಿತ್ರದ ಕಥೆ ಅಲ್ಲಿಗೆ. ನೀವು ಎಷ್ಟು ನಿರೀಕ್ಷೆಯನ್ನು ಹೆಚ್ಚಿಸುತ್ತೀರೋ ಅಷ್ಟೇ ಚೆನ್ನಾಗಿ ಚಿತ್ರವನ್ನು ನಿರೂಪಿಸಬೇಕು. ಆಗಲೇ ಪ್ರೇಕ್ಷಕ ಮರಳಿ ಚಿತ್ರಮಂದಿರಕ್ಕೆ ಹೋಗಲು ಸಾಧ್ಯ. ಆದರೆ, ಪ್ರಚಾರ ಮಾಡಿದಂತೆ ಎಷ್ಟೋ ಸಿನಿಮಾಗಳು ಹಾಗೆ ಇರುವುದೇ ಇಲ್ಲ. ಪ್ರಚಾರ ನಂಬಿ ಚಿತ್ರಮಂದಿರಕ್ಕೆ ಹೋದರೆ ನಿರಾಶೆ ಗ್ಯಾರಂಟಿ. ಜೋಗಯ್ಯ ಕೂಡಾ ಇದೇ ಸಾಲಿಗೆ ಸೇರುತ್ತದೆ.

ಇದರ ಮಧ್ಯೆಯೇ, ಶಿವಣ್ಣ ಜೋಗಯ್ಯದಲ್ಲಿ ಅಚ್ಚರಿ ಮೂಡಿಸುತ್ತಾರೆ. ಅಭಿಯನಕ್ಕೆ ಸಂಬಂಧಿಸಿದಂತೆ ತುಂಬಾ ಸಾಧ್ಯತೆಗಳನ್ನು ಹೊರ ಹಾಕುವುದಕ್ಕೆ ತಮ್ಮಿಂದ ಸಾಧ್ಯ ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ. ಚಿತ್ರದಲ್ಲಿ ಅವರು ವೈಸ್ ಮಾಡ್ಯೂಲೇಷನ್ ಗೆ ಪ್ರಯತ್ನಿಸಿದ್ದಾರೆ. ಚಿತ್ರ ನೋಡುವಾಗ ಕೆಲವು ಸನ್ನಿವೇಶಗಳಲ್ಲಿ ಅವರ ಮುಖ ಭಾವ ರಾಜಕುಮಾರ ಅವರನ್ನು ನೆನಪಿಸಿದರೆ ಅದು ಅವರ ಅಭಿನಯಕ್ಕೆ ಸಂದ ಜಯ.

ಇನ್ನು ಚಿತ್ರದ ಹಾಡುಗಳ ವಿಷಯಕ್ಕೆ ಬಂದರೆ ವಿ.ಹರಿಕೖಷ್ಣ ಫುಲ್ ಸ್ಕೋರ್ ಮಾಡುತ್ತಾರೆ. ಅದ್ಭುತ ಎನ್ನುವಂಥ ಟ್ಯೂನ್ ಗಳನ್ನು ಕೊಟ್ಟಿಲ್ಲವಾದರೂ ಇಂಪಾಗಿವೆ. ಮನಸ್ಸಿಗೆ ಹಿಡಿಸುತ್ತವೆ. ಹಾಗೆಯೇ ಹಾಡುಗಳನ್ನು ಚಿತ್ರೀಕರಣ ಮಾಡಿರುವ ಪರಿ ಹಾಗೂ ಅವುಗಳ ಕಲ್ಪನೆಯಲ್ಲಿ ಪ್ರೇಮ್ ಗೆಲ್ಲುತ್ತಾರೆ. ಅದೇ ಕಲ್ಪನೆ, ರೀತಿ, ಕ್ರಮವನ್ನು ಸ್ಕ್ರೀನ್ ಪ್ಲೆ, ಕಥೆ, ನಿದೇ೯ಶನದಲ್ಲಿ ತೋರಿದ್ದರೆ ಜೋಗಯ್ಯ ಅದ್ಭುತ ಚಿತ್ರವಾಗುತ್ತಿತ್ತು. ಆದರೆ, ಪ್ರೇಮ್ ಸಂಪೂಣ೯ವಾಗಿ ಎಡವಿದ್ದಾರೆ. ಅವರಷ್ಟೇ ಎಡುವುದಲ್ಲದೇ ಪ್ರೇಕ್ಷಕರನ್ನು ಕೂಡಾ ಎಡುವಂತೆ ಮಾಡುತ್ತಿದ್ದಾರೆ. ನಾವು ಚಿತ್ರವನ್ನು ಹಾಗೆ ತೆಗೆದಿದ್ದೇವೆ. ಹೀಗೆ ತೆಗಿದಿದ್ದೇವೆ. ಅಷ್ಟೊಂದು ಕಷ್ಟಪಟ್ಟಿದ್ದೇವೆ. ಇಷ್ಟೊಂದು ಕಷ್ಟಪಟ್ಟಿದ್ದೇವೆ ಎಂದು ಟೀವಿಗಳಲ್ಲಿ ಹೇಳುತ್ತಿದ್ದಾರೆ ಪ್ರೇಮ್. ನೀವು ಕಷ್ಟಪಟ್ಟಿದ್ದು ನಿಜವೇ ಇರಬಹುದು. ನಿಮ್ಮ ಕಷ್ಟಕ್ಕೆ ಬಲ, ಫಲ ಸಿಗಬೇಕಿದ್ದರೆ ಚಿತ್ರದ ಒಟ್ಟು ಫಲಿತಾಂಶವನ್ನು ನಿಧ೯ರಿಸುತ್ತದೆ ಎಂಬುದನ್ನು ಮರೆಯಬಾರದು. ಪ್ರೇಮ್ ತುಂಬಾ ಕಷ್ಟಪಟ್ಟಿದ್ದಾರೆಂದು ಎಂದು ನಿಮಗಿರುವ ಅಭಿಮಾನಿಗಳು ಚಿತ್ರಮಂದಿರಕ್ಕೆ ಹೋಗಬಹುದು. ಆದರೆ, ಕೇವಲ ಉತ್ತಮ ಚಿತ್ರಗಳನ್ನು ನೋಡಬೇಕು ಎಂದು ಅಭಿಮಾನ ಇಟ್ಟುಕೊಂಡವರನ್ನು ನೀವು ಚಿತ್ರಮಂದಿರಕ್ಕೆ ಎಳೆಯಲು ಸಾಧ್ಯವಿಲ್ಲ. ಅವರೂ ಬಂದಾಗಲೇ ಚಿತ್ರ ಗೆಲ್ಲೋದು. ಅಂದರೆ, ಒಂದು ಚಿತ್ರ ಗೆಲ್ಲಬೇಕಾದರೆ ಎಲ್ಲ ವಗ೯ದ ಜನರು ಬರವಂತಾಗಬೇಕು. ಬರಬೇಕು. ಆಗಲೇ ಗೆಲವು ಅಲ್ಲವೇ..?

ಜೋಗಯ್ಯ ಇಡೀ ಚಿತ್ರವಾಗಿ ಇಷ್ಟ ಆಗೋದಿಲ್ಲ. ಹಾಡುಗಳಿಗೆ ಇಷ್ಟವಾಗುತ್ತದೆ. ಕೆಲವು ದೖಶ್ಯಗಳಾಗಿ ಇಷ್ಟವಾಗುತ್ತದೆ ಅಷ್ಟೆ. ಬಿಡಿ ಬಿಡಿಯಾಗಿ ಚಿತ್ರ ಇಷ್ಟವಾಗುವುದಾದರೆ ಗೆಲ್ಲವುದು ಹೇಗೆ..? ಚಿತ್ರಕಥೆಯಲ್ಲಿ ಬಿಗುವಿಲ್ಲ. ಶಿವಣ್ಣನ ನೂರನೇ ಚಿತ್ರವಾಗಿರುವುದರಿಂದ ಸಶಕ್ತ ವಿಲನ್ ಕ್ಯಾರೆಕ್ಟರೇ ಇಲ್ಲ!!.

ಇದಿಷ್ಟು ಜೋಗಯ್ಯ ನೋಡಿದ ಮೇಲೆ ನನಗನ್ನಿಸಿದ್ದು. ನನಗೆ ಅನ್ನಿಸಿದ ಹಾಗೆಯೇ ನಿಮಗೆ ಅನ್ನಿಸಬೇಕಿಲ್ಲ. ನಿಮಗೆ ಇಷ್ಟವಾಗಬಹುದು. ಪ್ರೇಮ್ ಮೇಲೆ ತುಂಬಾ ಅಭಿಮಾನ ಇಟ್ಟುಕೊಂಡು, ನಿರೀಕ್ಷೆ ಇಟ್ಟುಕೊಂಡಿದ್ದರಿಂದ ನನಗೆ ಹಾಗೆ ಅನ್ನಿಸರಬಹುದು ಕೂಡಾ. ಇದು ನನ್ನ ಪ್ರಾಮಾಣಿಕ ಅನಿಸಿಕೆ ಅಷ್ಟೇ.

ಸಾರಿ ಪ್ರೇಮ್... ಯು ಆರ್ ನಾಟ್ ಎ ಜೋಗಿ ಪ್ರೇಮ್!
ಹೀಗೆ ಹೇಳದೇ ಬೇರೆ ದಾರಿ ಇಲ್ಲ.



ಬುಧವಾರ, ಅಕ್ಟೋಬರ್ 27, 2010

ಸಚಿನ್ಮಯ- ಕೇವಲ ದಾಖಲೆಗಾಗಿ ಅಲ್ಲ


ಸಚಿನ್ ತೆಂಡೂಲ್ಕರ್.

ಈ ಹೆಸರೇ ಪ್ರೇರಕ. ಸ್ಪೂರ್ತಿ. ವಿಶ್ವ ಕ್ರಿಕೆಟ್ ನ ಸಾಮ್ರಾಟನ ಬಗ್ಗೆ ಎಷ್ಟೇ ಬರೆದರೂ ಸಾಲದು. ಸಚಿನ್ ಈಗ ಎಲ್ಲ ಪದಗಳನ್ನು ಮೀರಿ ನಿಂತಿದ್ದಾರೆ. ಅವರ ಸಾಧನೆ ಬಣ್ಣಿಸಲು ಪದಗಳು ಸಾಲುವುದಿಲ್ಲ. ಸಚಿನ್ ಬಣ್ಣನೆಗೆ ಯಾವುದೇ ಪದ ಬಳಸಿದರೂ ಆ ಪದ ಅವರ ಸಾಧನೆಯನ್ನು ಪೂರ್ತಿಯಾಗಿ ಪರಿಚಯಿಸುವುದಿಲ್ಲ. ಒಬ್ಬ ವ್ಯಕ್ತಿ ಕ್ರೀಡೆಯಿಂದಲೇ ದೇವರ ಸ್ಥಾನಕ್ಕೇರುತ್ತಾರೆಂದರೆ ಅದು ಸಾಮಾನ್ಯದ ಮಾತೇನು..ಕ್ರೀಡೆಯತ್ತ ಸಚಿನ್ ಅವರಿಗಿರುವ ಬದ್ಧತೆಯನ್ನು ಯಾರು ಪ್ರಶ್ನಿಸಲಾಗದು. ಇದಕ್ಕೆ ಮತ್ತೊಂದು ತಾಜಾ ಉದಾಹರಣೆಯೆಂದರೆ, ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿನ ದ್ವಿಶತಕ. 37ನೇ ವಯಸ್ಸಿನಲ್ಲಿ ಸಚಿನ್ ಇನ್ನು 18ರ ಹರೆಯದ ಹುಡುಗನ ರೀತಿ ಆಡುತ್ತಾರೆಂದರೆ, ಅದು ಅವರ ಸಾಮರ್ಥ್ಯದ ಸಾಕ್ಷಿ. ಸಚಿನ್ ಗೆ ವಯಸ್ಸಾಯಿತು. ಹೀಗೆ ಜರಿದವರಿಗೆ ಅವರು ಬ್ಯಾಟಿಂಗ್ ನಿಂದಲೇ ಉತ್ತರ ನೀಡುತ್ತಾರೆ. ತುಟಿಪಿಟಿಕ್ ಎನ್ನುವುದಿಲ್ಲ. ಈ ಗುಣವೇ ಅವರನ್ನು ವಿಶ್ವ ಕ್ರಿಕೆಟ್ ನ ಅತ್ಯುಚ್ಛ ಸ್ಥಾನಕ್ಕೇರಿಸಿದೆ. ಆನೆ ನಡೆದಿದ್ದೇ ದಾರಿ ಎನ್ನುವಂತೆ ಸಚಿನ್ ಎಂಬ ಅಶ್ವಮೇಧ ಓಟಕ್ಕೆ ಯಾರೂ ಕಡಿವಾಣ ಹಾಕಲು ಸಾಧ್ಯವಿಲ್ಲ. ಅವರ ದಾಖಲೆಗಳನ್ನು ಭವಿಷ್ಯದಲ್ಲಿ ಯಾರಾದರೂ ಮುರಿಯಬಹುದು. ಆದರೆ, ಸದ್ಯಕ್ಕಂತೂ ಸಾಧ್ಯವಿಲ್ಲದ ಮಾತು ಬಿಡಿ. ರನ್ ಗಳ ಶಿಖರ ಏರಿ ಕುಳಿತಿರುವ ಸೂರ್ಯ ಶಿಕಾರಿ ಸಚಿನ್. ಇದಕ್ಕೆ ಅವರು ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ನಲ್ಲಿ ಆಡಿದ ಪರಿಯೇ ಸಾಕ್ಷಿ. ಸಚಿನ್ ಅವರ ಒಂದೊಂದು ಹೊಡೆತಕ್ಕೂ ಚಿನ್ನಸ್ವಾಮಿ ಅಂಗಣದಲ್ಲಿ ಪ್ರೇಕ್ಷರ ಓಹೋ ಎನ್ನುವ ಲಹರಿ. ಅದರೊಳಗೆ ಸಚಿನ್ ಗುಣಗಾನ.ಸಚಿನ್ ಬ್ಯಾಟ್ ಹಿಡಿದು ಕ್ರಿಸ್ ಗೆ ಇಳಿದರೆ ಸಾಕು. ದಾಖಲೆಗಳ ಮೇಲೆ ದಾಖಲೆಗಳು ದಾಖಲಾಗುತ್ತಾ ಹೋಗುತ್ತವೆ. ಟೆಸ್ಟ್ ಕ್ರಿಕೆಟ್ ನಲ್ಲಿ 49 ಶತಕ ಸಿಡಿಸಿರುವ ಈ ಸಿಡಿಲಮರಿಗೆ ಶತಕಗಳ ಅರ್ಧಶತಕಕ್ಕೆ ಇನ್ನೊಂದೇ ಶತಕ ಸಾಕು. ಅದು ಮುಂಬರುವ ನ್ಯೂಜಿಲೆಂಡ್ ಸರಣಿಯಲ್ಲಿ ಈ ಸಾಕಾರುಗೊಳ್ಳತ್ತದೆ. ಇದರಲ್ಲಿ ಅನುಮಾನ ಬೇಡ. ಏಕದಿನ ಪಂದ್ಯಗಳಲ್ಲಿ 46 ಶತಕ ಸಿಡಿಸಿದ್ದಾರೆ. ಇಲ್ಲಿಯೂ ಶತಕಗಳ ಅರ್ಧಶತಕಕ್ಕೆ ಅಡಿ ಇಡಲು ಬಹಳ ದಿನ ಕಾಯಬೇಕಿಲ್ಲ. ಎರಡೂ ಮಾದರಿಯ ಕ್ರಿಕೆಟ್ ನಲ್ಲಿ ಶತಕಗಳ ಶತಕ ದಾಖಲಿಸುವ ಕ್ಷಣಕ್ಕೆ ಭಾರತ ಮಾತ್ರವಲ್ಲ ಇಡೀ ವಿಶ್ವವೇ ಕಾದುಕುಳಿತಿದೆ. ಆ ಗಳಿಗೆ ಯಾವಾಗ... ಇನ್ನೇನೂ ದೂರವಿಲ್ಲ ಬಿಡಿ. ಎರಡೂ ಮಾದರಿಯ ಕ್ರಿಕೆಟ್ ನಿಂದ ಸಚಿನ್ ಇದೂವರೆಗೆ ಬರೋಬ್ಬರಿ 31838 ರನ್ ಗಳಿಸಿದ್ದಾರೆ. ಅಬ್ಬಾ... ಸಚಿನ್.ಇತ್ತೀಚೆಗಷ್ಟೇ, ಐಸಿಸಿ ವರ್ಷದ ವ್ಯಕ್ತಿ ಹಾಗೂ ಜನರ ಆಯ್ಕೆ ಪ್ರಶಸ್ತಿಯನ್ನು ಸಚಿನ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇದುವರೆಗೂ ಐಸಿಸಿ ಪ್ರಶಸ್ತಿ ಸಿಕ್ಕಿಲ್ಲವಲ್ಲ ಎಂಬ ಅವರ ಅಭಿಮಾನಿಗಳ ಕೊರಗು ಕೂಡಾ ಕೊನೆಯಾಗಿದೆ. ಈ ಸಂದರ್ಭದಲ್ಲಿ ಅವರು, ಎಲ್ಲಾ ಪ್ರಶಸ್ತಿಗಳಿಗಿಂತ ಜನರ ಆಯ್ಕೆಯ ಪ್ರಶಸ್ತಿ ತುಂಬಾ ಖುಷಿ ಕೊಡುತ್ತದೆ ಎಂದಿರುವುದು ಅವರ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ.ಒಬ್ಬ ವ್ಯಕ್ತಿ ಸುಖಾಸುಮ್ಮನೇ ಉನ್ನತ ಸ್ಥಾನಕ್ಕೇರುವುದಿಲ್ಲ. ಅದರಲ್ಲೂ ಮಹಾತ್ಮನ ಸ್ಥಾನಕ್ಕೇರುವುದೆಂದರೆ ಮನುಷ್ಯ ಸಹಜ ಎಲ್ಲ ಗುಣಧರ್ಮಗಳನ್ನು ಬಿಟ್ಟುಕೊಡಬೇಕು. ಭಾರತದಲ್ಲಿ ಈ ಸ್ಥಾನಕ್ಕೇರಿದವರೆಂದರೆ ಇಬ್ಬರೇ. ಒಬ್ಬರು ಮಹಾತ್ಮ ಗಾಂಧಿಜಿ. ಇನ್ನೊಬ್ಬರು ಸಚಿನ್ ತೆಂಡೂಲ್ಕರ್. ಅದಕ್ಕೆ ಅವರನ್ನು ಕ್ರಿಕೆಟ್ ದೇವರು ಎಂದು ಅಭಿಮಾನಿಗಳು ಕರೆಯುವುದು. ಯಾವುದೇ ಕ್ರಿಕೆಟ್ ನಲ್ಲಿ 30, 32 ವಯಸ್ಸು ಎಂದರೆ ಅದು ನಿವೃತ್ತಿ ವಯಸ್ಸು. ಆದರೆ, ಸಚಿನ್ ಮಾತ್ರ ಹೊರತಾಗಿದ್ದಾರೆ. 37ನೇ ವಯಸ್ಸಿನಲ್ಲೂ ಅವರು ಕ್ರಿಕೆಟ್ ಆಡುವ ಪರಿಯನ್ನು ಗಮನಿಸಿದರೆ ಸಚಿನ್ ಗೆ ಸಚಿನ್ ಸಾಟಿ. ಅವರು ತಮಗೆ ಬೇಕಾಗುವಷ್ಟು ಕ್ರಿಕೆಟ್ ಆಡುವವರು ಎಂಬುದರಲ್ಲಿ ಅನುಮಾನವಿಲ್ಲ. ತಮ್ಮ ಸಮಕಾಲೀನ ಎಲ್ಲ ಬೌಲರ್ ಗಳಿಗೂ ನೀರು ಕುಡಿಸಿರುವ ಸಚಿನ್, ಬ್ಯಾಟಿಂಗ್ ನ ಅದ್ವಿತೀಯ. ಮಹಾನ್ ಕ್ರಿಕೆಟಿಗ ಎಂದು ಹೇಳುವುದು ಕ್ಲಿಷೆಯಷ್ಟೇ. ಸಚಿನ್ ಕೇವಲ ಆಟದಲ್ಲಷ್ಟೇ ಮಾದರಿಯಲ್ಲ. ಒಬ್ಬ ಸೆಲಿಬ್ರಿಟಿ ಹೇಗೆ ಇರಬೇಕು ಎಂಬುದಕ್ಕೂ ಸಚಿನ್ ಮಾದರಿ. ಸಚಿನ್ ಕೇವಲ ದಾಖಲೆಗೋಸ್ಕರ ಆಡುತ್ತಾರೆ. ಅವರಿಗೆ ದೇಶ ಮುಖ್ಯವಲ್ಲ ಎಂದು ವಿರೋಧಿಗಳು ಟೀಕಿಸಬಹುದು. ಆದರೆ, ಇದು ನೂರಕ್ಕೆ ನೂರರಷ್ಟು ಸುಳ್ಳು. ವ್ಯಕ್ತಿಯೊಬ್ಬ ಕೇವಲ ದಾಖಲೆಗಳಿಗೋಸ್ಕರ ಆಡುವುದಾದರೆ, ಕ್ರಿಕೆಟ್ ನಲ್ಲಿ ಇಷ್ಟೊಂದು ವಷ ಆಡಲು ಸಾಧ್ಯವೇ... ಮುಂಬೈ ಮರಾಠಿಗರಿಗೆ ಸೇರಿದ್ದು ಎಂದು ಕಿರಿಕಿರಿ ನಾಯಕ ಬಾಳಾ ಠಾಕ್ರೆಗೆ ತಿರುಗೇಟು ನೀಡಿದ ಸಚಿನ್, ಮುಂಬೈ ಎಲ್ಲರಿಗೂ ಸೇರಿದ್ದು ಎಂದು ಹೇಳುವ ಮೂಲಕ ಭವ್ಯ ಭಾರತದ ಏಕತೆಯನ್ನು ಸಾರಿದ್ದರು. ಅವರ ರಾಷ್ಟ್ರಭಕ್ತಿಗೆ ಇದೊಂದು ಉಕ್ತಿ ಸಾಲದೆ...ಸಚಿನ್ ಬಗ್ಗೆ ಯಾರೇ ಏನೇ ಹೇಳಲಿ. ಅವರೊಬ್ಬ ಅದ್ಭುತ ಕ್ರಿಕೆಟಿಗ ಮತ್ತು ವ್ಯಕ್ತಿ. ಎಲ್ಲ ಕಾಲಕ್ಕೂ ರೋಲ್ ಮಾಡಲ್. ಅವರಿಗೇ ಅವರೇ ಸಾಟಿ.
(ಕನ್ನಡಪ್ರಭದ 19-10-2010ರ ಕ್ರೀಡಾಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಬರಹ)

ಮಂಗಳವಾರ, ಮಾರ್ಚ್ 9, 2010

ಯಾಕೆಂದರೆ ಅವಳು ಹೆಣ್ಣು

ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದ್ದೇನೆ
ಒಬ್ಬರು ನಾನು ಹೀಗೆ ಇರಬೇಕು ಅಂದ್ರು
ಇನ್ನೊಬ್ಬರು ನಾನು ಹೀಗಿರಬಾರದು ಅಂದ್ರು
ಯಾರೂ ಕೇಳಲಿಲ್ಲ ನಾನ್ ಹೇಗೆ ಇರಬೇಕೆಂದು

ಮೀಸೆ ಮಂದಿ ಅರಿಯಲಿಲ್ಲ
ನನ್ನ ಆಂತಯ೯, ಕೇಳಲಿಲ್ಲ ಬಯಕೆ.
ಹೇರಿದರು ನನ್ನ ಮೇಲೆ ಅವರವರ ಭಾವ.
ತಿಂದುಂಡರು, ತೇಗಿ ಸುಸ್ತಾದರು.
ನನ್ನ ಸುಸ್ತು ಕೇಳಲಿಲ್ಲ, ಅರಿಯಲಿಲ್ಲ

ನಾಲ್ಕು ಗೋಡೆಗಳ ಮಧ್ಯೆ ನಿನ್ನ
ಬಾಳು, ಅಲ್ಲೇ ನಿನ್ನ ಜೀವನ
ಮಕ್ಕಳ ಹೇರು. ಹೊತ್ತೊತ್ತು
ಮಾಡು ಕೂಳು, ಕೇಳಬೇಡ
ಮತ್ತೇನನ್ನು ಯಾಕೆಂದರೆ ನೀನು ಹೆಣ್ಣು

ಇದೆಲ್ಲ ಆಗ...

ಈಗ ಕಾಲ ಉರುಳಿದೆ
ಇತಿಹಾಸದಲ್ಲಿ ಹೂತು ಹೋದವಳೇ
ನಿಮಿ೯ಸುತ್ತಿದ್ದಾಳೆ ಇತಿಹಾಸ
ಸವಾಲಾಗಿದ್ದಾಳೆ ನಾವೇ ಸಮ ಎನ್ನುವರಿಗೇ

ಮೈಲುಗಲ್ಲು ನೆಟ್ಟಿದ್ದಾಳೆ
ನಮ್ಮದೇ ಮೈಲುಗಲ್ಲು ಎನ್ನುವವರ ಮುಂದೆ
ದಾಟಿದ್ದಾಳೆ ಸಂಪ್ರದಾಯ,
ಭವ- ಬಂಧನಗಳನ್ನು ಮೀರಿದ್ದಾಳೆ
ಯಾಕೆಂದರೆ ಅವಳು ಹೆಣ್ಣು.

ಇದು ಈಗ...

ಶುಕ್ರವಾರ, ಜನವರಿ 29, 2010

ಹನಿಮೂನಗೆ ಕಾಶ್ಮೀರಕ್ಕೆ ಬರೋಣ ಕಣೋ...

ಹೇಗಿದ್ದೀಯಾ ಮುದ್ದು?

ನಿನ್ನನ್ನು ಸೇರಿಕೊಳ್ಳುವ ದಿನಗಳು ಸಮೀಪಿಸುತ್ತಿದ್ದಂತೆ ನನ್ನ ಮನಸ್ಸು, ಹೃದಯ ಉಲ್ಲಾಸದಿಂದ ತುಂಬಿ ತುಳುಕುತ್ತಿದೆ. ಉಳಿದಿರುವ ಒಂದು ವಾರ ಕೂಡಾ ಯುಗಯುಗದಂತೆ ಭಾಸವಾಗುತ್ತಿದೆ ಚಿನ್ನು. ನನ್ನ ತರಬೇತಿ ಮುಗಿದಿದೆ. ಈಗೇನಿದ್ದರೂ ಇಡೀ ಕಾಶ್ಮೀರವನ್ನು ಸುತ್ತಾಡಿ ಮರೆಯಲಾಗದ ನೆನಪು, ಅನುಭವವನ್ನು ಹೊತ್ತು ತರುವುದು ಅಷ್ಟೇ ನನ್ನ ಕೆಲಸ. ಆದರೂ ನಿನ್ನ ಸಾನ್ನಿಧ್ಯದಲ್ಲಿ ಸಿಗುವ ಸಂತೋಷ ನನಗೆ ಬೇರಲ್ಲೂ ಸಿಗಲ್ಲ ಕಣೋ. ಹಾಂ.... ಹಾಗೆಂದಕ್ಷಣಾ ನಾನು ಖುಷಿಯಿಂದ ಕಾಶ್ಮೀರ ಸುತ್ತುತ್ತಿದ್ದೇನೆ ಎಂದು ಭಾವಿಸಬೇಡ. ನೀನಲ್ಲದ ಭಾವ ನನ್ನ ಸದಾ ಕೊರೆಯತ್ತಲೇ ಇರುತ್ತದೆ. ನಾವಿಬ್ಬರೂ ಸಪ್ತಪದಿ ತುಳಿದ ನಂತರ ಮತ್ತೆ ಕಾಶ್ಮೀರಕ್ಕೆ ಬರೋಣ. ನಿಜವಾಗಲೂ ಕಾಶ್ಮೀರ "ಪ್ರೇಮಕಾಶ್ಮೀರ" ಕಣೋ ಇದು. ಪ್ರೇಮಿಗಳಿಗಾಗಿಯೇ ಭೂಮಿ ಮೇಲೆ ದೇವರು ಸೃಷ್ಟಿಸಿರುವ ಪ್ರೇಮಲೋಕ. ಆದರೂ, ಈ ಕ್ಷಣದಲ್ಲಿ ನೀನು ನನ್ನ ಬಳಿ ಇಲ್ಲ ಎಂಬುದೇ ನನ್ನ ದುಃಖಕ್ಕೆ ಕಾರಣ. ಚಿನ್ನು.. ಸುಮ್ಮನೇ ಏನೇನೋ ಕಲ್ಪಿಸಿಕೊಂಡು ಭಯಭೀತಗೊಳ್ಳಬೇಡ. ನೀನು ಅಂದುಕೊಂಡ ಹಾಗೆ ನಮ್ಮಪ್ಪ ನಮ್ಮಿಬ್ಬರ "ಅಮರಪ್ರೇಮ"ವನ್ನು ಹಾಳು ಮಾಡಲಾರ. ಯಾಕೆಂದರೆ ನಂಗೆ ಗೊತ್ತು... ನಮ್ಮಪ್ಪ ಒರಟನಂತೆ ಕಂಡರೂ ಹೃದಯ ಬಲು ಮೆದು. ಸಮಾಜಕ್ಕೆ ಹೆದರಿ ಜಾತಿ ಬಗ್ಗೆ ಮಾತನಾಡುತ್ತಾನೇ ಹೊರತು ಅವನೇನೂ ಪ್ರೀತಿಯ ಶತ್ರುವಲ್ಲ. ನಿಂಗೆ ಗೊತ್ತಾ...? ನಾನು ನನ್ನ ಅವ್ವನಿಗಿಂತಲೂ ಹೆಚ್ಚು ಹಚ್ಚಿಕೊಂಡಿದ್ದು ಅಪ್ಪನನ್ನೇ. ಆತ ಎಂದೆಂದಿಗೂ ನನ್ನ ಆಸೆ, ಆಕಾಂಕ್ಷೆಗಳನ್ನು ಭಗ್ನಗೊಳಿಸಲಾರ ಮುದ್ದು. ಧೈರ್ಯವಾಗಿರು. ಈ ಜೀವ ಇರುವುದೇ ನಿನಗಾಗಿ. ನನ್ನನ್ನು ನಾನು ಪ್ರೀತಿಸಿಕೊಳ್ಳುವ ಸಾವಿರ ಪಟ್ಟು ಹೆಚ್ಚು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನಮ್ಮಿಬ್ಬರ ಈ ನಿಷ್ಕಲ್ಮಷ ಪ್ರೀತಿಗೆ ಜಾತಿ-ಪಾತಿ ಯಾವ ಲೆಕ್ಕ. ಪ್ರೇಮಿಗಳೆಂದರೇ ಎಲ್ಲ ಲೆಕ್ಕವನ್ನು ಬುಡುಮೇಲು ಮಾಡವವರು ಅಲ್ವಾ...? ಇನ್ನು ಒಂದೇ ಒಂದು ವಾರ. ನಾನು ನಿನ್ನ ತೆಕ್ಕೆಯಲ್ಲಿರುತ್ತೇನೆ. ಅಲ್ಲದೇ, ನೀನೇ ನನಗೆ ಪ್ರಪಂಚ. ನಾನೇ ನಿನಗೆ ಪ್ರಪಂಚ. ಬಾಕೀ ಪ್ರಪಂಚ ಬರೀ ನೆಪ ಮಾತ್ರ. ತಿಳೀತಾ ಕೋತಿ..


-ನಿನ್ನವಳು

ಶನಿವಾರ, ಜನವರಿ 23, 2010

ಜಾತಿಯ ಕೂಪದಲ್ಲಿ ಬೀಳದಿರಲಿ ಪ್ರೀತಿ.....

ಹಾಯ್ ಹೃದಯೇಶ್ವರಿ,


ಈಗೀಗ ಮನಸ್ಸು ಮುಂದಿನದನ್ನು ನೆನೆಸಿಕೊಂಡು ಭಯ ಬೀಳುತ್ತಿದೆ. ಯಾಕೆ ಗೊತ್ತಿಲ್ಲ. ನಮ್ಮಿಬ್ಬರ ಪ್ರೀತಿ ಮದುವೆ ಎಂಬ ಸುಂದರ ಕಲ್ಪನೆಯಲ್ಲಿ ಬಂಧಿಯಾಗುತ್ತದಾ...? ನಾವಿಬ್ಬರೂ ಪ್ರಮಾಣ ಮಾಡಿದಂತೆ ಕೊನೆವರೆಗೂ ಜತೆಯಾಗೇ ಇರುತ್ತೇವೆ..? ಎಂಬ ದುಗುಡ ಕಾಡುತ್ತಿದೆ. ಅಷ್ಟಕ್ಕೂ ಇಂಥ ಅಪಶಕುನ ಪ್ರಶ್ನೆಗಳು ಅದೇಕ ಏಳುತ್ತಿವೆ ಎಂಬುದಕ್ಕೆ ನನ್ನಲ್ಲಿ ಉತ್ತರವಿಲ್ಲ ಜಾಣೆ.

ಯಾರಿಗೆ ಬೇಕು ಈ ಲೋಕ


ಮೋಸಕ್ಕೆ ಇಲ್ಲಿ ಕೈ ಮುಗಿಬೇಕಾ


ಪ್ರೀತಿಯೇ ಹೋದರೂ ಇರಬೇಕಾ..?


ಈ ಹಾಡು ಎಫ್ಎಂನಲ್ಲಿ ಕೇಳುತ್ತಿದ್ದಂತೆ ನಮ್ಮಿಬ್ಬರ ಬಿಡಿಸಲಾಗದ ಈ ಪ್ರೀತಿಯ ಗಂಟನ್ನು ಜಾತಿ ಎಂಬ ಎರಡಕ್ಷರಗಳು ಬಿಸಿಡಿಸಿದರೆ ಎಂಬ ಆತಂಕ ಶುರುವಾಗಿದೆ. ಬಿಡಿಸಿದರೆ ಖಂಡಿತವಾಗಿಯೂ ನಾನು ನಾನಾಗಿಯೇ ಇರಲ್ಲ ಚಿನ್ನು. ಹುಚ್ಚನಾದರೂ ಆದೆ, ವ್ಯಸನಿಯಾದರೂ ಆದೇನು. ಪ್ರೀತಿಯ ವ್ಯಸನಿಯಾದ ಮೇಲೆ ಇದು ಸಹಜ ಎನ್ನುತ್ತಾನೆ ನನ್ನ ಭಗ್ನ ಪ್ರೇಮಿ ಗೆಳೆಯನೊಬ್ಬ. ನಾವು ಭಗ್ನಪ್ರೇಮಿಗಳಾದರೆ...? ಖಂಡಿತ ಹಾಗೆ ಆಗುವುದು ಬೇಡ ಎಂಬ ಹಾರೈಕೆ, ಓಲೈಕೆ ನನ್ನದು. ಆದರೆ, ವಿಧಿಯಾಟ ಯಾರು ಬಲ್ಲರು. ಚಿನ್ನು ಒಂದು ಮಾತು ಹೇಳಲಾ...? ನಾನು ಹುಡುಗನಾದರೂ ನನಗಿಂತ ಧೈರ್ಯ ನಿನಗೇ ಹೆಚ್ಚು. ನಮ್ಮ ಪ್ರೀತಿಯ ಯಶಸ್ಸಿನ ಬಗ್ಗೆ ಹೆಚ್ಚು ಕನಸು ಕಾಣುತ್ತಿರುವಳು ನೀನೇ. ಹೀಗಿದ್ದಾಗ್ಯೂ.. ನಿಮ್ಮಪ್ಪನ ಭಯಂಕರ ಜಾತಿ ಪ್ರೇಮ ನೆನೆದು ನನ್ನ ಚಿಕ್ಕಪುಟ್ಟ ದುಗುಡಗಳು ಬೆಳೆದು ಭೂತಾಕಾರ ಪಡೆಯುತ್ತಿವೆ ಬೇಗ ಬಾ ನೀನು. ಜತೆಗಿದ್ದರೆ ನೀನು ಇಂಥ ದುಗುಡ- ದುಮ್ಮಾನಗಳು ನನ್ನಷ್ಟು ಕಾಡಲಾರವು.


ಇನ್ನೊಂದು ವಿಷಯ ಗೊತ್ತಾ...? ಇಷ್ಟೆಲ್ಲ ಮನಸ್ಸಿನ ಕಿರಿಕಿರಿ ನಡುವೆ ನಾನು ನಿನ್ನೊಂದಿಗೆ ಕಳೆದ ಪ್ರತಿಕ್ಷಣಗಳು ದುಗುಡದ ಮರುಗಳಿಗೆಯಲ್ಲಿ ಉಲ್ಲಾಸಿತಗೊಳಿಸುತ್ತೇವೆ. ಅದೇ ನಿನ್ನ ಶಕ್ತಿ ಹೃದಯೇಶ್ವರಿ. ಅದನ್ನೇ ನಾನು ಮೆಚ್ಚಿ ನಿನ್ನ ಹಿಂದೆ ಬಂದದ್ದು. ಹೊಡೆತ ತಿಂದದ್ದು. ಇದೆಲ್ಲ ನೆನಪಾದಾಗೆಲ್ಲಾ ಒಬ್ಬನೇ ನಗ್ತಾ ಇರುತ್ತೇನೆ. ನಿನ್ನ ಹಾದಿಯನ್ನು ಕಾಯುತ್ತಿರುತ್ತೇನೆ ಎಂಬುದನ್ನು ಮರೆಯಬೇಡ.. ಪ್ಲೀಸ್


ಎಂದೆಂದಿಗೂ ನಿನ್ನವ

ಮಂಗಳವಾರ, ಸೆಪ್ಟೆಂಬರ್ 29, 2009

ಗಜಲ್ ಮತ್ತು ಕವನ

ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ,
ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ

ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು,
ಬಿಕ್ಕಳಿಸಿ, ಬಿಕ್ಕಳಿಸಿ ಅಳುವ ಮುನ್ನ ನೀ ಜಾರಿ ಹೋಗಬೇಡ

ಇರಳು ಕವಿಯಲಿ, ಚಂದ್ರ ಮೂಡಲಿ, ನಕ್ಷತ್ರ ಮಿನುಗಲಿ,
ಕ್ಷೀರಪಥದಲಿ ಮಿಂದೆದ್ದು ಬರುವೆ, ಅಲ್ಲಿವರೆಗೂ ಹೋಗಬೇಡ

ಬೆರಳುಗಳು ಸುಡುತ್ತಿವೆ, ಸಿಗರೇಟಿನ ನಿಗಿ ನಿಗಿ ಬೆಂಕಿಗೆ,
ಚಿಮ್ಮುವ ಹೊಗೆಯಲಿ ನಿನ್ನದೇ ರೂಪ ಬಿಟ್ಟು ಹೋಗಬೇಡ

ದಾರಿ- ದಾರಿ ನಡುವೆ ಕಲ್ಲು ಮುಳ್ಳೇ ಇರಲಿ, ನೀ ಕಾಲ್ ಇಡುವಲ್ಲಿ
ನಾ ಕೈಯಿಡುವೆ, ನೋವು ನನಗಿರಲಿ, ನಲಿವು ನಿನಗಿರಲಿ, ಹೋಗಬೇಡ

ಎದೆಯ ಮೇಲೆ ಕಾಲಿಟ್ಟು, ಒಳಗೆ ಬೆಂಕಿಯಿಟ್ಟು ಹೋಗಲೇಬೇಕೆನ್ನುವಾಗ
ಮರೆಯಬೇಡ, ಕೆಂಪು ಸೂರ್ಯನ ಮೇಲಿಟ್ಟ ಆಣೆ, ನೀ ಹೋಗಬೇಡ

ಕಂಪ್ಯೂಟರ್ ಪರದೆ ತುಂಬೆಲ್ಲಾ ನಿನ್ನದೆ ಬಿಂಬ, ಆದರೂ
ಬೆರಳು 'ಡಿಲಿಟ್ ಕೀ' ಮೇಲೆ ಊರುತ್ತಿದೆ, ತೊರೆದು ಹೋಗಬೇಡ



ಅಲ್ಲಿ- ಇಲ್ಲಿ

ಅಲ್ಲಿ ದ್ವéೇಷವಿದೆ, ರೋಷವಿದೆ
ತಮ್ಮೊಳಗೆ ಹೊಡೆದಾಡಿ ಅಂತ್ಯವಾಗುವ ಆಪಾಯವಿದೆ

ಇಲ್ಲಿ ಸ್ನೇಹವಿದೆ, ಪ್ರೇಮವಿದೆ
ತ್ಯಾಗದ ಆರಿವಿದೆ, ಒಂದುಗೂಡಿಸುವ ಧ್ವನಿಯಿದೆ

ಅಲ್ಲಿ ತಲ್ಲಣವಿದೆ, ತವಕವಿದೆ,
ಕ್ರೂರ ಅಟ್ಟಹಾಸವಿದೆ, ಅದರಲ್ಲೇ ನೆತ್ತರದ ಹಸಿವಿದೆ

ಇಲ್ಲಿ ತಂಪಿದೆ, ತಂಗಾಳಿಯಿದೆ,
ನೊಂದವರಿಗೆ ನೆರವಾಗುವ ನೆರಳಿದೆ, ಒಲವಿದೆ

ಅಲ್ಲಿ ಬಿಸಿಲಿದೆ, ಬವಣೆಯಿದೆ,
ಒಂದಾಗುವವರ ಬೆನ್ನುಬೀಳುವ ಹಿಂಡೇ ಇದೆ

ಇಲ್ಲಿ ಕರುಣೆಯಿದೆ, ಅನುಕಂಪವಿದೆ,
ಒಲ್ಲೆ ಎಂದವರಿಗೂ ಹಿಡಿ ಪ್ರೀತಿ ಕೊಡವವರ ದಂಡೇ ಇದೆ

ಅಲ್ಲಿ- ಇಲ್ಲಿ ಇವೆರಡು ನಮ್ಮೊಳಗಿವೆ,
ಮನಸ್ಸು, ಹೃದಯದೊಳು ಅವಿತಿವೆ.

ಭಾನುವಾರ, ಜೂನ್ 28, 2009

ನಿಶಕ್ತ ಕಾಲುಗಳು

ಚಿಕ್ಕವನಿದ್ದಾಗಲೇ ಮೇಲೆದ್ದ. ಮೇಲದ್ದಾಗಲೇ ಬಿದ್ದ
ಮಕ್ಕಳೇ ದೇವರೆಂದ, ಮಕ್ಕಳಿಗೆ ಇವನೇ ದೆವ್ವೆಂದರು.
ಗೆದ್ದಷ್ಟೇ ಸೋತ. ಸೋತಷ್ಟೇ ಮತ್ತೆ ಚಿಗಿತ.
ಚಿಗಿಯುವಾಗಲೂ, ನೆಗೆಯುವಾಗಲೂ ತಾನೇ ತಾನಾದ.
ಕರಿ ಬಿಳಿ ತೊಗಲಿನ ಮಧ್ಯೆ ಕುಣಿದ, ಕುಪ್ಪಳಿಸಿದಎಲುಬುಗಳು
ಮುರಿಯವಂತೆ ಮೈ ಮಣಿಸಿದ ಕಾಲ್ ಕುಣಿಸಿದ,
ದನಿ ಎತ್ತರಿಸಿ, ತಗ್ಗಿಸಿದ ಪ್ರತಿ ಏರಿಳಿತದಲ್ಲೂ
ನೋವು-ನಲಿವು ನಗಿಸಿದ ಪಾಪ್ ಎಂದು ಮೂಗು ಮುರಿಯೋರೋಮೂಗ್
ಮೇಲೆ ಬೆರಳಿಟ್ಟರು, ಕಣ್ಣೀರಿಟ್ಟರು
ಸರ ಸರ ಸರಿದಾಡುವ, ಹರಿದಾಡುವ ಕಾಲುಗಳಿಗೆ ಕಣ್, ಮನ ಸೋತರು.
ಈಗ ಕಾಲುಗಳೇ ನಿತ್ರಾಣ, ನಿಶಕ್ತ ಹಾಡುವ ರಾಗ, ನಿರಾಗ,
ಕೇಳುವಗಡಿ-ಭಾಷೆ ಬೇಧಿಸಿ, ರಾಗ-ದ್ವೇಷ ಸರಿಸಿ ನಾದ ಹರಿಸಿದ.
ಕೊನೆಗೇ ತಾನೇ ನಿನಾದನಾದ.
ನನ್ನ ಕತ್ತರಿಸಿದರೂ ಹರಿಯೋದುಕೆಂಪ ರಕ್ತ, ಕರಿಯಲ್ಲ
ಎನ್ನುತ್ತಲೇ ಬಿಳಿ ಚರ್ಮಕ್ಕೆ ಮನಸೋತ ಬಣ್ಣ ಬಲಾಯಿಸಿದ
ಬಣ್ಣವೇನೋ ಬದಲಾಯಿತು. ಮನಸ್ಸು?

ಬುಧವಾರ, ನವೆಂಬರ್ 19, 2008

ಏನು ಬರೆಯಲಿ ಹೇಳು...?

ಬರೆಯಲು ಹೊರಟವನ
ಅಂತರಂಗವೆಲ್ಲ ಖಾಲಿಯಾದಾಗ
ಸುಟ್ಟು ಹೋದ ಕನಸುಗಳ
ವಾಸನೆ ಮೂಗಿಗೆ ಅಡರುತ್ತಿರುವಾಗ
ಬರೆಯುವದಾದರು ಹೇಗೆ ಹೇಳು..?
ಆಗುಂತಕಳಾಗಿ ಎದುರಾಗಿ, ಮರೆಯಾದೆ
ಮರೆಯಾಗುವ ಮುನ್ನ
ಮಾಸಲಾರದ ಬರೆ ಹಾಕಿದೆ
ಬರೆ ಇನ್ನು ಹಸಿ ಹಸಿಯಾಗಿರುವಾಗಲೇ
ಹಾಳೆಯ ಮೇಲೆ ಗೆರೆಯಾದ್ರೂ
ಹೇಗೆ ಮೊಡಿತು ಹೇಳು...?
ಬದುಕಿದ್ದು ಸತ್ತಂತಿರುವಾಗ
ಭಾವವಾಗುವ ಅಕ್ಷರಗಳಿಗೆ
ಜೀವವನ್ನಾದರೂ ಹೇಗೆ ತುಂಬಲಿ...?
ನಾ ಹಾಳಾಗುವ ಮುನ್ನ
ಒಮ್ಮೆ ನೀ ಹರಸು
ಎಂದೆಂದಿಗೂ ನಾ ನಿನ್ನ
ನೀ ನನ್ನ ನೋಡದಂತೆ

ಸೋಮವಾರ, ನವೆಂಬರ್ 17, 2008

ಮರೆಯೋದಲ್ಲ

ಮಳೆಗೆ ಅಳೋದು ಮಾತ್ರ ಗೊತ್ತು

ನಗೋದಲ್ಲ

ಸೂರ್ಯನಿಗೆ ಸುಡೋದು ಗೊತ್ತು

ಆರಿಸೋದಲ್ಲ

ಆದರೆ

ನನಗೆ ನಿನ್ನ ನೆನಪು

ಮಾಡಿಕೊಳ್ಳುದು ಗೊತ್ತು

ಮರೆಯೋದಲ್ಲ

- ಇದು ನನಗೆ ಇಷ್ಟವಾದ ಒಂದು ಶಾಯರಿಯ ಭಾವಾನುವಾದ

ಶನಿವಾರ, ಅಕ್ಟೋಬರ್ 18, 2008

ಅಲೆಗಳು ಏಳುತ್ತವೆ


ಶಾಯರಿಗಳಿಗೂ ಕೆಲವು
ಅಂದಾಜು ಇರತವೆ
ಕನಸುಗಳು ತೆರೆದ
ಕಣ್ಣುಗಳಲ್ಲೂ ಒಡಮೂಡುತ್ತವೆ
ದುಃಖದಲ್ಲಿ ಕಣ್ಣೀರು
ಬರಲೇಬೇಕೆನಿಲ್ಲ
ನಗುವ ನಯನಗಳಲ್ಲು
ಅಲೆಗಳು ಏಳುತ್ತವೆ
-------- ಇದು ಹಿಂದಿ ಶಾಯರಿಯ ಭಾವಾನುವಾದ.
ಇದು ಮನಸು ಕಾಡುವ ಶಾಯರಿ ಎಂಬ
ಭಾವನೆ ನನ್ನದು.. ನಿಮ್ಮದು ...?

ಭಾನುವಾರ, ಸೆಪ್ಟೆಂಬರ್ 28, 2008

ನಗಲು ಪ್ರಯತ್ನಿಸುತ್ತಿದ್ದೇನೆ

ಕತ್ತಲೆಯೇ ಬದುಕೆಂದು
ನಂಬಿದ ನಾನು ಈಗೀಗ
ನಗಲು ಪ್ರಯತ್ನಿಸುತ್ತಿದ್ದೇನೆ
ದುಃಖದ ಸಾಗರದಲ್ಲಿ ಕೈ
ಬಿಟ್ಟು ನೀ ಹಿಂತಿರುಗಿ ನೋಡದೆ
ಹೋದಾಗ ಸಾಯಬೇಕೆಂದು
ಕೊಂಡವನಿಗೆ ಅಲೆಗಳೇ
ಈಜು ಕಲಿಸಿ ದಡಕ್ಕೆ ಎಸೆದಿವೆ ನನ್ನನ್ನು.
----
ಈಗೀಗ ಪ್ರತಿ ಸೂರ್ಯನ ಹುಟ್ಟು
ಸಾವು ಕೂಡಾ ಆಸಕ್ತಿ ಹುಟ್ಟಿಸುತ್ತಿದೆ
ರಾತ್ರಿಯಲ್ಲಿ ಚಂದ್ರನ ತಣ್ಣನೆಯ
ಬೆಳಗು ಕೂಡಾ ಹೊಮ್ಮಿಸುತ್ತಿದೆ
ನೂರಾರು ಅರ್ಥ ನನ್ನೆದೆಯ
ಭಾವದೊಳಗೆ ಆದರೆ,
ಅಲ್ಲಿ ನೀನಿಲ್ಲವೆಂಬ
ಅರಿವು ಎಚ್ಚರವಾದಾಗ
ಮತ್ತೆ ಅದೇ ಕತ್ತಲೆ ಇಷ್ಟವಾಗುತ್ತದೆ
ಆದರೂ ಪಣತೊಟ್ಟಿದ್ದೇನೆ
ಕತ್ತಲೆಯನ್ನೇ ಹಿಂಜಿ
ಬೆಳಕನ್ನು ಪಡೆಯಬೇಕೆಂದು
ಆ ಬೆಳಕಲ್ಲಿ ಹೊಸ ಲೋಕ,
ಭಾವ, ಭಾಷೆ ಕಲಿಯಬೇಕೆಂಬ
ಹಂಬಲ ನನ್ನದು.

ಶನಿವಾರ, ಜುಲೈ 26, 2008

ಏನೋ ಆಗಿದೆ


ಏನೋ ಆಗಿದೆ
ನನಗಿಂದು
ಮುಂಗಾರು ಮೊದಲ
ಮಳೆ ಬಿದ್ದ ನೆಲದ
ಸುವಾಸನೆಯಂತೆ
ಹರಡಿದೆ ಮನವು
ಬರಿದಾಗಿದ್ದ ಭಾವಗಳು
ಮತ್ತೆ ಮೆಲ್ಲನೆ
ಚಿಗುರೊಡೆದಿವೆ
ಸೂರ್ಯನತ್ತ ಚಾಚಿ
ಮೊಗ್ಗಾಗಿ ಹೂ
ಬಿರಿಯಲು ಎದೆಯೊಳಗೆ
ಏನೋ ಉಲ್ಲಾಸ,
ಸಂಭ್ರಮದ ನರ್ತನ
ಕಾಣದ ಹೃದಯವ
ಕಾಣಲು ಕಾತರಿಸಿವೆ
ಕಣ್ಣಗಳೆರಡು
ಮುಗಿಲಾಚೆ ಮಲಗಿ
ಭೂ ಅಂಚಿನಲ್ಲಿ
ಅಸ್ತಂಗತವಾಗಲು
ಗರಿಗೆದರಿವೆ ಬಯಕೆಗಳು

ಶನಿವಾರ, ಜುಲೈ 19, 2008

ನೋವು


ಪ್ರಿತಿಸಿದವರನ್ನು
ಮಿಸ್
ಮಾಡಿಕೊಳ್ಳುವುದು
ಈ ಜಗತ್ತಿನಲ್ಲಿಯೇ
ಅತಿ ದೂಡ್ಡ
ನೋವು
ಆದರೆ,
ಇದಕಿಂತಲೂ
ದೂಡ್ಡ ನೋವು
ಎಂದರೆ,
ನಾವು ಯಾರನ್ನು
ಮಿಸ್
ಮಾಡಿಕೊಳ್ಳುತ್ತೇವೆ
ಅವರು ನಮ್ಮ
ಬಗ್ಗೆ ಒಂದು
ಕ್ಷಣವೂ
ಯೋಚಿಸದಿರುವುದು !

ಭಾನುವಾರ, ಜುಲೈ 13, 2008

ಬಾ(ಬ)ಲ ಭೀಮ








ನನ್ನ ಮೇಲ್ ಬಾಕ್ಸಿಗೆ ಒಂದು ಮೇಲ್ ಬಂದಿತ್ತು. ೨೦ ಕೆ.ಜಿ. ಬಾಲಕ ಎಂಬ ಒಕ್ಕಣಿಕೆ ಇತ್ತು ಅದರಲ್ಲಿ. ಒಳಗೆ ಬಾಲಕನ ಕೆಲವು ಫೋಟೋಗಳು ಇದ್ದವು . ನೋಡಲು ಏನೋ ಖುಷಿ ಅನ್ನಿಸಿತು. ನೀವು ನೋಡಿ ಖುಷಿ ಪಡಬಹುದು ಅಂತ ಬ್ಲಾಗಲ್ಲಿ ಪೋಸ್ಟ್ ಮಾಡತಿದಿನಿ.... ನಿಮಗೂ ಖುಷಿ ಆದ್ರೆ ಎರಡು ಲೈನ್ ಬರೆಯಿರಿ...

ಶುಕ್ರವಾರ, ಮೇ 23, 2008

ಸುರಿ ಮಳೆಯೇ ಸುರಿ


ಸುರಿ ಮಳೆಯೇ ಸುರಿ
ಮೈಗಂಟಿದ ಅವಳ
ಕಂಪು ತೊಳೆಯೋವರೆಗೂ
ನೆನಪುಗಳು ಮಾಸೋವರೆಗೂ
ಎಡಬಿಡದೆ ಸುರಿ... ಹರಿ...

ನಿನ್ನ ಹನಿಗಳನ್ನೇ
ಮುತ್ತುಗಳನ್ನಾಗಿ ಧಾರೆ
ಎರೆದೆ ಅವಳಿಗೆ
ಕನ್ನಿರೋರೆಸುವ ಕೈಗಳಾದೆ
ಹೃದಯ ಒಡೆದ ಮಾರಿಯಾದಳವಳು
ಸುರಿ ಮಳೆಯೇ ಸುರಿ... ಹರಿ...

ನನ್ನ ನೆರಳಾಗಿರುವೆಯೆಂದು
ಆಣೆ ಮಾಡಿದ್ದು ಈ ಮಳೆಯಲ್ಲೇ
ಮುರಿದಿದ್ದು ಇದೇ ಮಳೆಯಲ್ಲೇ
ನನ್ನ ಕನ್ನೀರಿಗೂ, ನಿನ್ನ
ಹನಿಗಳಿಗೂ ವ್ಯತ್ಯಾಸವೇ ಇಲ್ಲ
ಸುರಿ ಮಳೆಯೇ ಸುರಿ.. ಹರಿ..

ಶನಿವಾರ, ಏಪ್ರಿಲ್ 12, 2008

ದೂರ ನಿಲ್ಲಿ ಕವನಗಳೇ ..


ಸಾಕಾಗಿದೆ ಕವನಗಳ
ಸಹವಾಸ, ಹೂತ್ತುಗೂತ್ತಿಲ್ಲದೆ
ದಿಗ್ಗನೇ ಎದ್ದು ನಿಲ್ಲುವ ಭಾವಗಳಿಗೆ
ಅಕ್ಷರ ಅಂಗಿ ತೊಡಿಸುವ
ಪದಗಳೇ ದೂರ ನಿಲ್ಲಿ.

ಕಲ್ಪನೆ, ಕೌತುಕ ,
ಕಾಮವಾಂಛೆ ಮೀರಿ
ನಿಲ್ಲಲು ಸೆಣಿಸುತ್ತಿದ್ದೇನೆ
ಅಡ್ಡ ಬಂದು ಸೆಡ್ಡು
ಹೊಡೆಯಬೇಡಿ, ಪದಗಳ
ಬೇಡಿಯೊಳಗೆ ಬಂಧಿಯಾಗಲು
ನನಗಿಷ್ಟವಿಲ್ಲ

ಕನಸು, ಕನವರಿಕೆ
ನೀಗಲೆಂದೇ ದೂರ
ಹೋಗಿ ಎಂಬ ನಿವೇದನೆ
ನಿಮಗೆ, ಅದು ಹಮ್ಮು
ಎಂದರೆ ನಾನಲ್ಲ ಹೂಣೆ

ಆಕಾಶದ ಆಚೆ ಹಾರಿ
ಭೂ ಲೋಕವೆಲ್ಲಾ ತೂರಿ
ಸ್ವತಂತ್ರ, ಸ್ವೇಚ್ಚೆಯಡಿ
ಸಾಗುವ ಹುಮ್ಮಸ್ಸು ನನಗೆ
ತೊದರಗಾಲು ಹಾಕಬೇಡಿ
ದೂರ ನಿಲ್ಲಿ ಕವನಗಳೇ ....

ಶುಕ್ರವಾರ, ಫೆಬ್ರವರಿ 22, 2008

ಕಾಡ್ತಿ ಯಾಕ...?

ನೀನಿಲ್ಲದ ಈ ಮನಸ್ಸು
ಮಾಗಿ ಕಾಲದ ಎಲೆ
ಉದುರಿಸಿದ ಗಿಡದಂಗಾಗೇತಿ

ಮನಸ್ಸಿನ್ಯಾಗಿನ ಮಾತು
ಹೊರಗ ಬರದ ಗಂಟಲೋಳಗ
ಕೂತು, ತಕರಾರು ಮಾಡೈತಿ

ನೆನಪಿನ ಮರದೊಳಗ
ಕೇರೀದಸ್ಟು ನಿನ್ನ
ಸಂಗಡದ ಆ ಗಳಿಗೆಗಳು
ಮತ್ತ ಹೊಳ್ಳಿ ಹೊಳ್ಳಿ ಬರ್ತಾವ

ಕೇರೀದಾಗ ತೂರಿ ಹೋದ
ಜೋಳ್ಳ ನೆನಪುಗಳೆಲ್ಲಾ ನಂದು
ಉಳಿದ ಗಟ್ಟಿ ಮಾತೆಲ್ಲಾ ನಿಂದು

ಮರೀಬೇಕಂತ ಮನಸ್ಸಿನ್ಯಾಗಿನ
ಮಾತು ಹೊರ ಬಿಟ್ಟಿಲ್ಲ
ಆದ್ರೂ ನೀ ಯಾಕ್ ಹಂಗ ಕಾಡ್ತಿ...?

ಶುಕ್ರವಾರ, ಜನವರಿ 25, 2008

ನಾವೇ ಇಲ್ಲಾಗುವಾ...


ನನ್ನೊಳಗಿನ
ಭಾವನೆಗಳಿಗೆ
ಹಚ್ಚಬೇಕಿದೆ ಬಣ್ಣ,
ಹಸಿರಾಗುವ
ನೆಪದಲ್ಲಿ ಕೊಸರಾಡುವ
ಕನಸುಗಳಿಗೆ
ಕಟ್ಟಬೇಕಿದೆ ಬೇಲಿ.

ಹಾರಬೇಕಿದೆ
ಮುಗಿಲೇತ್ತರಕ್ಕೆ
ಎಲ್ಲ ನಿಯಮ ಮೀರಿ
ಗೆಲ್ಲಬೇಕಿದೆ ವೈರಿಯೇ
ಇಲ್ಲದ ಯುದ್ಧ.
ತಲುಪಬೇಕಿದೆ
ಗುರಿಯೇ ಇಲ್ಲದ ಗಮ್ಯಕ್ಕೆ

ಬಾ ಜತೆಯಾಗು ಬಾ
ಹೀಗೆ ಇಲ್ಲಗಳ ಜತೆ
ಸಾಗುವಾ, ಅಮೂತ೯ಗಳ
ಜತೆ ನಡೆಯುವಾ
ಕೊನೆಗೊಂದು ದಿನ
ನಾವೇ ಇಲ್ಲಾಗುವಾ...

ಗುರುವಾರ, ನವೆಂಬರ್ 22, 2007

ಸ್ತಬ್ಧಚಿತ್ರ

ಈ ಬಾಲ್ಯವೇ ಹಾಗೇ
ಭಾವನೆಗಳ ಬರಹಕ್ಕೆ ನಿಲುಕದ
ನೀಲಾಕಾಶ... ಎತ್ತ ನೋಡಿದತ್ತ
ಆದಿ-ಅಂತ್ಯವಿಲ್ಲದ ಸ್ತಬ್ದಚಿತ್ರ.

ಊರೂ ಹೊಡೆದು, ಊರಲ್ಲಿ ಭಾಷಣ ಬೀಗಿದು
ಮೊದಲ ಬಹುಮಾನ ತಂದದ್ದು,
ಶಿಕ್ಷಕರು ತಲೆ ನೇವರಿದ ನೆನಪು
ಈಗಲೂ ಹಚ್ಚು-ಹಸಿರು, ನವ-ನವೀರು.

ಚೇಳು ಕಡಿಸಿಕೊಂಡಿದ್ದು, ನೋವು ಮರೆಸಲು
ಅವ್ವ ಕಥೆ ಹೇಳಿದ್ದು, ಅವಳ ತೊಡೆಯ
ಮೇಲೆ ನಿದ್ದೆ ಹೊಗಿದ್ದು, ಈಗಲೂ ಚೇಳು
ಎಂದಾಗಲೆಲ್ಲ ಒತ್ತರಿಸುತ್ತದೆ ಮಾಸಿದ ನೆನಪು.

ಅಕ್ಕಳನ್ನು ಕಾಡಿದ್ದು, ತಂಗಿಯನ್ನು ಪೀಡಿಸಿದ್ದು,
ಅವ್ವಳಿಂದ ಬೈಯಿಸಿಕೊಂಡಿದ್ದು, ಗೆಳೆಯನಿಗೆ
ಹೊಡಿದಿದ್ದು, ಮತ್ತೆ ರಮಿಸಿದ್ದು, ಎಲ್ಲವೂ ಹಾಗೆ
ಇದೆ, ಗೆರೆ ಕೊರೆದ ಚಿತ್ರಗಳಂತೆ.

ಮನೆಯ ಎದುರಿಗಿದ್ದ ಟ್ರ್ಯಾಕ್ಟರ್ ಇಂಜಿನ್ ಕ್ಲಚ್ ಒತ್ತಿ
ಕಂಪೌಂಡ್ ಗೋಡೆಗೆ ಡಿಕ್ಕಿ ಹೊಡಿಸಿ, ಬಿಳಿಸಿದ್ದು, ಅಪ್ಪನಿಂದ
ಬಾಸುಂಡೆ ಏಟು ಬೀಗಿಸಿಕೊಂಡಿದ್ದು, ಇನ್ನೂ ಹಾಗೇ
ಇದೆ, ಮೊನ್ನೆ ನಡೆದ ಘಟನೆಯಂತೆ.

ಸ್ಕ್ರ್ಯೂ ಬಿಗಿಯಲು ಬಾರದೇ ಸ್ಕ್ರ್ಯೂಡ್ರೈವರ್
ಅಂಗೈ ಸೇರಿದ್ದು, ಅದ್ನೋಡಿ ಮೇಸ್ತ್ರಿ
ಕೆನ್ನೆಗೆ ಬಾರಿಸಿದ್ದು, ಕಣ್ಣೀರ್ ಕಪಾಳಕ್ಕೆ ಇಳಿದಿದ್ದು,
ರಸ್ತೆ ಬದಿಯಲ್ಲಿ ಗ್ಯಾರೆಜ್ ಕಂಡಾಗಲೆಲ್ಲ
ನೆನಪು ಕಣ್ತೆರೆಯುತ್ತದೆ.

ಇಂದಿನ ವರ್ಣಮಯ ಬದುಕಿನ
ನಡುವೆ, ಅಂದಿನ ಬಾಲ್ಯದ ಕಪ್ಪು-ಬಿಳಪು
(ವಿ)ಚಿತ್ರಗಳು ಈಗ ಬರೀ ಚಿತ್ರ, ಸ್ತಬ್ಧಚಿತ್ರ.

ಗುರುವಾರ, ನವೆಂಬರ್ 1, 2007

ಅಯ್ಯೋ ಕನ್ನಡವೇ... ಪರರು ಕನಿಕರಿಸುವಂತಾಯ್ತೇ...?


ಮೊದಲು ಈ ಘಟನೆಯನ್ನು ಓದಿ.

ನಾಲ್ಕು ದಿನಗಳ ಹಿಂದೆ ಕಚೇರಿ ಕೆಲಸ ಮುಗಿಸಿಕೊಂಡು ಅಂಬತ್ತೂರ್‌ನತ್ತ ಗಿಜಿಗಿಡುವ ಬಸ್ಸಿನಲ್ಲಿ ಹೊರಟಿದ್ದೆ. ಹೊರಗಡೆ ಮಳೆಯ ರುದ್ರ ನರ್ತನ ನಡೆದಿತ್ತು. ಬಸ್ಸು ಗಿಜಿಗುಡುತ್ತಿರುವುದರಿಂದ ಸ್ವಲ್ಪ ಬೆಚ್ಚಗಿನ ವಾತವಾರಣ ನಿರ್ಮಾಣವಾಗಿತ್ತು. ಹೀಗೆ ಸಾಗುತ್ತಿದ್ದ ಬಸ್ ಕೊನೆಯ ಸ್ಟಾಪ್ ಹತ್ತಿರವಾಗುತ್ತಿದ್ದಂತೆ ಬಸ್ಸನಲ್ಲಿದ್ದ ಪ್ರಯಾಣಿಕರ ಸಂಖ್ಯೆ ಕರಗುತ್ತಾ ಬಂತು. ಆದರೆ, ಹೊರಗಡೆ ಮಳೆ ಮಾತ್ರ ಧೋ.. ಎನ್ನುತ್ತಿತ್ತು.

ನಾನು ಕಳಿತು ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಡ್ರೈವರ್ ಮತ್ತು ಕಂಡಕ್ಟರ್‌ಗೆ ಪರಿಚಯವಿದ್ದಂತೆ ತೋರಿತು ನನಗೆ. ಬಸ್ಸಿನಲ್ಲಿದ್ದ ಜನರು ಕಡಿಮೆಯಾದ್ದರಿಂದ ಕಂಡಕ್ಟರ್ ಕೂಡಾ ಡ್ರೈವರ್ ಸಮೀಪದಲ್ಲಿಯೇ ಬಂದು ಕುಳಿತುಕೊಂಡ. ಆಗ ಡ್ರೈವರ್, ಕಂಡಕ್ಟರ್ ಮತ್ತು ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯ ನಡುವಿನ ಸಂಭಾಷಣೆ ಕೇಳಿ ಆಶ್ಚರ್ಯವೆನಿಸಿತು. ಮಳೆಯಾಗುತ್ತಿದ್ದ ಕಾರಣ ಅಲ್ಲಲ್ಲಿ ಟ್ರಾಫಿಕ್ ಜಾಮ್ ಆಗುತ್ತಿತ್ತು. ಟ್ರಾಪಿಕ್ ಜಾಮ್ ಕುರಿತಂತೆ ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಕಂಡಕ್ಟರ್‌ನೊಂದಿಗೆ ಮಾತಿಗಿಳಿದ.

"ಬೆಂಗಳೂರಿನಲ್ಲಿ 200 ಮೀಟರ್‌(ನಿಜವಾಗಲೂ ಇದೆಯಾ) ಅಂತರದಲ್ಲಿ ಫ್ಲೈ ಓವರ್‌ಗಳಿವೆ. ಆದರೂ ಅಲ್ಲಿ ಇಲ್ಲಿಕ್ಕಿಂತ ಹೆಚ್ಚು ಟ್ರಾಫಿಕ್" ಎಂದ.

"ಹೌದು, ನೀನು ಹೇಳುವುದು ನಿಜ. ಅಲ್ಲಿ ತುಂಬಾ ಟ್ರಾಫಿಕ್ ಅಂತ ಕೇಳಲ್ಪಟ್ಟಿದ್ದೇನೆ" ಎಂದು ಕಂಡಕ್ಟರ್ ಮಾರ್ನುಡಿದ.

"ಬೆಂಗಳೂರಿನಲ್ಲಿ ತಮಿಳು ಮಾತಾಡೊ ಜನ ಜಾಸ್ತಿ ಸಿಗುತ್ತಾರಲ್ಲ...?" ಎಂದು ಅನುಮಾನ ಮಿಶ್ರಿತ ದನಿಯಲ್ಲಿ ಕಂಡಕ್ಟರ್ ಪ್ರಶ್ನಿಸಿದ ಆತನನ್ನು.

ತಕ್ಷಣವೇ ಉತ್ತರಿಸಿದ ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ, "ಹೌದು, ಆದರೆ ತಮಿಳು ಮತ್ತು ಕನ್ನಡ ಮಾತಾಡೋರಕ್ಕಿಂತಲೂ ತೆಲುಗು ಮಾತಾಡೋ ಜನ ಬಹಳ ಇದ್ದಾರೆ ಬೆಂಗಳೂರಿನಲ್ಲಿ" ಅಂದ.

ಇವರ ಸಂಭಾಷಣೆಯನ್ನೇ ಆಲಿಸುತ್ತಿದ್ದ ನನಗೆ ಈ ಮಾತನ್ನು ಕೇಳೆ ಒಮ್ಮೆಲೇ ದಿಗ್ಭ್ರಮೆಯಾಯಿತು.

(ಮೇಲಿನ ಸಂಭಾಷಣೆ ನಡೆದಿದ್ದು ತಮಿಳು ಭಾಷೆಯಲ್ಲಿ. ನನಗೆ ಪೂರ್ತಿಯಾಗಿ ತಮಿಳು ಬರದಿದ್ದರೂ ಕೂಡಾ ಅವರ ಮಾತಿನ ಭಾವಾರ್ಥ ನೀಡಿದ್ದೇನೆ)
*****

ಮೇಲಿನ ಸಂಭಾಷಣೆ ಓದಿದರಲ್ಲ. ನವೆಂಬರ್ 1ಕ್ಕೆ ಇನ್ನೂ ನಾಲ್ಕು ಮುಂಚಿತವಾಗಿರುವಂತೆಯೇ ಇದು ಚೆನ್ನೈನಲ್ಲಿ ನನ್ನ ಅನುಭವಕ್ಕೆ ಬಂದದ್ದು.

ನೋಡಿ ಕನ್ನಡ ಪರಿಸ್ಥಿತಿ ಏನಾಗಿದೆ ಅಂತ್. ಕನ್ನಡ ದುಸ್ಥಿತಿಯಲ್ಲಿದೇ ಎಂದು ಕನ್ನಡಿಗರೇ ಕಳವಳ ಪಡುವುದು ಸೊಜಿಗವಲ್ಲ. ಆದರೆ, ಬೇರೆ ಭಾಷೆಯವರು ಕೂಡಾ ಬೆಂಗಳೂರು ಕನ್ನಡದ ಬಗ್ಗೆ ಕನಿಕರ (!?) ವ್ಯಕ್ತಪಡಿಸಿತ್ತಿರುವುದು ಕೊಂಚ ನನಗೆ ಆಶ್ಚರ್ಯವುಂಟು ಮಾಡಿತು.

ಅವರು ನಿಜವಾಗಿಯೂ ಕನ್ನಡ ದುಸ್ಥಿತಿಗೆ ವ್ಯಥೆ ಪಡುತ್ತಿದ್ದಾರೋ ಅಥವಾ ಬೆಂಗಳೂರಿನಲ್ಲಿ "ತಮಿಳು" ಬದಲಾಗಿ "ತೆಲುಗು" ಪ್ರಾಬಲ್ಯಪಡಿಯುತ್ತಿದೆ ಎಂದು ಆತಂಕಪಡುತ್ತಿದ್ದಾರೋ ಎಂಬದು ನನಗೆ ಅರ್ಥವಾಗಲಿಲ್ಲ. ಕನ್ನಡ ದುಸ್ಥಿತಿಗೆ ಇಳಿದಿದೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತಿತ್ತು.

ಮತ್ತೆ ನವೆಂಬರ್ 1 ಬಂದಿದೆ. ಸಿಹಿ ಹಂಚಿ, ನಾಮಕಾವಸ್ಥೆಗೆ ರಾಜ್ಯೋತ್ಸವದ ಆಚರಣೆಯ ನಡೆಯುತ್ತದೆ. ಮಂತ್ರಿ ಮಹೋದಯರು (ಸಂತೋಷದ ವಿಷಯವೆಂದರೆ, ಈ ಬಾರಿಯ ರಾಜ್ಯೋತ್ಸವದಲ್ಲಿ ಮಂತ್ರಿ ಮಹೋದಯರ ಆಟೋಟ ಅಷ್ಟಾಗಿಲ್ಲ, ಎಲ್ಲ ರಾಜ್ಯಪಾಲರ ದರ್ಬಾರು) ಭಾಷೆಯ ಹೆಸರಿನಲ್ಲಿ ತಮ್ಮ ವೋಟುಗಳನ್ನು ಗಟ್ಟಿ ಮಾಡಿಕೊಳ್ಳುತ್ತಾರೆ. ಸಾಹಿತಿಗಳು, ಬರಹಗಾರರು, ಕನ್ನಡ ಪರ ಹೋರಾಟಗಾರರು ಈ ಒಂದು ದಿನ ಕನ್ನಡವನ್ನೇ ಮೈ ಮೇಲೆ ಆಹ್ವಾನಿಸಿಕೊಂಡವರಂತೆ ಮಾತಾಡುತ್ತಾರೆ. ಸಂಜೆ ಮರೆಯುತ್ತಾರೆ ಎಂಬುದು ನನ್ನದಷ್ಟೆ ವಾದವಲ್ಲ. ಇದು ಸಮಗ್ರ ಪ್ರಜ್ಞಾವಂತ ಕನ್ನಡಿಗರ ವಾದ ಎಂದು ನಾನು ಭಾವಿಸಿಕೊಳ್ಳುತ್ತೇನೆ.

2000 ಸಾವಿರ ವರ್ಷಗಳಷ್ಟು ಇತಿಹಾಸ ಹೊಂದಿರುವ ಕನ್ನಡ ಇಂದಿನ ಸ್ಥಿತಿಯ ಕುರಿತು ನಿಜವಾದ ಚಿಂತನೆ ನಡೆಯುತ್ತಿದೆಯಾ..? ನಮ್ಮಷ್ಟೆ ಇತಿಹಾಸ ಹೊಂದಿರುವ ಪಕ್ಕದ "ತಮಿಳ್‌ ಭಾಷೆಗೆ"ಗೆ ಶಾಸ್ತ್ರೀಯ ಸ್ಥಾನ ಮಾನ ದೊರೆಯುತ್ತದೆ. ಆದರೆ ನಮ್ಮ ತಾಯಿ ನುಡಿಗಿಲ್ಲ. ನಾಲ್ಕಾರು ಸಾಹಿತಿಗಳು ಅದಕ್ಕಾಗಿ ಉಪವಾಸ ಮಾಡುತ್ತಾರೆ ಮತ್ತು ಇನ್ನೂ ನಾಲ್ಕಾರು ಸಾಹಿತಿಗಳು ಶಾಸ್ತ್ರಿಯ ಸ್ಥಾನಮಾನ ಅಗತ್ಯವಿಲ್ಲ ಎಂದು ಸಾರುತ್ತಾರೆ.

ಹೀಗಾದರೆ ಕನ್ನಡ ನುಡಿ ಉಳಿದೀತೇ ಎಂಬ ಪ್ರಶ್ನೇ ನಮ್ಮಂಥವರದು. ಯಾರು ಕೊಡುತ್ತಾರೆ ಉತ್ತರ...? ಉತ್ತರ ಕೊಡಬೇಕಾದವರೆಲ್ಲ ಕುರ್ಚಿಯ ಆಸೆಗಾಗಿ ಕೀಳು ಮಟ್ಟದ ರಾಜಕೀಯಕ್ಕೀಳಿದಿದ್ದಾರೆ (ದಯವಿಟ್ಟು ಕ್ಷಮಿಸಿ. ಕರ್ನಾಟಕದ ಇಂದಿನ ರಾಜಕೀಯಕ್ಕೆ "ಕೀಳುಮಟ್ಟ"ದ ಶಬ್ಧ ಬಳಸಿದರೆ "ಶಬ್ಧ"ಕ್ಕೂ ಅಪಚಾರ ಮಾಡಿದಂತೆ ಎಂಬ ಭಾವನೆ ನನ್ನದು).

ನಿಜವಾಗಿಯೂ ನಾವು ಈಗ ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ. "ಕನ್ನಡಕ್ಕೆ ಕೈ ಎತ್ತು.. ನಿನ್ನ ಕೈ ಕಲ್ಪವೃಕ್ಷವಾಗುವುದು" ಎಂಬ ಕವಿವಾಣಿ ಕಾರ್ಯರೂಪಕ್ಕೆ ಇಳಿಯುವುದು ಯಾವಾಗ...? ಜಾಗತಿಕರಣ ಅಲೆಗೆ ಸಿಲುಕಿ ಸ್ಥಳೀಯ ಸಂಸ್ಕೃತಿ, ವೇಷ, ಭೂಷಣ, ನಡೆ, ನುಡಿ, ಆಚಾರ-ವಿಚಾರ, ಸಂಪ್ರದಾಯಗಳು ತತ್ತರಿಸಿ ಹೋಗುತ್ತಿರುವಾಗ ಕನ್ನಡ ಎಂಬ ಸ್ನೇಹಮಯಿ, ಮೃದು ಭಾಷೆ ಈ ಹೊಡೆತವನ್ನು ತಾಳಿಕೊಂಡು ಬೆಳೆಯಬಲ್ಲದೆ..?

ಖಂಡಿತ ಬೆಳೆಯುತ್ತದೆ. ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು ಅಷ್ಟೆ. ಪಕ್ಕದ ತಮಿಳುರನ್ನು ನೋಡಿ ನಾವು ಕಲಿಯಬೇಕಾಗಿದೆ. ನಾಡು-ನುಡಿ ವಿಷಯ ಬಂದಾಗ ಪಕ್ಷ ಭೇದ ಮರೆತ ಜನರು ಒಂದಾಗುತ್ತಾರೆ. ರಾಷ್ಟ್ರೀಯ ಮಟ್ಟದ ವಾಹನಿಯೊಂದು ಸಂದರ್ಶಿದಾಗಲೂ ತಮಿಳುನಲ್ಲಿಯೇ ಮಾತಾಡುತ್ತಾರೆ ಆ ನಾಡಿನ ಮುಖ್ಯಮಂತ್ರಿ.. ಆದರೆ, ಇಂಗ್ಲಿಷ್ ಬರದಿದ್ದರೂ ಪರವಾಗಿಲ್ಲ. ಕನ್ನಡ ವಾಹಿನಿಗಳಲ್ಲಿ ಇಂಗ್ಲಿಷ್ ಮಾತಾಡುತ್ತಾರೆ ನಮ್ಮ ನಾಡಿನಲ್ಲಿ. ಇಲ್ಲಿ ಯಾರನ್ನು ತೆಗಳುವ ಉದ್ದೇಶ ನನಗಿಲ್ಲ. ಕೇವಲ ಹೋಲಿಕೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಕುರಿತು ಹೇಳುವುದು ಅಷ್ಟೆ ನನ್ನ ಉದ್ದೇಶ. ನಮ್ಮಲ್ಲಿ ಅದಾಗುತ್ತಿಲ್ಲ. ಎಲ್ಲವೂ ಹೈಕಮಾಂಡ್‌ಗಳು ಕಟ್ಟಪ್ಪಣೆಯಲ್ಲಿ ನಡೆಯುತ್ತಿರುವಾಗ ಇದೂ ಸಾಧ್ಯವೂ ಇಲ್ಲ. ಹೀಗಿರುವಾಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುವುದಾದರೂ ಹೇಗೆ, ಅಲ್ಲವೇ ?

ಇಲ್ಲಿ ಕೇವಲ ರಾಜಕೀಯ ಇಚ್ಛಾಶಕ್ತಿ ಮತ್ತು ರಾಜಕಾರಣಿಗಳನ್ನು ದೂರಿದರೂ ಸಾಲದು. ರಾಜಕಾರಣಿಗಳಷ್ಟೆ ಕನ್ನಡಿಗರು ಕೂಡಾ ಜವಾಬ್ದಾರರು ಎಂಬುದು ನನ್ನ ಅನಿಸಿಕೆ. ವಿದ್ಯಾವಂತರು ಎನಿಸಿಕೊಂಡಿರುವ ಬುದ್ಧಿವಂತ ಜನ ತಮ್ಮ ಮಕ್ಕಳಲ್ಲಿ ಮೊದಲು ಕನ್ನಡ ಪ್ರೀತಿ ಬೆಳೆಸಬೇಕು. ಆಳುವವರು ಕನ್ನಡದ ಕುರಿತು ಅಸಡ್ಡೆ ತೋರಿದಾಗ ಕಿವಿ ಹಿಂಡುವ ಕೆಲಸ ಮಾಡಬೇಕು. "ಕನ್ನಡ" ಎಂಬ ವಿಷಯ ಬಂದಾಗ ಕನ್ನಡಿಗರಿಗೆ ಬಂದಿರುವ ಬಳುವಳಿಗಳಾದ, "ಶಾಂತ ಪ್ರಿಯ"ರು, "ಸಹನಶೀಲ"ರು ಎಂಬ ಬಿರುದುಗಳನ್ನು ಕಿತ್ತೆಸೆಯಬೇಕು. ಆಗ ನಿಜವಾದ ಕನ್ನಡ ತಳವೂರಿ, ಬೆಳೆಯಲು ಸಾಧ್ಯ.

ಪ್ರತಿಯೊಬ್ಬ ಕನ್ನಡಿಗನು ನಮ್ಮ ನುಡಿಗೆ ಶಾಸ್ತ್ರಿಯ ಸ್ಥಾನಮಾನ ತಂದುಕೊಡುವಲ್ಲಿ ವೈಯಕ್ತಿವಾಗಿ ಮತ್ತು ಸಾಮೂಹಿಕವಾಗಿ ಚಳುವಳಿಯ ರೂಪದಲ್ಲಿ ಪಾಲ್ಗೊಳ್ಳಬೇಕು. ಆಗ ಮಾತ್ರ ಕರ್ನಾಟಕ ಮತ್ತು ಕನ್ನಡಕ್ಕೆ ಯಾವಾಗಲೂ ಕೊಂಚ ತಾರತಮ್ಯ ನೀತಿಯನ್ನೇ ಅನುಸರಿಸುವ ಕೇಂದ್ರಕ್ಕೆ ಬಿಸಿ ಮುಟ್ಟಿಸದಂತಾಗುತ್ತದೆ.

ಆದರೆ, ಕರ್ನಾಟದಲ್ಲಿ ಹುಟ್ಟಿ-ಬೆಳೆದ ಚಳುವಳಿಗಳ ಗತಿ ಇಂದು ಏನಾಗಿದೆ.

(ಈ ಲೇಖನ ವೆಬ್‌ದುನಿಯಾ.ಕನ್ನಡದಲ್ಲಿ ಪ್ರಕಟವಾಗಿದೆ. ಇಲ್ಲಿ ಕ್ಲಿಕಿಸಿ)

ಸೋಮವಾರ, ಅಕ್ಟೋಬರ್ 22, 2007

ಅತ್ತು ಬಿಡು ಹಾಗೇ ಸುಮ್ಮನೆ...


ಅತ್ತು ಬಿಡು, ಗೆಳೆಯ
ಹಾಗೇ ಸುಮ್ಮನೇ
ಹರಿದು ಹೋಗಲಿ
ಕಣ್ಣೀರು ಕೋಡಿ ನದಿಯಾಗಿ.
ಇಳಿದು ಹೋಗಲಿ
ಎದೆಯ ಭಾರ ಹಗುರಾಗಿ.

ನನ್ನ-ನಿನ್ನ ನಡುವಿನ
ಮಾತಿಲ್ಲದ ಮೌನಗಳು
ನೂರು ಅರ್ಥ ಕಲ್ಪಿಸಿವೆ
ನಮ್ಮ ನಡುವಿನ ಸಂಬಂಧಕ್ಕೆ

ಗೆಳೆಯಾ,
ಸಂಬಂಧದ ನಂಟಿಗೆ
ಹೆಸರಿನ ಅಂಟು ಬೇಡ
ಹಾಗೇ ಇದ್ದು ಬಿಡೋಣ
ಬಳ್ಳಿ, ಮರದ ಹಾಗೇ
ಭೂಮಿ, ಚಂದಿರನ ಹಾಗೇ
ಗಾಳಿ, ಗಂಧದ ಹಾಗೇ

ನಾನು ಬಳ್ಳಿಯಾ ? ನೀನು ಮರವಾ?
ನೀನು ಚಂದಿರನಾ? ನಾನು ಭೂಮಿನಾ ?
ಬೇಡ, ಮಿಗಿಲಾಟದ ತೊಳಲಾಟ
ಹೀಗೆ ಇರಲಿ, ಸಂಬಂಧದ
ಪರಿವೆ ಇಲ್ಲದ ಅನುಬಂಧ.

ಹಾಗೇ ಸುಮ್ಮನೇ
ಅತ್ತು ಬಿಡು,
ಇಳಿದು, ತೊಳೆದು
ಹೊಗಲಿ
ನೆನಪಿನ ಮೆರವಣಿಗೆ.

ಸೇರೊಣ ಭೂ-ಕಡಲಿನಂಚಿನಲಿ.

(ಈ ಕವನ ಕನ್ನಡ ಯಾಹೂನಲ್ಲಿ ಪ್ರಕಟಗೊಂಡಿದೆ)

ಸೋಮವಾರ, ಅಕ್ಟೋಬರ್ 15, 2007

ಚೆನ್ನೈ ರೋಡಿಗಿಳಿದ ಬಿನ್ನಾಣಗಿತ್ತಿಯರು...!


ಅರೇ.. ಚೆನ್ನೈ ರಸ್ತೆಗಳಲ್ಲಿ ಬಿನ್ನಾಣಗಿತ್ತಿ(ಬೆಡಗಿ)ಯರು ಸುತ್ತುತ್ತಿರಲಿಲ್ಲವೇ ಎಂದು ಪ್ರಶ್ನಿಸಬೇಡಿ. ಬೆಂಗಳೂರಿನ ಎಂಜಿ ರಸ್ತೆಯಲ್ಲಿ ತಿರುಗಾಡುವ ಬಿಂಕದ ಬೆಡಗಿಯರ ಹಾಗೆಯೇ ಚೆನ್ನೈನ ಮೌಂಟ್ ರೋಡ್, ಸ್ಪೆನ್ಸರ್ ಫ್ಲಾಜಾದಲ್ಲಿ ಕಣ್ಣಿಗೆ ಬಿಳುತ್ತಾರೆ. ಕಣ್ಣಿಗೂ ತಂಪು.. ಮನಸ್ಸಿಗೂ ಹಿತ. ಇದು ಪಡ್ಡೆ ಹುಡುಗರ ಘೋಷ ವಾಕ್ಯ.

ಆದರೆ, ನಾನು ಇಲ್ಲಿ ಹೇಳಲು ಹೊರಟಿದ್ದು ತಮ್ಮ ಅಂಗಾಗಳನ್ನು ಬಳಕಿಸುವ ಲತಾಂಗಿಯರ ಬಗ್ಗೆಯಲ್ಲ. ಬದಲಾಗಿ, ಚೆನ್ನೈ ಹೈಟೆಕ್ ಬಸ್‌ಗಳ ಬಗ್ಗೆ. ಚೈನ್ನೈ ರೋಡಿಗೆ ಹೈಟೆಕ್ ಬಸ್ಸುಗಳು ಲಗ್ಗೆ ಇಟ್ಟಿವೆ. ಈ ಹೈಟೆಕ್ ಬಸ್ಸುಗಳನ್ನೇ ನಾನು ಬಿನ್ನಾಣಗಿತ್ತಿಯರು ಎಂದು ಕರೆದಿದ್ದು. ಯಾಕೆಂದರೆ, ಚೆನ್ನೈ ನಗರ ಸಾರಿಗೆ ಬಸ್‌ಗಳನ್ನು ನೀವೊಂದು ಸಾರಿ ಗಮನಿಸಬೇಕು. ಅವು ಯಾವ ರೀತಿಯಾಗಿ ಇವೆ ಎಂದರೆ, ನೂರು ವರ್ಷದ "ಅಜ್ಜಿ"ಯ ಹಾಗೆ ಇವೆ. (ಎಲ್ಲ ಅಜ್ಜಿಯಂದಿರ ಕ್ಷಮೆ ಕೋರಿ)

ಅದಕ್ಕಾಗಿಯೇ ಹೈಟೆಕ್ ಬಸ್ಸುಗಳು ಒಂದು ನಮೂನೆ ಸಂಚಲನ ಮೂಡಿಸಿವೆ ಇಲ್ಲಿಯ ಜನರಿಗೆ. ನಾನು ಚೆನ್ನೈಗೆ ಬಂದು ಸುಮಾರು ಒಂದು ವರ್ಷವಾಗುತ್ತ ಬಂತು. ಚೈನ್ನೈಗೆ ಬಂದ ಮೊದಲ ದಿನವೇ ನನಗೆ ಆಶ್ಚರ್ಯ ತಂದಿದ್ದು ಇಲ್ಲಿಯ ಬಸ್ಸುಗಳು. ಅವುಗಳನ್ನು ನೋಡಿದಾಕ್ಷಣ ನನಗೆ ಈ ಬಸ್ಸುಗಳ ಸ್ವಾತಂತ್ರ್ಯ ಪೂರ್ವದ ಬಸ್ಸುಗಳಿರಬೇಕು ಎಂದು ಕೊಂಡಿದ್ದೆ.

ಆದರೆ, ಲಲನೆಯರು ಹೇಗೆ ಆಧುನೀಕರಣ ಮತ್ತು ಜಾಗತೀಕರಣ ಸೋಂಕಿಗೆ ಒಳಗಾಗಿ ಅಪಡೆಟ್(!) ಆಗುತ್ತಿದ್ದಾರೋ ಹಾಗೆಯೇ ಚೆನ್ನೈ ಬಸ್ಸುಗಳು ಅಪಡೆಡ್ ಆಗುತ್ತಿವೆ. ಕಳೆದ ಆರು ತಿಂಗಳ ಹಿಂದೆ ಸೆಮಿ ಲಕ್ಸುರಿಯಂಥ ಬಸ್ಸುಗಳು ಚೆನ್ನೈ ರಸ್ತೆಗಳನ್ನು ಆವರಿಸಿಕೊಂಡಿವೆ. ಇದೀಗ ಒಂದು ವಾರದಿಂದ ಅಲ್ಲೊಂದು ಇಲ್ಲೊಂದು ಹೈಟೆಕ್(ಬಿನ್ನಾಣಗಿತ್ತಿ) ಬಸ್ಸುಗಳು ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ಚೆನ್ನೈನಲ್ಲಿ ಪ್ರತಿಯೊಂದು ಆಫೀಸು, ಕಟ್ಟಡ, ಮನೆಗಳಲ್ಲಿ ಕಡ್ಡಾಯವಾಗಿ ಎಸಿ ಹಾಕಿಸಿರುತ್ತಾರೆ. ಆದರೆ, ಈ ಬಸ್ಸುಗಳಲ್ಲಿ ಯಾಕೆ ಆ ರೀತಿ ಮಾಡಬಾರದು ಎಂದು ನಾನು ಚೆನ್ನೈಗೆ ಹೊಸದಾಗಿ ಬಂದಾಗ ಯೋಚಿಸುತ್ತಿದ್ದೆ. ಆದರೆ, ಈಗ ಎಸಿ ಹೈಟೆಕ್ ಬಸ್ಸುಗಳೇ ರೋಡಿಗಿಳಿದಿವೆ.

ಮಾಡ್ ಹುಡುಗಿಯ ಚೆಲುವಿನ ಹಾಗೆ ಈ ಹೈಟೆಕ್ ಬಸ್ಸುಗಳಿಗೆ ಒಂದು ಅಂದವಿದೆ.. ಚೆಂದವಿದೆ. ಅಲ್ಲಲ್ಲಿ ಉಬ್ಬು-ತಗ್ಗುಗಳಿವೆ(?). ನೋಡಲು ನಯನ ಮನೋಹರವಾಗಿವೆ. ಹುಷಾರ್, ಈ ಬಸ್ಸುಗಳು ತುಂಬಾ ದುಬಾರಿ, ಹುಡುಗಿಯರ ಹಾಗೆ....! ಆದರೆ, ಇಲ್ಲಿಯ ಜನಕ್ಕೆ ಸ್ವಾತಂತ್ರ್ಯ ಪೂರ್ವದ(!) ಬಸ್ಸುಗಳ ಮೇಲೆ ಜಾಸ್ತಿ ಮೋಹ ಅನಿಸುತ್ತದೆ. ಯಾಕೆಂದರೆ ಈ 'ಅಜ್ಜಿ' ಬಸ್ಸುಗಳು ಯಾವಾಗಲೂ ಭರ್ತಿಯಾಗಿರುತ್ತವೆ.

ಈ 'ಅಜ್ಜಿ' ಬಸ್ಸುಗಳು ಪ್ರಯಾಣವೇ ಒಂದು ರೀತಿಯದ್ದು. ಬೇಸಿಗೆಯಲ್ಲಂತೂ ಹೇಳತೀರದು ಆ ಗೋಳು. ಯಾವ ಕಡೆಯಿಂದ ಗಾಳಿ ಬರದಂತೆ ಜನ ಜೋತು ಬಿದ್ದಿರುತ್ತಾರೆ. ಭವಿಷಃ ಮನೆಯಲ್ಲಿ ವ್ಯಾಯಾಮ ಮಾಡದವರಿಗೆ ಇಲ್ಲಿ ಒಂದು ತರಹ ವ್ಯಾಯಾಮ ಮಾಡಿದಂತೆ ಅನುಭವಾಗಲಿಕ್ಕೂ ಸಾಕು. ಊಹಿಸಿಕೊಳ್ಳಿ ಹಾಗೆ ಸುಮ್ಮನೆ, ಚೆನ್ನೈನಂತ ಬಿಸಿಲು ನಗರದಲ್ಲಿ 'ಅಜ್ಜಿ'ಕಾಲದ ತುಂಬಿದ ಬಸ್ಸಿನಲ್ಲಿನ ಸ್ಥಿತಿಯನ್ನು..!?

ಈ ಚೆನ್ನೈ ಮಹಾನಗರವೇ ಹಾಗೆ, ಯಾವುದನ್ನು ಅಷ್ಟು ಸುಲಭವಾಗಿ ತನ್ನೊಳಗೆ ಬಿಟ್ಟುಕೊಳ್ಳುವುದಿಲ್ಲ. ಇನ್ನೂ ಊರಾಚೆಯೇ ನಿಲ್ಲಿಸಿ, ಪೂರ್ವಾಪರ ವಿಚಾರಿಸಿ, ತಿಳಿದುಕೊಂಡು ಒಳಗೆ ಬಿಟ್ಟುಕೊಳ್ಳುತ್ತದೆ, ಆಧುನಿಕತೆಗೆ ತೆರೆದುಕೊಳ್ಳುತ್ತದೆ ಅನ್ನಿಸುತ್ತದೆ ನನಗೆ. ಪಕ್ಕದ ಬೆಂಗಳೂರಿನಲ್ಲಿ ಈ ಹೈಟೆಕ್ ಬಸ್ಸುಗಳು ರಸ್ತೆಗಿಳಿದ ಸುಮಾರು ವರ್ಷಗಳೇ ಕಳೆದಿವೆ. ಆದರೆ, ಚೈನ್ನೈಗೆ ಈಗ ಬಂದಿದೆ ಆ ಕಾಲ.

ತನ್ನಷ್ಟಕ್ಕೆ ತಾನೇ ಮಡಿವಂತ ನಗರವೆಂದು ಭಾವಿಸಿಕೊಳ್ಳುವ ಚೆನ್ನೈ. ಮೇಲ್‌ನೋಟಕ್ಕೆ ತುಂಬಾ ಸಾಂಪ್ರದಾಯಿಕ ನಗರವೆಂದು ತೋರಿದರು, ಆ ಆಧುನಿಕತೆ ಹೆಮ್ಮಾರಿ, ಜಾಗತೀಕರಣದ ಬಿರುಗಾಳಿ ಇಲ್ಲಿಯ ಸಾಂಪ್ರದಾಯಿಕ ಬೇರುಗಳನ್ನು ಅಲ್ಲಾಡಿಸಿವೆ.

ಇಲ್ಲಿಗೂ ಅನೇಕ ಬಹುರಾಷ್ಟ್ರೀಯ ಸಾಫ್ಟವೇರ್ ಕಂಪೆನಿಗಳು ಲಗ್ಗೆ ಇಡುತ್ತಿವೆ. ಹೀಗಾಗಿಯೇ ಅರೆ ಮನಸ್ಸಿನಲ್ಲಿಯೇ ಚೆನ್ನೈ ತನ್ನನ್ನು ತಾನು ಈ ಥಳಕು -ಬಳಕು ಮಾದರಿಯ ಜೀವನಕ್ಕೆ ಅನಾವರಣಗೊಳ್ಳುತ್ತಿದೆಯಾ....? ಗೊತ್ತಿಲ್ಲ. ಒಂದು ಅಂತೂ ಸತ್ಯ. ಚೈನ್ನೈಗೆ ಈಗ ಕೇವಲ ಸಾಂಪ್ರದಾಯಿಕ ನಗರವಾಗಿ ಉಳಿದಿಲ್ಲ. ಹೈಟೆಕ್ ಬಿನ್ನಾಣಗಿತ್ತಿಯರೂ ರಸ್ತೆಗಿಳಿದಂತೆ, ತುಂಬಾ ಹಳೆಯ ಚೆನ್ನೈ ಕೂಡಾ ಮತ್ತಷ್ಟು ಯಂಗ್ ಆಂಡ್ ಎನರ್ಜಿಟಿಕ್ ಆಗಿ ಕಾಣುತ್ತಿದೆ.

ಶುಕ್ರವಾರ, ಅಕ್ಟೋಬರ್ 5, 2007

ಬೆಕ್ಕಿನ ಮರಿ ಬೆಲೆ 35,000 ರೂಪಾಯಿ..!


ನಿಜ.. ಬೆಕ್ಕಿನ ಮರಿ ಬೆಲೆ 35,000 ರೂಪಾಯಿ...! ಭಾರತ ಬಡವರ ರಾಷ್ಟ್ರ ಅಂತ್ ಯಾರು ಹೇಳ್ತಾರೆ. ಇಷ್ಟೆ ಬೆಲೆಯ ಏಳೆಂಟು ಬೆಕ್ಕಿನ ಮರಿಗಳನ್ನು ಹೊಂದಿರುವ ಒಡೆಯರು ಬೆಂಗಳೂರಿನಲ್ಲಿದ್ದಾರೆಂದರೆ ಹುಬ್ಬೇರಿಸಬೇಡಿ.

ಮೊನ್ನೆ ಬೆಂಗಳೂರಿಗೆ ಹೋಗಿದ್ದೆ. ನನ್ನ ಮಾಧ್ಯಮ ಮಿತ್ರ ಯಾವುದೋ ಒಂದು ಫೆಸ್ಟ್ ವರದಿ ಮಾಡಲು ನನ್ನನ್ನು ತನ್ನ ಜತೆ ಕರೆದುಕೊಂಡು ಹೋಗಿದ್ದ. ಅಲ್ಲಿ ಈ ಮಹಾ ದುಬಾರಿಯ ಬೆಕ್ಕು ನನ್ನ ಕಣ್ಣಿಗೆ ಬಿತ್ತು. ಅಷ್ಟೆ ಅಲ್ಲ, ನನ್ನ ಮಿತ್ರ ಅದನ್ನು ತನ್ನ ಕ್ಯಾಮೆರಾ ಕಣ್ಣಿಗೂ ತುಂಬಿಕೊಂಡ.

ತುಂಬಾ ಮುದ್ದಾಗಿದ್ದ ಆ ಬೆಕ್ಕಿನ ಮರಿ ನೋಡೋದಕ್ಕೆ ಕೊಂಚ ನಾಯಿ ಮರಿಯಂತೆ ಇತ್ತು. ನಾನು ಅದನ್ನ ನಾಯಿ ಮರೀನೆ ಅಂತ್ ತಿಳ್ಕೊಂಡಿದ್ದೆ. ಆದರೆ, ಆ ಬೆಕ್ಕಿನ ಮರಿಯ ಒಡತಿಯನ್ನು ಮಾತನಾಡಿಸಿದಾಗ ತಿಳಿದುಬಂತು, ಅದು ಬೆಕ್ಕಿನ ಮರಿ ಅಂತ್, ಅದು ವಿದೇಶದಿಂದ ಅಂದ್ರೆ, ಯುರೋಪಿನಿಂದ ಆಮದು ಮಾಡಿಕೊಂಡದ್ದು.

ಬೆಕ್ಕಿನ ಮರಿ ಒಡತಿ. ವೈದ್ಯ ವೃತ್ತಿ ಮಾಡುತ್ತಿದ್ದಾರೆ. ಅವರಿಗೆ ಬೆಕ್ಕುಗಳನ್ನು ಸಾಕುವುದು ಹವ್ಯಾಸವಂತೆ. ಅದು ವಿದೇಶಿ ಬೆಕ್ಕುಗಳು (!). ಇದೇ ಮಾದರಿಯ ಸುಮಾರು ಏಳೆಂಟು ಬೆಕ್ಕುಗಳನ್ನು ಸಾಕಿಕೊಂಡಿದ್ದಾರಂತೆ. ನಾನು ನೋಡಿದ ಬೆಕ್ಕಿನ ಬೆಲೆ ಯುರೋ ಲೆಕ್ಕದಲ್ಲಿ 7 ರಿಂದ 8 ನೂರು ಯುರೋ ಅಂತೆ. ಅಂದ್ರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 35 ಸಾವಿರು ರೂಪಾಯಿಯಂತೆ. ಈ ವಿವರ ನೀಡಿದ್ದು ಕೂಡಾ ಅವರೆ. ಆದರೆ, ಅವರ ಹೆಸರು ಕೇಳೋದನ್ನು ಮರೆತು ಬಿಟ್ಟೆ.

ಮತ್ತೊಬ್ಬ ಮಿತ್ರ "ಈ ಬೆಕ್ಕು ಇಲಿ ಹಿಡಿಯುತ್ತಾ..." ತರ್ಲೆ ಪ್ರಶ್ನೆ ಕೇಳಿದ. ಅದಕ್ಕೆ ಅವರು "ಗೊತ್ತಿಲ್ಲ.. ಹೊರಗಡೆ ಬಿಟ್ಟು ನೋಡಿಲ್ಲ" ಅಂದ್ರು. (ಇಲಿ ಹಿಡಿಯುತ್ತೆ, ಇಲಿ ತಂದು ಬಿಡಿ ಎಂಬ ಭಾವನೆಗಳು ಆಗ ಅವರ ಮುಖದಲ್ಲಿದ್ದವು). ಈ ಮಾತಿಗೆ ನಾವು ಎಲ್ಲರು ನಕ್ಕೇವು.
****

ಸ್ವಲ್ಪ ಯೋಚಿಸಿ, ಸುಮಾರು 35,000 ರೂಪಾಯಿ ಬೆಲೆಯ ಏಳೆಂಟು ಬೆಕ್ಕಿನ ಮರಿಗಳನ್ನು ಸಾಕುವ ಹವ್ಯಾಸಿಗರು(ಹಣವಂತರು) ನಮ್ಮಲ್ಲಿದ್ದಾರೆ. ಹೀಗಿರಬೇಕಾದರೆ, ಭಾರತ ಹೇಗೆ ಬಡ ರಾಷ್ಟ್ರವಾಗೋಕೆ ಸಾಧ್ಯ ಅಲ್ವಾ.

35 ಸಾವಿರು ರೂಪಾಯಿಯಲ್ಲಿ ಗ್ರಾಮೀಣ ಪ್ರದೇಶದ ಓರ್ವ ಬಡ ಹುಡುಗ ಪಿಯೂಸಿ ವರೆಗೆ ಶಿಕ್ಷಣ ಪೂರೈಸಬಲ್ಲ. ಅಂದ್ರೆ ಅಂತ ಏಳೆಂಟು ಬೆಕ್ಕಿನ ಮರಿಗಳನ್ನು ಸಾಕಿಕೊಂಡಿರುವ ಒಡತಿ ಸುಮಾರು ಏಳೆಂಟು ಹುಡುಗರಿಗೆ ಶಿಕ್ಷಣ ನೀಡಬಹುದಾಗಿತ್ತು. ಅಲ್ವಾ, ನಮ್ಮ ದೇಶದಲ್ಲಿ ಇಂತಹುದನ್ನು ಕೇಳಬೇಡಿ. ಬೇಡವಾದಕ್ಕೆ ದುಡ್ಡು ಸುರಿಯೋ ಜನ ಬೇಜಾನ್ ಇದ್ದಾರೆ. ಯಾವುದಾದರೂ ಒಂದು ಒಳ್ಳೆಯ ಕಾರ್ಯ, ಬಡವರಿಗೆ ಸಹಾಯವಾಗುವಂಥದಕ್ಕೆ ದುಡ್ಡು ಕೇಳಿದರೆ ಅವರ ಹತ್ರ, ದುಡ್ಡು ಇರಲ್ಲ.

ಅಷ್ಟಕ್ಕೂ ಅದು ಅವರ ದುಡ್ಡು. ಅವರು ಬೆಕ್ಕು ಅಥವಾ ನಾಯಿಯನ್ನಾದರೂ ಖರೀದಿಸುತ್ತಾರೆ. ಅದನ್ನು ಕೇಳೊ ಹಕ್ಕು ನಮಗೆ ಇಲ್ಲ. ಆದರೆ, ಪ್ರತಿಯೊಬ್ಬನಿಗೂ ಸಮಾಜ ಋಣ ಇರುತ್ತಲ್ಲ. ಬೆಕ್ಕಿಗೆ, ನಾಯಿಗೆ ಲಕ್ಷಾಂತರ ಖರ್ಚು ಮಾಡೊ ಜನ, ಅದರಲ್ಲಿ ಕೊಂಚ ಭಾಗವನ್ನಾದರೂ ಹಳ್ಳಿಯಲ್ಲಿರುವ ಪ್ರತಿಭಾವಂತ ಬಡಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದರೆ, ಒಂದು ಕುಟುಂಬ ಬದುಕುತ್ತದೆ. ಇಂದಿಗೂ ಹಳ್ಳಿಯಲ್ಲಿ ಅನೇಕ ಪ್ರತಿಭಾವಂತ ಹುಡುಗರು ದುಡ್ಡಿನ ಆಸರೆ ಇಲ್ಲದೇ, ತಮ್ಮ ಓದನ್ನು ಅರ್ಧಕ್ಕೆ ನಿಲ್ಲಿಸಿ, ಕೂಲಿ-ನಾಲಿ ಮಾಡುತ್ತಿದ್ದಾರೆ. ಇಂಥವರಿಂದ ಅಂಥವರಿಗೆ ಸ್ವಲ್ಪವಾದರೂ ಸಹಾಯವಾದರೆ ನಮ್ಮ ಹಳ್ಳಿಗಳು, ಹಳ್ಳಿಗರು ಉದ್ದಾರವಾಗುತ್ತಾರೆ.

ಅಷ್ಟಕ್ಕೂ ನಾಯಿ, ಬೆಕ್ಕು ಸಾಕೋದು ತಪ್ಪಲ್ಲ. ಆದರೆ, ಅವುಗಳ ಮೇಲೆ ಖರ್ಚು ಮಾಡೋ ಹಣದಲ್ಲಿ ಕಾಲು ಭಾಗವನ್ನಾದರೂ ಬಡವರಿಗೆ ಕೊಟ್ಟರೆ, ದೇಶ ಉದ್ದಾರವಾದೀತು.

ಹೋಗ್ಲಿ ಬಿಡಿ.. ಇದನ್ನೆಲ್ಲ ಹೇಳೋದಕ್ಕೆ ನಾನ್ಯಾರು ..?? ನೀವು ಯಾರು.. ಅಲ್ವಾ ??

ಶುಕ್ರವಾರ, ಸೆಪ್ಟೆಂಬರ್ 28, 2007

ನಗುವ ನನ್ನ ನಲ್ಲೆ; ನೀ ಇರುವೇ ಹೃದಯಲ್ಲೆ

ಹೇ ಒರಟ,

"ಈ ಪ್ರೀತಿನೇ ಹಾಗೆ, ಬಾ ಅಂದ್ರ ಬರಲ್ಲ, ಹೋಗು ಅಂದ್ರ ಹೋಗಲ್ಲ" ಅಂತ್ ನೀನೇ ಹೇಳಿದ್ದು. ನೆನಪು ಮಾಡ್ಕೊ. ಶುದ್ಧ ಒರಟ ನೀನು. ನನ್ನ ಬೆನ್ನ ಹಿಂದೆ ಬಿದ್ದು, ನನ್ನ ಹೃದಯ ಕದ್ದವನು ನೀನೆ ತಾನೆ, ಈಗ ಆ ಹೃದಯ ಕಾಯುತ್ತಿದೆ ಎಂಬ ಅರಿವು ನಿನಗಿಲ್ಲಂದ್ರೆ ಏನರ್ಥ. ನನಗಿಂತಲೂ ನಿಂಗೆ ನಿನ್ನ ಕೆಲಸವೇ ಮುಖ್ಯನಾ... ಹೀಗೆ ಸಾವಿರಾರು ಪ್ರಶ್ನೆ ಕೇಳು ಬೇಕು ಅನ್ಕೊಂಡಿದ್ದೀನಿ, ಆದ್ರೆ ಕೇಳಲ್ಲ. ಅದು ನಿಂಗೂ ಗೊತ್ತು ದೊರೆ.

ಕಾಲೇಜ್‍‌ನಲ್ಲಿ ನನ್ನಷ್ಟಕ್ಕೆ ನಾನು ಹಾಡ್ತಾ, ಕುಣಿತಾ ಹಾಯಾಗಿದ್ದೆ. ನೀನೆಲ್ಲಿಂದ ಬಂದೆಯೊ..? ಅದು ಹ್ಯಾಗೆ ನನ್ನ ಮನಸ್ಸನ್ನಾ ಗೆದ್ದೆಯೋ..? ಒಂದು ಅರ್ಥ ಆಗಲ್ಲ ನಂಗೆ. ನಿಂಗೆ ಗೊತ್ತಾ, ನಾನು-ನೀನು ಸರಿಯಾದ ಜೋಡಿಯಲ್ಲಂತ ನನ್ನ ತಂಗಿ ಹೇಳ್ತಾಳೆ. ಅವಳು ಹೇಳೊದು ನಿಜ. ಕಾಲೇಜು ರಾಣಿ(ಮಿಸ್ ಕಾಲೆಜ್)ಯಾಗಿ ಆಯ್ಕೆಯಾದಾಕೆ ನಾನು. ಅದಾವುದೋ ಹಳ್ಳಿಯ ಮೊಲೆಯಿಂದ ಎದ್ದು ಬಂದವನಂತೆ ಇದ್ದೆ ನೀನು.

ನನ್ನ ಒಂದು ಕಣ್ ನೋಟಕ್ಕಾಗಿ ಕಾಲೇಜು ಹುಡುಗರೆಲ್ಲಾ ನನ್ನ ಹಿಂದೆನೇ ಬರ್ತಾ ಇದ್ದರ್ರೂ. ಆದ್ರೂ, ಹುಡುಗಾ ನೀನೆ ನಂಗೆ ಇಷ್ಟ, ಯಾಕೆ ಗೊತ್ತಾ..? ಹಾಗೇ ಸುಮ್ಮನೆ ನೋಡಿದ್ರೆ ನೇರವಾಗಿ ಇರಿಯುವ ಆ ನಿನ್ನ ಕಣ್ಣುಗಳು, ಯಾವಾಗಲೂ ನಿನ್ನ ತುಟಿಯಲ್ಲಿ ಸುಡೊ ಆ ಸಿಗರೇಟು, ನಿನ್ನ ಡಿಪಾರ್ಟಮೆಂಟ್ ಬಳಿ ಇದ್ದ ಗಿಡದ ಹತ್ತಿರ ಒಂದು ಕಾಲು ಓರೆಯಾಗಿಟ್ಟು ನಿಲ್ಲುವ ಭಂಗಿ ಇದೆಯಲ್ಲಾ.. ಅದು ನಂಗೆ ತುಂಬಾ ಇಷ್ಟ. ನಿನ್ನ ಹಾಗೆ ನಡೆಯೋಕೆ ಯಾರಿಗೂ ಬರಲ್ಲ.. ಒರಟ.

ಎಲ್ಲಕ್ಕಿಂತ ಹೆಚ್ಚಾಗಿ ನೀನು ಒರಟನಾಗಿ ಕಂಡ್ರೂ, ಮಗುವಿನಂಥ ನಿನ್ನ ಹೃದಯ ನನ್ನನ್ನು ಮರುಳು ಮಾಡಿತು ಮಾರಾಯಾ. ಇನ್ನೂ ನೀ ಬರೆಯುವ ಕವಿತೆಗಳು ನನ್ನಂಥ ಸಾವಿರಾರು ಹುಡುಗಿಯರನ್ನ ನಿನ್ನತ್ತ ತಂದುಕೊಡಬಲ್ಲವು. ಥ್ಯಾಂಕ್ ಗಾಡ್, ಸದ್ಯಕ್ಕೆ ಆ ದೈವ ನನ್ನದಾಗಿದೆ. ಸರೀ ಹೀಗೆ ಹೇಳ್ತಿದ್ದೀನಿ ಅಂತಾ ಬಹಳ ಉಬ್ಬಿ ಹೋಗಬೇಡ. ನಾನೇನು ನಿನಗಿಂತ ಕಮ್ಮಿ ಇಲ್ಲ ಎಂಬುದು ನೆನಪಿರಲಿ. ಹ್ಹ ಹ್ಹ ಹ್ಹ ಹ್ಹ.

ಅಯ್ಯಾ ದೊರೆ, ಆ ನಿನ್ನ ಕೆಲಸಗಳನ್ನು ಬದಿಗಿಟ್ಟ ನಿನಗಾಗಿ ಕಾಯುತ್ತಿರುವ ಈ ಹೃದಯಕ್ಕೆ ದರ್ಶನ ತೋರಿಸಬಾರ್ದಾ. ನಿನ್ನ ತುಟಿಗಳ ನಡುವೆ ಸದಾ ಸುಡುವ ಸಿಗರೆಟ್ ನೋಡುಬೇಕು ಅಂತಾ ತಂಬಾ ಆಸೆ ಕಣೋ. ಶ್.. ಹೀಗೆ ಹೇಳ್ತಿದ್ದೀನಿ ಅಂತ ಒಂದು ಪ್ಯಾಕ್ ಸಿಗರೆಟ್ ಮುಗ್ಸಿಬಿಟ್ಟು ಎರಡನೇ ಪ್ಯಾಕ್‌ಗೆ ಹೋಗಬೇಡ.

ಏ, ಹೇಳೊದು ಮೆರೆತು ಬಿಟ್ಟೆ. ನೀ ಬರೆದ "ನನ್ನ ನಲ್ಲೆ" ಕವನ ಮೊನ್ನೆಯ ವಾರ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅದು ನನಗೋಸ್ಕರ ತಾನೆ ಬರೆದಿದ್ದು ತಾನೆ ? ಬರೆದಿರ್ತಿಯಾ ಬಿಡು. ತುಂಬಾ ಚೆನ್ನಾಗಿದೆ ಅಂತಾ ಹೇಳಲ್ಲಾ, ಯಾಕೆಂದ್ರೆ ನೀ ಬರೆದ ಯಾವ ಕವನಗಳು ಚೆನ್ನಾಗಿರಲ್ಲ ಹೇಳು. ಈ ಕವನದ ಸಾಲುಗಳನ್ನು ಕೂಡಾ ಅದೆಷ್ಟು ಹುಡುಗರು ಹುಡುಗಿಯರಿಗೆ "ಕೊಟ್" ಮಾಡ್ತಾರೋ ನಾ ಕಾಣೆ.

ನಗುವ ನನ್ನ ನಲ್ಲೆ
ನೀ ಇರುವೇ ಹೃದಯಲ್ಲೆ
ಭೂಮಿ-ಭಾನು ದಾಟಿ
ಪ್ರೀತಿಯ ಲೋಕಕ್ಕೆ
ಬಾರೆ.. ನನ್ನ ನಲ್ಲೆ,
ಈ ಲೈನ್‌ಗಳು ತುಂಬಾ ಇಷ್ಟ ಆಯ್ತು ನಂಗೆ. ಹೇಳು ಒರಟ, ಯಾವಾಗ ಬರ್ತಿಯಾ ಊರಿಗೆ, ಯಾವಾಗ ಹೋಗೋಣೊ ಪ್ರೀತಿಯ ಲೋಕಕ್ಕೆ.

ನಿನ್ನವಳು
ಮೀನಾಕ್ಷಿ

(ಈ ಪತ್ರ ಯಾಹೂ ಕನ್ನಡದಲ್ಲಿ ಪ್ರಕಟಗೊಂಡಿದೆ. ನೋಡಲು ಇಲ್ಲಿ ಕ್ಲಿಕಿಸಿ)

ಬುಧವಾರ, ಸೆಪ್ಟೆಂಬರ್ 19, 2007

ನನ್ನವಳ ಪ್ರೀತಿ

ನನ್ನವಳ
ಪ್ರೀತಿ ಅಂದ್ರ
ಚೆನ್ನೈ
ಮಳೆ ಇದ್ದಾಂಗ
ರಾತ್ರಿ ಪೂರ್ತಿ
ಧೋ ಎಂದು ಸುರಿದು
ಮತ್ತ...
ಬೆಳಗ್ಗೆ ಒಣಾ ಬಿಸಿಲು.

ಶುಕ್ರವಾರ, ಸೆಪ್ಟೆಂಬರ್ 14, 2007

ವಿದಾಯ ಹೇಳಿದ 'ನಾಯಕ' ಫ್ಲೆಮಿಂಗ್

ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ನಾಯಕ ಯಾರು ಎಂಬ ಪ್ರಶ್ನೆ ಎದುರಾದಾಗ ಎರಡು ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತವೆ. ಆಸ್ಟ್ರೇಲಿಯಾ ತಂಡದ ನಾಯಕ 'ರಿಕಿ ಪಾಟಿಂಗ್' ಮತ್ತು ನ್ಯೂಜಿಲೆಂಡ್ ತಂಡದ 'ಸ್ಟೀಫನ್ ಫ್ಲೆಮಿಂಗ್'.

ಆದರೆ, ಇವರಿಬ್ಬರಲ್ಲೂ ಯಾರು ಉತ್ತಮರು ಎಂದು ಪ್ರಶ್ನಿಸಿದಾಗ, ಕ್ರಿಕೆಟ್ ಪಂಡಿತರು ಫ್ಲೆಮಿಂಗ್‌ನತ್ತ ಬೆರಳು ಮಾಡುತ್ತಾರೆ. ಯಾಕೆಂದರೆ, ಆಸ್ಟ್ರೇಲಿಯಾ ತಂಡದಲ್ಲಿ ಅನೇಕ ಸ್ಟಾರ್ ಆಟಗಾರರಿದ್ದಾರೆ. ಹೀಗಿರುವಾಗ ನಾಯಕ ತನ್ನ ಕೆಲಸವನ್ನು ಯಾವುದೇ ಆಯಾಸವಿಲ್ಲದೇ ನಿರ್ವಹಿಸಬಹುದು. ಆದರೆ, ಯಾವುದೇ ಸ್ಟಾರ್ ಆಟಗಾರರಿಲ್ಲದೇ ಎದುರಾಳಿಗಳನ್ನು ತಬ್ಬಿಬ್ಬುಗೊಳಿಸುವಂಥ ತಂತ್ರಗಳನ್ನು ಹೆಣಿದು ಖೆಡ್ಡಾಗೆ ಕೆಡವುವುದು ಫ್ಲೆಮಿಂಗ್‌‌ನಂತಹ ಚಾಣಾಕ್ಷರಿಗೆ ಮಾತ್ರ ಸಾಧ್ಯ.

ಇಂಥ ಆಟಗಾರ ಮತ್ತು ನಾಯಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿ, ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್‌ ತಂಡದ ನಾಯಕನ ಸ್ಥಾನವನ್ನು ಕೂಡಾ ಬಿಟ್ಟುಕೊಡುವ ಮೂಲಕ, ಕ್ರಿಕೆಟ್‌ನಿಂದ ನಿವೃತ್ತಿಯ ಅಂಚಿನವರೆಗ ಬಂದಿರುವುದನ್ನು ಸೂಕ್ಷ್ಮವಾಗಿ ಹೊರಗೆಡುವಿದ್ದಾರೆ. ಆದರೆ, ಇದು ಅವರ ಅಭಿಮಾನಿಗಳಿಗಂತೂ ನಿರಾಶೆ ತಂದಿರುವುದರಲ್ಲಿ ಸಂಶಯವೇ ಇಲ್ಲ.

ನ್ಯೂಜಿಲೆಂಡ್ ಪರ ಅತಿ ಹೆಚ್ಚು ಯಶಸ್ಸು ಗಳಿಸಿದ ನಾಯಕರ ಹೆಸರು ಸಾಲಿನಲ್ಲಿ ಫ್ಲೆಮಿಂಗ್ ಹೆಸರು ಢಾಳವಾಗಿ ಕಾಣಿಸುತ್ತದೆ. ಇಂಥ ಮಹಾನ್ ಆಟಗಾರ ಇನ್ನೂ ಮುಂದೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಬೇಸರ ಸಂಗತಿಯಾದರೂ, ಅರಗಿಸಿಕೊಳ್ಳಲೇಬೇಕು. ಯಾಕೆಂದರೆ, ಪ್ರತಿಯೊಂದು ಆರಂಭಕ್ಕೂ ಅಂತ್ಯವಿದ್ದೇ ಇರುತ್ತದೆ.

ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪಾಟಿಂಗ್, ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್, ಸ್ಪಿನ್ ಮೋಡಿಗಾರ ಮುರಳೀಧರನ್ ಆಗಲಿ ಒಂದು ದಿನ ಅಂಕಣದಿಂದ ಹೊರಹೋಗಲೇಬೇಕು. ಅಂತಹುದೇ ಸ್ಥಿತಿಗೆ ಫ್ಲೆಮಿಂಗ್ ತಲುಪಿದ್ದಾರಷ್ಟೆ. ಅವರು ಟೆಸ್ಟ್‌ಗೆ ಲಭ್ಯವಿರುವುದಾಗಿ ಹೇಳಿದ್ದಾರಾದರೂ, "ಹೊಸ ನೀರು ಬಂದಾಗ, ಹಳೇ ನೀರು ಕೊಚ್ಚಿಕೊಂಡು ಹೋಗಲೇ ಬೇಕು" ಎನ್ನುವ ಹಾಗೆ, ನ್ಯೂಜೆಲಿಂಡ್ ತಂಡದಲ್ಲಿ ಬಿಸಿ ರಕ್ತದ ಯುವಕರ ಆಗಮನವಾಗುತ್ತಿರುವಾಗ ಫ್ಲೆಮಿಂಗ್ ಟೆಸ್ಟ್ ಕ್ರಿಕೆಟ್‌ನಿಂದ ನೇಪಥ್ಯಕ್ಕೆ ಸರಿಯುವ ದಿನಗಳು ಕೂಡಾ ಬಹಳ ದೂರವಿಲ್ಲ ಎಂದು ಹೇಳಬಹುದು.

ಫ್ಲೆಮಿಂಗ್ ಪೂರ್ಣ ಹೆಸರು, ಸ್ಟೀಫನ್ ಪೌಲ್ ಫ್ಲೆಮಿಂಗ್. ಇವರು 1973 ಏಪ್ರಿಲ್ 1 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಜನಿಸಿದರು. ಫ್ಲೆಮಿಂಗ್ ತಂದೆ ಕ್ರೈಸ್ಟ್‌ಚರ್ಚ್‌ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷರಾಗಿದ್ದರು. ಅತಿ ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಫ್ಲೆಮಿಂಗ್, ನೋಡು ನೋಡುತ್ತಿದ್ದಂತೆ ತಂಡದ ಅವಿಭಾಜ್ಯ ಅಂಗವಾಗಿ ಬೆಳೆದರು.

ಎಡಗೈ ಬ್ಯಾಟ್ಸ್‌ಮನ್‌ರಾದ ಫ್ಲೆಮಿಂಗ್, 1994ರಲ್ಲಿ ಭಾರತ ವಿರುದ್ಧ ಟೆಸ್ಟ್ ಆಡುವ ಮೂಲಕ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ತಾವಾಡಿದ ಪ್ರಥಮ ಪಂದ್ಯದಲ್ಲಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದಿದ್ದು ವಿಶೇಷ. ಈ ಪಂದ್ಯದಲ್ಲಿ ಅವರು 92 ರನ್ ಗಳಿಸಿದ್ದರು.

ಇದೇ ಪ್ರವಾಸದಲ್ಲಿ ಅವರು ಭಾರತದ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಕ್ಕೂ ಕಾಲಿಟ್ಟರು. ಈ ಪಂದ್ಯದಲ್ಲಿ ಅವರು 90 ರನ್ ಗಳಿಸಿ ರನ್ ಔಟ್‌ಗೆ ಬಲಿಯಾದರು.

ಫ್ಲೆಮಿಂಗ್ ಆಟದ ತಂತ್ರಗಾರಿಕೆ ಹೆಸರುವಾಸಿಯಾದಂತೆ ಕೆಲವು ವಿವಾದಗಳಿಗೂ ಸಿಕ್ಕಿಹಾಕಿಕೊಂಡಿದ್ದಾರೆ. 1995 ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ತಂಡದ ಸಹ ಸದಸ್ಯರೊಂದಿಗೆ ಹೊಟೇಲೊಂದರಲ್ಲಿ ಮಾರಿಜುನಾ ಸೇದುವಾಗ ಸಿಕ್ಕಿಬಿದ್ದಿದ್ದು ವಿವಾದಕ್ಕ ಕಾರಣವಾಗಿತ್ತು. ಮುಂದೆ 1996-97ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ಜೀವನ ಮೊದಲ ಶತಕ ದಾಖಲಿಸಿದ ಫ್ಲೆಮಿಂಗ್, ಮೂರನೇ ಟೆಸ್ಟ್ ಪಂದ್ಯದಲ್ಲಿ ಲೀ ಜೊರ್ಮನ್ ಅವರಿಂದ ನಾಯಕನ ಜವಾಬ್ದಾರಿ ವಹಿಸಿಕೊಂಡರು. ಆಗ ಅವರ ವಯಸ್ಸು 23 ವರ್ಷ 320 ದಿನಗಳು. ಹೀಗಾಗಿ ನ್ಯೂಜಿಲೆಂಡ್ ಕಂಡ ಅತ್ಯಂತ ಕಿರಿಯ ನಾಯಕ ಎಂದು ಗುರುತಿಸಿಕೊಂಡರು.

2000ರಲ್ಲಿ ಜಿಂಬಾಬ್ವೆ ವಿರುದ್ಧ ಗೆಲವು ಸಾಧಿಸುವ ಮೂಲಕ ನ್ಯೂಜಿಲೆಂಡ್ ಕ್ರಿಕೆಟ್‌‌ನ ಅತ್ಯಂತ ಯಶಸ್ವಿ ನಾಯಕರೆನಿಸಿಕೊಂಡರು. ಅವರ ನಾಯಕತ್ವದಲ್ಲಿ 12ನೇ ಗೆಲವು ಇದಾಗಿತ್ತು. ಇದಕ್ಕೂ ಮೊದಲು ಈ ದಾಖಲೆ ಗಫ್ ಹೊವರ್ತ್ ಅವರ ಹೆಸರಿನಲ್ಲಿತ್ತು.

ನಾಯಕನಾಗಿ ಫ್ಲೆಮಿಂಗ್
ಕಳೆದ ಹತ್ತು ವರ್ಷಗಳಲ್ಲಿ ಸುಮಾರು 80 ಟೆಸ್ಟ್ ಪಂದ್ಯಗಳಲ್ಲಿ 25 ಪಂದ್ಯಗಳಲ್ಲಿ ಗೆಲವು ಸಾಧಿಸಿದ್ದು, 25 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಒಂದು ದಿನ ಕ್ರಿಕೆಟ್ ತಂಡದ ನಾಯಕರಾಗಿ ಫ್ಲೆಮಿಂಗ್, ಕಳೆದ ಹತ್ತು ವರ್ಷಗಳಲ್ಲಿ 218 ಪಂದ್ಯಗಳಲ್ಲಿ 98 ಸಾರಿ ಗೆಲುವು ಕಂಡಿದ್ದಾರೆ.

ಅಂಕಿ ಅಂಶಗಳು
ಫ್ಲೆಮಿಂಗ್ ಇದುವರೆಗೆ 104 ಟೆಸ್ಟ್ ಪಂದ್ಯ ಆಡಿ 177 ಇನಿಂಗ್ಸ್‌ನಲ್ಲಿ 36.64 ಸರಾಸರಿಯಲ್ಲಿ 6620 ರನ್ನಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 9 ಶತಕಗಳು ಮತ್ತು 41 ಅರ್ಧ ಶಕತಕಗಳು ಸೇರಿವೆ.

ಅದೇ ರೀತಿಯಾಗಿ 280 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿ 269 ಇನಿಂಗ್ಸ್‌ಗಳಲ್ಲಿ 32.40 ಸರಾಸರಿಯಂತೆ 8037 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 8 ಶತಕ ಮತ್ತು 49 ಅರ್ಧ ಶತಕಗಳು ಸೇರಿವೆ.

(ಈ ಲೇಖನ ಯಾಹೂ(in.kannada.yahoo.com) ಕನ್ನಡದಲ್ಲಿ ಪ್ರಕಟಗೊಂಡಿದೆ. ಲಿಂಕ್-http://in.kannada.yahoo.com/News/Sports/0709/13/1070913053_1.htm)

ಶನಿವಾರ, ಸೆಪ್ಟೆಂಬರ್ 8, 2007

ಪುಟ್ಟ ಸಂಭ್ರಮ

ಕನ್ನಡದ ಪ್ರತಿಷ್ಠಿತ ಪೊರ್ಟಲ್ ದಟ್ಸ್ ಕನ್ನಡ ಡಾಟ್ ಕಾಮ್(thatskannada.com) 'ನನ್ನ ಹಾಡು' ಬ್ಲಾಗ್ ಕುರಿತು ನಾಲ್ಕು ಮೆಚ್ಚುಗೆಯ ಮತ್ತು ಪ್ರೋತ್ಸಾಹದಾಯಕ ಮಾತುಗಳನ್ನಾಡಿ ತಮ್ಮ ಪೊರ್ಟಲ್‌ನಲ್ಲಿ ಪರಿಚಯಿಸಿದ್ದಾರೆ. ಇದಕ್ಕೆ ಹೇಗೆ ನಾನು ಪ್ರತಿಕ್ರಿಯಿಸಬೇಕು ಎಂದು ತಿಳಿಯುತ್ತಿಲ್ಲ. ಯಾಕೆಂದರೆ ಇದು ನನಗೆ ಪುಟ್ಟ ಸಂಭ್ರಮವನ್ನುಂಟು ಮಾಡಿದೆ. ನನ್ನ ಭಾವನೆಗಳನ್ನು ಅವರು ಗುರುತಿಸಿರುವುದಕ್ಕೆ ತುಂಬಾ ಸಂತೋಷವಾಗಿದ್ದು, ದಟ್ಸ್ ಕನ್ನಡ ಡಾಟ್ ಕಾಮ್‌ಗೆ ಅನಂತ ವಂದನೆಗಳನ್ನು ಹೇಳಲಿಚ್ಛಿಸುತ್ತೇನೆ.

ನಿಮ್ಮ ಬೆಂಬಲ, ಪ್ರೋತ್ಸಾಹ ಹೀಗೆ ಇರಲಿ.
ಮಲ್ಲಿಕಾರ್ಜುನ್

(ಬ್ಲಾಗ್ ಕುರಿತು ಮೆಚ್ಚುಗೆ ಬರೆದ ದಟ್ಸ್ ಕನ್ನಡ ಕೊಂಡಿ ಇಲ್ಲಿ ಇದೆ http://thatskannada.oneindia.in/hand_post/blogs/070907nanna-hadu-mallikarjuna.html)

ಗುರುವಾರ, ಸೆಪ್ಟೆಂಬರ್ 6, 2007

ಜೀವನ ರೂಪಿಸುವ ಶಿಕ್ಷಕರನ್ನು ಮನಸಾ ಸ್ಮರಿಸೋಣ...

ಮತ್ತೆ ಶಿಕ್ಷಕರ ದಿನಾಚರಣೆ ಬಂದಿದೆ; ಅದೇ ಬಾಲ್ಯದ ನೆನಪುಗಳನ್ನು ಹೊತ್ತು ತಂದಿದೆ.

ಈ ದಿನದಂದು ನಮಗೆ ಆಗ ಹಬ್ಬದ ಸಂಭ್ರಮ. ಡಾ. ರಾಧಾಕೃಷ್ಣನ್ ಅವರ ಭಾವಚಿತ್ರವಿರುವ ಚಿಕ್ಕ ಪೋಸ್ಟರ್ ‌‌(ನಾಲ್ಕಾಣೆ ದೇಣಿಗೆ ನೀಡಬೇಕಿತ್ತು)ಗಳನ್ನು ನೋಟ್ ಬುಕ್ ಮೇಲೆ ಅಂಟಿಸಿ ಸಂತಸಪಡುತ್ತಿದ್ದೆವು. ಶಿಕ್ಷಕರ ಕುರಿತು ಮನೆಯಲ್ಲಿ ಅಪ್ಪ ಅಮ್ಮನಿಂದ ಬರೆಯಿಸಿಕೊಂಡು ಬಂದ ಪುಟ್ಟ ಭಾಷಣ ಮಾಡಿ ಸಂತಸಪಡುತ್ತಿದ್ದೆವು- ಇದು ಪ್ರಾಥಮಿಕ ಶಾಲೆಯಲ್ಲಿನ ಸಂಭ್ರಮ.

ಮುಂದೆ ಮಾಧ್ಯಮಿಕ ಶಾಲೆಗೆ ಬಂದಾಗ, ಶಿಕ್ಷಕ ದಿನಾಚರಣೆಗೆ ಚಿಕ್ಕವರಿದ್ದಾಗ ಕೊಡುತ್ತಿದ್ದ ಗೌರವ ಕೊಂಚ ಕಡಿಮೆಯಾಗಿತ್ತು. ಯಾಕೆಂದರೆ, ಪ್ರಾಥಮಿಕ ಶಾಲೆಯಲ್ಲಿ ಯಾವ ಶಿಕ್ಷಕರು ನಮ್ಮ "ಹೀರೋ"ಗಳಾಗಿ ಕಂಗೊಳಿಸುತ್ತಿದ್ದರೋ, ಅವರು ಈಗ ಕೊಂಚ ದುರ್ಬಲರಾಗಿ ಗೋಚರಿಸತೊಡಗಿದ್ದರು. ಹಾಗಂತ ಅವರಿಗೆ ಗೌರವ ಕೊಡುತ್ತಿರಲಿಲ್ಲವೆಂತಲ್ಲ. ಗೌರವದಲ್ಲಿ ಸ್ವಲ್ಪ ವ್ಯತ್ಯಾಸವಾಗಿರುತ್ತದೆ ಅಷ್ಟೆ.

ಇನ್ನು ಕಾಲೇಜ್ ಮೆಟ್ಟಿಲು ಹತ್ತಿದಾಗಲಂತೂ ಶಿಕ್ಷಕರು (ಪ್ರಾಧ್ಯಾಪಕ) ಅವರೇನು ಮಹಾ ಎಂಬ ಉಡಾಫೆ ಮನೋಭಾವ ಬೆಳೆದಿರುತ್ತದೆ. ಇಂಥ ಮನೋಭಾವ ಎಲ್ಲರಲ್ಲಿಯೂ ಇರುತ್ತದೆ ಎಂದು ಹೇಳುತ್ತಿಲ್ಲ. ಬಹುಶಃ ನೂರು ಕಾಲೇಜ್ ಹುಡುಗರಲ್ಲಿ ಸುಮಾರು 80ರಷ್ಟು ಹುಡುಗರು ಇದೇ ಮನೋಭಾವ ಹೊಂದಿರಬಹುದೇನೋ. ಹೀಗಿರುವಾಗ ಶಿಕ್ಷಕ ದಿನಾಚರಣೆಯ ಮಹತ್ವ ಹೇಗೆ ಗೊತ್ತಾಗಬೇಕು? ಇಂದು ಇಂದಿನ ಶಿಕ್ಷಣ ವ್ಯವಸ್ಥೆ, ಮಕ್ಕಳ ಮನೋಭಾವ, ಶಿಕ್ಷಣದ ವಾಣಿಜ್ಯೀಕರಣ... ಇತ್ಯಾದಿಗಳ ಪ್ರಭಾವ.

****

ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ

ಎಂದು ಪುರಂದರದಾಸರು ಗುರುವಿನ ಮಹಿಮೆಯನ್ನು ಸಾರಿದ್ದಾರೆ. ಆದರೆ, ನಿಜಕ್ಕೂ ಈಗ "ಮುಕ್ತಿ" ತೋರುವ ಸ್ಥಾನದಲ್ಲಿ "ಗುರು" ಇದ್ದಾನೆಯೇ..? ಅಂತೆಯೇ ವಿದ್ಯಾರ್ಥಿ ಕೂಡಾ "ಮುಕ್ತಿ"ಗಾಗಿ "ಗುಲಾಮ"ನಾಗುವ ಮನೋಭಾವನೆ ಬೆಳೆಸಿಕೊಂಡಿದ್ದಾನೆಯೇ ಎಂಬೆರಡು ಪ್ರಶ್ನೆಗಳನ್ನು ಈಗಿನ ಸಂದರ್ಭದಲ್ಲಿ ಹೆಚ್ಚಾಗಿ ವಿಮರ್ಶೆಗೊಳಪಡಿಸಬೇಕಿದೆ.

ಪ್ರಾಚೀನ ಕಾಲದಲ್ಲಿ ಗುರು ತನ್ನ ಶಿಷ್ಯನನ್ನು 25 ವರ್ಷಗಳವರೆಗೂ ಸಲಹಿ, ತನ್ನ ವಿದ್ಯೆಯನ್ನೆಲ್ಲ ಧಾರೆ ಎರೆದು ಸಮಾಜದಲ್ಲೂ ಒಳ್ಳೆಯ ಪ್ರಜೆಯಾಗಿ ಬಾಳಲು ಮಾರ್ಗದರ್ಶನ ಮಾಡುತ್ತಿದ್ದ. ಶಿಷ್ಯನೂ ಅಷ್ಟೆ, ಗುರು ತೋರಿದ ದಾರಿಯಲ್ಲಿ ನಡೆದು ಜೀವನ ಸಾರ್ಥಕ ಮಾಡಿಕೊಳ್ಳುತ್ತಿದ್ದ. ಅದಕ್ಕಾಗಿಯೇ..

ಗುರುಬ್ರಹ್ಮ ಗುರುರ್ವಿಷ್ಣು
ಗುರುಃದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಃ ಬ್ರಹ್ಮ
ತಸ್ಮೈಶ್ರೀ ಗುರವೇ ನಮಃ....


ಎಂಬ ನಾಮಸ್ಮರಣೆಯನ್ನು ಅವರು ಅಕ್ಷರಶಃ ಅನುಸರಿಸುತ್ತಿದ್ದರು. ಈಗ ಹಾಡಿಹೊಗಳುವ ಶಿಷ್ಯರೂ ಇಲ್ಲ, ಆ ಮಟ್ಟದ ಗುರುಗಳೂ ಇಲ್ಲವೆನ್ನಬೇಕಾಗಿರುವುದು ಖೇದನೀಯ ವಿಷಯ. ಇದಕ್ಕೆ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ಕೆಲವು ಸುದ್ದಿಗಳೂ ಕಾರಣ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ವೇಶ್ಯಾವಾಟಿಕೆಗೆ ಒತ್ತಡಪಡಿಸಿದ ಇತ್ತೀಚಿನ ದೆಹಲಿ ಘಟನೆ ನಮ್ಮ ಕಣ್ಣ ಮುಂದೆ ಹಸಿರಾಗಿದೆ.

***

ಶಿಕ್ಷಕನಿಗೂ ವಿದ್ಯಾರ್ಥಿಗೂ ಅವಿನಾಭಾವ ಸಂಬಂಧವಿದೆ. ಮಗು ಮೊದಲು ಶಾಲೆಗೆ ಹೋದಾಗ ಶಿಕ್ಷಕ ಹೇಳಿದ್ದನೆಲ್ಲ ನಂಬುತ್ತದೆ. ಮಗುವಿನ ಜಗತ್ತಿನಲ್ಲಿ ಶಿಕ್ಷಕನೇ "ರೋಲ್ ಮಾಡೆಲ್", ಅವರೇ "ಸೂಪರ್ ಮ್ಯಾನ್". ತನ್ನ ಗುರುಗಳಿಗೆ ತಿಳಿಯದ ವಿಷಯವೇ ಇಲ್ಲ ಎಂದು ಭಾವಿಸಿಕೊಳ್ಳುತ್ತದೆ. ಇಂಥ ಕಾಲದಲ್ಲಂತೂ ಶಿಕ್ಷಕನ ಜವಾಬ್ದಾರಿ ನಿಜವಾಗಿಯೂ ಮಹತ್ವದ್ದಾಗಿರುತ್ತದೆ. ಎಲ್ಲ ವಿಷಯಗಳಲ್ಲೂ ಸಮಾನತೆ ಕಾಯ್ದುಕೊಂಡು ಆರೋಗ್ಯಪೂರ್ಣ ಸಮಾಜಕ್ಕಾಗಿ ಆರೋಗ್ಯ ಪೂರ್ಣ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಗುರುವಿನದು. ಈ ಹಂತದಲ್ಲಿ ನೀಡಿದ ಶಿಕ್ಷಣವೇ ಮಗುವನ್ನು ಜವಾಬ್ದಾರಿಯುತ ಪ್ರಜೆಯಾಗಿ ಬೆಳೆಸುತ್ತದೆ. ಇಂಥ ಪಕ್ವ ಕಾಲದಲ್ಲಿ ಈಗಿನ ಶಿಕ್ಷಕರು ನಿಜವಾಗಿ ತಮ್ಮ ಜವಾಬ್ದಾರಿಗೆ ನ್ಯಾಯ ಸಲ್ಲಿಸುತ್ತಿದ್ದಾರೆಯೇ..?

ಡಾ.ರಾಧಾಕೃಷ್ಣನ್‌ರಂಥ ಮಹಾನ್ ವಿದ್ವಾಂಸರು ಶಿಕ್ಷಕ ಸ್ಥಾನಕ್ಕೆ ಉನ್ನತವಾದ ಗೌರವ ತಂದುಕೊಟ್ಟಿದ್ದಾರೆ. ಅಂತಹುದೇ ಹಾದಿಯನ್ನು ಅನೇಕ ಶಿಕ್ಷಕರು, ಪ್ರಾಧ್ಯಾಪಕ ಮಹನೀಯರು ಸವೆಸಿದ್ದಾರೆ. ಆದರೆ ಇದೆಲ್ಲವೂ "ಮಾಜಿ" ಕಾಲದ್ದು. ಆದರೆ, ಈಗ ಶಿಕ್ಷಕ ಕೇವಲ ಶಿಕ್ಷಕನಾಗಿ ಉಳಿದಿಲ್ಲ, ರಾಜಕಾರಣ, ವ್ಯಾಪಾರ ಮತ್ತು ಜಾತಿವಾದವು ಶಿಕ್ಷಕನ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ. ಹೀಗಿರುವಾಗ ಮಾನಸಿಕವಾಗಿ ಸದೃಢವಾದ ಆರೋಗ್ಯಪೂರ್ಣ ಪ್ರಜೆಗಳು ಸಮಾಜದೊಳಕ್ಕಿಳಿಯಲು ಹೇಗೆ ಸಾಧ್ಯ? ಅಂತೆಯೇ ಶಿಕ್ಷಕ ದಿನಾಚರಣೆಯ ಮಹತ್ವ ಮಕ್ಕಳಲ್ಲಿ ಮೂಡುವುದಾದರೂ ಹೇಗೆ ಅಲ್ಲವೇ..? ಈ ವಿಷಯದ ಬಗ್ಗೆ ಗಂಭೀರ ಚಿಂತನೆಯಾಗಬೇಕಿದೆ.

****

ಎಲ್ಲ ಶಿಕ್ಷಕರೂ ತಮ್ಮ ಜವಾಬ್ದಾರಿಯಿಂದ ವಿಮುಖಗೊಂಡಿದ್ದಾರೆಂದು ಹೇಳುವುದು ನನ್ನ ಉದ್ದೇಶವಲ್ಲ. ಹಾಗೆಯೇ ವಿದ್ಯಾರ್ಥಿಗಳೆಲ್ಲರೂ ಪ್ರಾಮಾಣಿಕರು ಎನ್ನುವುದೂ ಅಲ್ಲ. ಈಗಲೂ ಬೆರಳೆಣಿಕೆಯಷ್ಟು ಶಿಕ್ಷಕರು ತಮ್ಮ ಸ್ಥಾನಕ್ಕೆ ನಿಜವಾದ ಮಹತ್ವ ತಂದುಕೊಟ್ಟಿದ್ದಾರೆ. ಯಾವುದೇ ಮೂಲಸೌಕರ್ಯಗಳಿಲ್ಲದ ಊರಲ್ಲಿ ಮಕ್ಕಳನ್ನು ಮೇಲಕ್ಕೆ ತರಲು ಟೊಂಕ ಕಟ್ಟಿ ಹರಸಾಹಸ ಪ್ರದರ್ಶಿಸುವ ಶಿಕ್ಷಕರೆಷ್ಟಿಲ್ಲ? ಇನ್ನೂ ಕೆಲವರಂತೂ ಎಲ್ಲ ಮಕ್ಕಳನ್ನು ತಮ್ಮ ಮಕ್ಕಳೆಂದು ಭಾವಿಸಿ, ಅವರ ಭವಿತವ್ಯಕ್ಕಾಗಿ ಟೊಂಕ ಕಟ್ಟಿ ನಿಂತಿರುತ್ತಾರೆ. ಇಂಥವರು ಬೆಳಕಿಗೆ ಬರುತ್ತಿಲ್ಲ ಎಂಬುದು ಶಿಕ್ಷಕ ಸಮುದಾಯದ ದುರದೃಷ್ಟ.

ಮಕ್ಕಳ ಭವಿಷ್ಯಕ್ಕೆ ತಮ್ಮ ಜೀವನದ ಮುಕ್ಕಾಲು ಭಾಗವನ್ನು ಮುಡಿಪಾಗಿಡುವ ಶಿಕ್ಷಕರಿಗೆ, ಬದುಕಿನಲ್ಲಿ ಸರಿಯಾದ ದಿಕ್ಕಿನಲ್ಲಿ ಮುನ್ನುಗ್ಗಲು ಮಾರ್ಗದರ್ಶನ ಮಾಡುವ ಮಾರ್ಗದರ್ಶಕರಿಗೆ, ಗೌರವ ನೀಡಲು ನಮಗೆ ಶಿಕ್ಷಕರ ದಿನವೇ ಬೇಕೆಂದಿಲ್ಲ. ನಮ್ಮ ಭವಿಷ್ಯ ರೂಪಿಸುವ, ನಮ್ಮನ್ನು ಸತ್ಪಥದಲ್ಲಿ ಮುನ್ನಡೆಯುವಂತೆ ಮಾರ್ಗ ತೋರುವ ಗುರುವಿನ ಸ್ಮರಣೆ ಸದಾಕಾಲ ಇರಲಿ. ಶಿಕ್ಷಕರ ದಿನವು ಇತರ ದಿನಾಚರಣೆಗಳಂತೆ ಕಾಟಾಚಾರಕ್ಕೀಡಾಗದಿರಲಿ.

(ಸೂಚನೆ: ಈ ಲೇಖನ ವೆಬ್ ದುನಿಯಾ ಕನ್ನಡ ಪೋರ್ಟಲ್‌ನಲ್ಲಿ ಪ್ರಕಟಗೊಂಡಿದೆ. ಅದನ್ನು ನೋಡಲು ಇಲ್ಲ ಕ್ಲಿಕ್ಕಿಸಿ http://kannada.webdunia.com/miscellaneous/literature/stories/0709/05/1070905002_1.htm)

ಶನಿವಾರ, ಆಗಸ್ಟ್ 11, 2007

ಅವ್ವ ಮತ್ತು ಹೊಲ

ಎಂದಿನಂತೆ ಸೂರ್ಯನ ಕಿರಣಗಳ ಕಿಟಕಿಯೊಳಗಿಂದ ನನ್ನ ಮೇಲೆ ಬಿದ್ದಿರಲಿಲ್ಲ. ಆಗಲೇ ನನ್ನ ಮೊಬೈಲ್ ರಿಂಗುಣಿಸಿದ್ದು.ನಿದ್ದೆಯೇ ಮಂಪರಿನಲ್ಲಿ ಹಲೋ ಎಂದೆ. ಅತ್ತ ಕಡೆಯಿಂದ ಮಾತಾಡಿದ್ದು ನನ್ನ ಸಹೋದರ ಮಾವ. ಆತನ ದನಿ ನಡಗುತ್ತಿತ್ತು.ಹೇಗೊ ಸಾವರಿಸಿಕೊಂಡು ವಿಷಯ ಹೇಳಿದಾ. ಆಗ ನನಗೆ ನಿಂತ ನೆಲ ನಡುಗಿದ ಅನುಭವ. ಆಗಲೇ ಕಿಟಕಿಯೊಳಗಿನಿಂದ ಸೂರ್ಯ ರಶ್ಮಿಯೊಂದು ನನ್ನ ಗಲ್ಲದ ಮೇಲೆ ಬಿತ್ತು. ಅದು ಎಂದಿನಂತೆ ಹಿತವಾಗಿರಲಿಲ್ಲ; ಬೆಂಕಿಯಂತೆ ಸುಡುತ್ತಿತ್ತು. ಅದನ್ನು ತಂಪಾಗಿಸಲು ಏನೊ ಎಂಬಂತೆ ನನ್ನ ಕಣ್ಣೀರಧಾರೆ ಚಿಮ್ಮಿತು.

ಹಾಗೇ ನಿಂತಕೊಂಡದ್ದನ್ನು ನೋಡಿದ ಗೆಳೆಯ ವಿನೋದ, "ಏನ್ ಪೋನು" ಅಂತಾ ಗಾಬರಿಯಿಂದ ಕೇಳಿದ. ಆದರೆ, ನನಗೆ ಹೇಳುವುದಕ್ಕೆ ಬಾಯಿಯಾದರೂ ಎಲ್ಲಿತ್ತು. ಅಳುವೊಂದು ಒಂದೇ ನನ್ನ ಬಾಯಿಗೆ ಗೊತ್ತಾಗಿದ್ದು ಆಗ. ಏನೂ ತಿಳಿಯದೆ ಆತ ಆಶ್ಚರ್ಯಗಣ್ಣುಗಳಿಂದ ನನ್ನ ದಿಟ್ಟಿಸುತ್ತಾ ನೋಡುತ್ತಿದ್ದ; ನಾನು ಅವನ ಹೆಗಲ ಮೇಲೆ ಮುಖವೊಡ್ಡಿ ಮನಸ್ಸು ಹಗುರವಾಗೊವರೆಗೆ ಅತ್ತೆ.
****
ಚೆನ್ನೈನಿಂದ ಬೆಳಗಾವಿಯ ನನ್ನ ಹಳ್ಳಿಗೆ ಹೋಗಬೇಕಾದ್ರೆ ಕನಿಷ್ಟ 21 ರಿಂದ 23 ಗಂಟೆಯಾದ್ರೂ ಬೇಕು. ಮಧ್ಯಾಹ್ನದ ಚೆನ್ನೈನಿಂದ ಬೆಂಗಳೂರಿಗೆ ಹೊರಡುವ ಟ್ರೈನ್‌ಗೆ ಬಿಟ್ಟು ಬರಲು ವಿನೋದ ಬಂದಿದ್ದ. ಟ್ರೈನ್ ತನ್ನ ನಿಗದಿತ ಸಮಯಕ್ಕೆ ನಿರ್ಭಾವಕತೆಯಿಂದ ಹೊರಟಿತು. ಹೊರಗೆ ಭಾವಕನಾದ ವಿನೋದ ಕಣ್ಣೀರು ತುಂಬಿಕೊಂಡಿದ್ದ; ನನ್ನ ಎದೆಯೊಳಗೆ ಕಣ್ಣೀರಿನ ಜಲಪಾತವೇ ಬೀಳುತ್ತಿತ್ತು.

ಚೆನ್ನೈ ದಾಟಿ ಟ್ರೈನ್ ಅದೇ ನಿರ್ಭಾವುಕ ಶಬ್ಧ ಮಾಡುತ್ತ ಮತ್ತು ಅಷ್ಟೆ ವೇಗವಾಗಿ ಓಡುತ್ತಿತ್ತು. ಎಲ್ಲರೂ ಹೀಗೆ ಓಡಬೇಕು ಎಂದು ಅಣುಕಿಸುತ್ತವಂತೆ ಭಾಸವಾಯಿತು ನನಗೆ.
****
ಕಿಟಕಿಗೆ ತಲೆ ಹಚ್ಚಿ ಕಣ್ಣುಚ್ಚುದ್ದಂತೆ ನನ್ನ ಅವ್ವನ ಮುಖ, ಅವಳು ಆ ಹೊಲ ಬಿಡಿಸಿಕೊಳ್ಳುವುದಕ್ಕಾಗಿ ಪಟ್ಟ ಪಾಡು ಎಲ್ಲ ಸುಯ್ಯಂತ ಸುಳಿಯಿತು.

ನಾನು ಪ್ರತಿ ಸಾರಿ ಊರಿಗೆ ಹೋದಾಗ ಅವ್ವನದು ಒಂದೆ ಮಾತು. " ತಮ್ಮಾ ಆ ತುಣಕ್ ಹೊಲ ಬಿಡ್‌ಸ್ಕೊಳ್ಳುನಪಾ. ಆ ಹೊಲದಿಂದ ನಾಲ್ಕ್ ಕಾಳು ಜೋಳ ಬಂದ್ರ್ ಎಷ್ಟೊ ಸಹಾಯ ಆದಂಗ್ ಆಗತೈತಿ. ನೀ ತಿಂಗ್ಳಾ ಎರಡು ಸಾವಿರು ಕಳಿಸಿದ್ರ್ ಸಾಕ್. ನಾ ಹೆಂಗರ್ ಮನಿ ನಡೆಸ್ಕೊಂಡ್ ಹೋಗ್ತೇನಿ. ನಿಮ್ಮ ಅಪ್ಪ್ ಅಂತ್ರೂ ದುಡಿಯಂವಾ ಅಲ್ಲಾ, ದುಃಖ ಪಡಂವಾ ಅಲ್ಲಾ. ನಾ ಹೀಂಗ್ ಎಷ್ಟಾ ದಿನಾ ದುಡೀಲಿ" ಅನ್ನಾಕೆ.

"ಅಲ್ಲವೋ ಆ ಹೊಲಕ್ ಯಾಕ್ ಅಷ್ಟು ಚಿಂತಿ ಮಾಡ್ತಿಯವ್ವಾ. ಇರೋದು ಒಂದೂವರೆ ಎಕ್ರೆನೂ ಇಲ್ಲಾ. ಆ ಹೊಲದಿಂದ ಎಷ್ಟು ಜೋಳಾ ಪಡದೀ ನೀ" ಅನ್ನುತ್ತಿದ್ದಾಂಗ, ಅವ್ವ ಕೊಂಚ ಬೇಸರ ಮಾಡ್ಕೊಂಡು, "ಹಂಗ್ ಅನ್ನಬೇಡೊ ತಮ್ಮಾ, ಅದು ಎಷ್ಟು ಆದ್ರೂ ಹಿರೇರು ಮಾಡಿಟ್ಟ ಆಸ್ತಿ. ಅಂಗೈಷ್ಟಿದ್ದರೂ ಹೊಲಾ ಹೊಲನಾಪಾ" ಅನ್ನುತ್ತ ಕಣ್ಣಂಚಿನೊಳಗ ನೀರು ತರುತ್ತಿದ್ದಳು.

ಆಮೇಲೆ ನಾನು ಊರಿಗೆ ಹೋದಾಗೊಮ್ಮೆ ಮುಂದಿನ ಸಾರಿ ಬಂದಾಗ ಹೊಲ ಬೀಡ್ಸ್ಕೊಂಡ ಬರೋಣ ಅಂತಾ ಹೇಳ್ತಿದ್ದೆ.

ಅಷ್ಟಕ್ಕೆ ಅವ್ವ ತುಂಬಾ ಸಂತೋಷ ಪಡೋಳು. ನನ್ನ ಅವ್ವನ ಆ ನಗುವನ್ನು ಹಾಗೇ ನಿರಂತರವಾಗಿರಸುವುದಕ್ಕಾಗಿ ನಾನು ನನ್ನ ಶಕ್ತಿಮೀರಿ ಉಳಿಸಿದ ಹಣ ಬ್ಯಾಂಕ್ ಅಕೌಂಟಿನಲ್ಲಿ 30000 ರೂಪಾಯಿ ತೋರಿಸಿತ್ತಿತ್ತು.

ಆ ಹೊಲನಾ ನಮ್ಮ ತಂಗಿ ಮದುವೆಗೆ ಅಂತಾ ನಮ್ಮ ಕಾಕಾ ತನ್ನ ಕಾಕಾನಿಗೆ ಹತ್ತು ಸಾವಿರು ರೂಪಾಯಿಗೆ ಉಣ್ಣಾಕ್ ಹಾಕಿದ್ದ. ಐದಾರು ವರ್ಷದಲ್ಲಿ ಬಡ್ಡಿ, ಚಕ್ರ ಬಡ್ಡಿ ಸೇರಿ ಮೊವ್ವತ್ತು ಸಾವಿರು ಆಗಿತ್ತು. ದಿನಾಲೂ ಕುಡಿಯೊ ನಮ್ಮ ಅಪ್ಪನಿಗೆ ಅಷ್ಟು ಹಣಕೊಟ್ಟು ಹೊಲ ತನ್ನದಾಗಿಸಿಕೊಳ್ಳೊ ವಿಚಾರಾದ್ರೂ ಹೆಂಗ್ ಬಂದಿತ್ತು.

ನಮ್ಮ ಅಪ್ಪ ಶುದ್ಧ ಕುಡಕ. ಅವನು ತಾನು ದುಡಿದಿದ್ದನ್ನು ಕುಡಿದು ಹಾಳು ಮಾಡೋದು ಅಲ್ಲದೆ ಅವ್ವನ ಕೂಲಿಯ ಹಣವನ್ನು ಕೂಡಾ ಕುಡಿದು ಹಾಳು ಮಾಡುತ್ತಿದ್ದ. ಆಗ ಅವ್ವ ಒಲೆ ಮುಂದೆ ಕುಳಿತು ಕಣ್ಣೀರು ಹಾಕುದನ್ನು ನಾ ಎಷ್ಟೊ ಬಾರಿ ನೋಡಿದ್ದೇನೆ.

ನಾನು ದುಡಿಯೋಕೆ ಶುರು ಮಾಡಿದ ಮೇಲೆ ಅವ್ವನ ಕಣ್ಣಲ್ಲಿ ಒಮ್ಮೆಯೂ ಒಂದು ಹನಿ ನೀರು ಬರಬಾರ್ದು ಹಾಗೇ ನೋಡ್ಕಬೇಕು ಅಂತಾ ಅನ್ನೊಂಡಿದ್ದು ನೆನಪಾದಗ ನನ್ನ ಕಣ್ಣೀರು ಕಪಾಳ ಮೇಲೆ ಜಿನಗುತ್ತಿತ್ತು.

ನಾನು ಕೆಲಸಕ್ಕೆ ಸೇರಿಕೊಂಡ ವಿಷಯ ತಿಳಿದ ತಕ್ಷಣವೇ ಅವ್ವ ನನಗೆ ಹೇಳಿದ್ದು."ತಮ್ಮಾ ಲಗೂನ್ ಹೊಲ ಬಿಡ್ಸಕೊಳ್ಳನಾಪಾ ಅಂತ್.." ಹೀಗೆ ನೆನಪಿನ ಸುರಳಿ ಬಿಚ್ಚುತ್ತಾ ಹೋಗುತ್ತಿದ್ದಂತೆ ಟ್ರೈನ್ ಒಮ್ಮೆ ಗಕ್ಕನೆ ನಿಂತಿತು;ನೆನಪಿನ ಸುರಳಿ ಕೂಡಾ ಕತ್ತರಿಸಿತು. ಆದರೆ ಕಣ್ಣೀರು ಮಾತ್ರ ಹಾಗೇ ಜಿನಗುತ್ತಿತ್ತು. ಹೊರಗೆ ನೋಡಿದ್ರೆ ಬೆಂಗಳೂರು ಎಂಬ ಬೋರ್ಡ್.
****
ಟ್ರೈನ್ ಇಳಿದು ಬೆಳಗಾವಿಗೆ ಹೋಗೊ ಬಸ್ ಹತ್ತಿದೆ. ಆಗಲೂ ನನ್ನ ಕಣ್ ಮುಂದೆ ಬರುವ ಚಿತ್ರಗಳ ನನ್ನ ಅವ್ವ ಮತ್ತು ಆ ಹೊಲ. ಆಗಲೇ ಹೊರಗೆ ಸಣ್ಣಗೆ ಕತ್ತಲು ಆವರಿಸುತಿತ್ತು. ಬೆಂಗಳೂರು ದಾಟಿ ಬಸ್ಸು ತುಮಕೂರನ್ನು ಮುಂದೆ ಮಾಡಿಕೊಂಡು ಒಂದೆ ಸವನೇ ನುಣಪಾದ ರಸ್ತೆ ಮೇಲೆ ಏದಿರುಸಿರು ಬೀಡದಂತೆ ಓಡುತ್ತಿತ್ತು. ನಾನು ಕಣ್ಣೀರ ನಡುವೆಯೂ ನಿದ್ದೆಗೆ ಪ್ರಯತ್ನಿಸಿದೆ. ಆದ್ರೆ ನಿದ್ದೆ ಬರಲಿಲ್ಲ.

ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಸ್ ನಿಂತಾಗ ಸೂರ್ಯ ತನ್ನ ಮುಖ ಜಗತ್ತಿಗೆ ತೋರಿಸುತ್ತಿದ್ದ. ಅದೇ ಸಮಯಕ್ಕೆ ನನ್ನ ಊರು ತಲಪಲು ಟ್ರೈನ್‌ ಇತ್ತು. ನಾನು ರೈಲು ನಿಲ್ದಾಣದತ್ತ ಧಾವಿಸಿದೆ. ಟ್ರೈನ್ ಹತ್ತಿ ಕುಳಿತುಕೊಂಡಾಗಲೇ, ಮತ್ತ ಅದೆ ಅವ್ವನ ಕುಂಕಮವಿಟ್ಟ ತೇಜೊವರ್ಣ ಮುಖ ಮತ್ತು ಕಪ್ಪು ಮಣ್ಣಿನ ಆ ಹೊಲ.

ರೈಲು ಇಳಿದು ಮನೆ ಹಾದಿ ಹಿಡಿದೆ. ಎದುರಾದವರು ನನ್ನ ಅವ್ವನ ಗುಣಗಾನ ಮಾಡಿ ಮುಂದೆ ಹೋಗುತ್ತಿದ್ದರು. ಆಗ ದುಃಖ ಉಮ್ಮಳಿಸುತ್ತಿತ್ತು. ಸರಕಾರಿ ಧನಸಹಾಯದಲ್ಲಿ ಕಟ್ಟಿಸಿದ್ದ ಆ ನನ್ನ ಮನೆಯ ಮುಂದೆ ಕುಂಕಮ ಹೊತ್ತ ಅವ್ವನ ಮುಖ ನಿರ್ವಣವಾಗಿದ್ದನ್ನು ನೋಡಿದಾಗಲೇ ಅಲ್ಲಿವರೆಗೂ ಮಡಗಟ್ಟಿದ್ದ ನನ್ನ ದುಃಖದ ಕಣ್ಣೀರು ಅಣೆಕಟ್ಟು ಒಡೆದು ಭೋರ್ಗರೆಯಿತು.
***
ಅವ್ವನ ಎಲ್ಲ ಅಂತಿಮ ಕ್ರಿಯೆಗಳನ್ನು ಮುಗಿಸಿ ಮರಳಿ ಚೆನ್ನೈಗೆ ಬರಲು ಬಸ್ ಹತ್ತಿ ಹೊರಟೆ. ಸ್ವಲ್ಪ ಊರು ದಾಟಿದ ನಂತರ ಎದುರಾದ ಕಪ್ಪು ಹೊಲದಲ್ಲಿ ಅವ್ವ ಜೋಳದ ರಾಶಿ ಮಾಡಿದಂತೆ ಅಣಕಿಸಿದಂತಾಯಿತು.

ಸೋಮವಾರ, ಆಗಸ್ಟ್ 6, 2007

ಚೆನ್ನೈನಲ್ಲಿ ಸಖತ್ "ಮುಂಗಾರು ಮಳೆ": ಕನ್ನಡಿಗರಿಗೆ ಪುಳಕ


ಚೆನ್ನೈನಲ್ಲಿ ಇನ್ನೂ ಮುಂಗಾರು ಪ್ರಾರಂಭವಾಗಿಲ್ಲ. ಆದರೆ ಯೋಗರಾಜ್ ಭಟ್ಟರ "ಮುಂಗಾರು ಮಳೆ" ಭರ್ಜರಿಯಾಗಿ ಸುರಿಯುತ್ತಿದೆ.. ಹಾಗೇ ಸುಮ್ಮನೆ..!

ಅರೆ ಏನು ಇದು.. ಅಂತಾ ಕೇಳ್ತಿದ್ದೀರಾ. ಅಂಥದ್ದೇನೂ ಇಲ್ಲ ಮಾರಾಯ್ರೆ. ಅದೇ ಕನ್ನಡದ ಸೂಪರ್ ಡೂಪರ್ ಹಿಟ್ "ಮುಂಗಾರು ಮಳೆ" ಚಿತ್ರ ಚೆನ್ನೈನಲ್ಲಿ ಬಿಡುಗಡೆಯಾಗಿ ಸಖತ್ ಮೋಡಿ ಮಾಡಿದೆ ಇಲ್ಲಿಯ ಚೆನ್ನೈ ಕನ್ನಡಿಗರಿಗೆ...!

ನಿನ್ನೆ ಭಾನುವಾರ ಇಡೀ ನಮ್ಮ ಆಫೀಸೇ "ಮುಂಗಾರು ಮಳೆ" ಪ್ರದರ್ಶಿಸುತ್ತಿರುವ ಕ್ಯಾಸಿನೊ ಚಿತ್ರಮಂದಿರ ಬಳಿಯಿತ್ತು. ಅದೇನೂ ಮಹಾ ವಿಶೇಷ ಅನ್ನಬೇಡಿ. ನಮ್ಮ ಆಫೀಸ್ ಅಂದ್ರೆ "ಮಿನಿ ಸೌತ್ ಇಂಡಿಯಾ" ಇದ್ದ ಹಾಗೆ. ಇಲ್ಲಿ ಕನ್ನಡಿಗರು, ಮಲಿಯಾಳಿಗಳು, ಆಂಧ್ರದವರು ಮತ್ತು ತಮಿಳರು ಬಹಳ ಅನ್ಯೂನ್ಯದಿಂದ ಕೆಲಸ ಮಾಡುತ್ತಾರೆ. ಯಾಕೆಂದರೆ ನಮ್ಮದು ಹೇಳಿ ಕೇಳಿ ಸಾಫ್ಟವೇರ್ ಲೋಕಲಾಯಿಜಿಶನ್ ಮತ್ತು ಮೀಡಿಯಾ ಮೂಲದ ಎಂಎನ್‌ಸಿ ಕಂಪೆನಿ. ಹೀಗಾಗಿ ನಮ್ಮ ಆಫೀಸ್ ಅಂದ್ರೆ "ಮಿನಿ ಸೌತ್ ಇಂಡಿಯಾ"

ಈಗ ಅರ್ಥ ಆಗಿರಬೇಕಲ್ಲ ಇಡೀ ನಮ್ಮ ಆಫೀಸ್ ತಂಡವೇ ಕ್ಯಾಸಿನೋ ಬಳಿ ಇತ್ತು ಅಂತ ಯಾಕೆ ಹೇಳ್ದೆ ಅಂತ. ಸರಿ ಮತ್ತೆ ಮುಂಗಾರಿ..ಗೆ ಬರೋಣ.

ನಮ್ಮ ಕನ್ನಡ ತಂಡದಲ್ಲಿ ಸಾರಥಿ ಅಂತ ಅಪ್ಪಟ ಕನ್ನಡ ಪ್ರೇಮಿಗಳು ಇದ್ದಾರೆ. ಭಾನುವಾರ ಸುಮಾರು ನಮ್ಮ ಆಫೀಸ್‌ನ 30 ಜನರನ್ನು "ಮಳೆ"ಯಲ್ಲಿ ತೋಯಿಸಿದ ಮಹಾನಭಾವರು. ಕನ್ನಡ ತಂಡದೊಂದಿಗೆ ಉಳಿದ ಭಾಷೆಗಳ ಸಹದ್ಯೋಗಿಗಳಿಗೆ ಅಪ್ಪಟ ಕನ್ನಡ ದೇಶೀಯ ಚಿತ್ರವನ್ನು ತೋರಿಸಿದ ಸಾರಥಿ ಅವರಿಗ ನೂರು ಸಲಾಂ.

ಬಹುಶಃ ಕ್ಯಾಸಿನೋ ಚಿತ್ರ ಮಂದಿರದವರು ಕೂಡಾ ಇಷ್ಟೊಂದು ಜನರು ಕನ್ನಡ ಚಿತ್ರ ನೋಡಲು ಬರುತ್ತಾರೆಂದು ನಿರೀಕ್ಷಿಸಿರಲಿಕ್ಕಿಲ್ಲ. ಯಾಕಂದೆರ ಭಾನುವಾರದ ಮಧ್ಯಾಹ್ನ ಪ್ರದರ್ಶನದ ಟೀಕೆಟ್‌ಗಳು ಒಂದು ದಿನದ ಹಿಂದೆಯೇ ಪೂರ್ಣವಾಗಿ ಬುಕ್‌ ಆಗಿದ್ದವು.
****
ಸರಿ, ನಾವೆಲ್ಲರೂ "ಮುಂಗಾರ ಮಳೆ"ಯಲ್ಲಿ ತೋಯಿಸಿಕೊಳ್ಳಲು ಚಿತ್ರಮಂದಿರದೊಳಗೆ ಹೊದೇವು. ಅಲ್ಲಿಯದು ಬೇರೆಯೇ ಅನುಭವ. ಪಕ್ಕಾ ತಮಿಳು ಚಿತ್ರಗಳ ಮಧ್ಯೆ ಅಪ್ಪಟ ಕನ್ನಡ ಚಿತ್ರವನ್ನು ನೋಡುತ್ತಿರುವುದರಿಂದ ಏನೊ ಒಂಥರಾ... ಸಂತೋಷ, ಅನುಭವ ಉಂಟಾಗುತ್ತಿತ್ತು.

ಚಿತ್ರ ನೋಡ್ತಾ ನೋಡ್ತಾ.. ನಾನು ನನ್ನ ಸುತ್ತ ಕಣ್ ಹಾಯ್ಸಿದೆ. ಬಹುಶಃ ಅವರಿಬ್ಬರೂ ಪ್ರೇಮಿಗಳಿರಬೇಕು. ಆಕೆ ಕನ್ನಡತಿ, ಆತ ತಮಿಳು ಹುಡುಗ. ಇಷ್ಟು ಕರೆಕ್ಟ್ ಆಗಿ ಹೇಗೆ ಹೇಳುತ್ತಿದ್ದೇನೆ ಎಂದು ಹುಬ್ಬೇರಿಸಬೇಡಿ. ಯಾಕಂದರೆ ಆಕೆ ಮುಂಗಾರಿನ ಪಂಚಿಂಗ್ ಸಂಭಾಷಣೆಯನ್ನು ತಮಿಳನಲ್ಲಿ ಭಾಷಾಂತರಿಸಿ ಆತನಿಗೆ ಹೇಳುತ್ತಿದ್ದಳು. ಆಗ ಆತ ನಗುತ್ತಿದ್ದ...! ಇದನ್ನು ನೋಡಿ ನನಗೊ ಖುಷಿಯಾಯಿತು. ಯಾಕೆಂದರೆ ಕನ್ನಡದ ಚಿತ್ರವನ್ನು ಚೆನ್ನೈಗರು ಕೂಡಾ ಆಸ್ವಾದಿಸುತ್ತಿದ್ದಾರೆ ಅಂತ.

ಇನ್ನೂ ಚಿತ್ರದಲ್ಲಿ ತೋರಿಸಲಾದ ಜೋಗದ ಸೀನ್ ಇದೆಯಲ್ಲಾ... ಅದು ತುಂಬಾ ಮೋಡಿ ಮಾಡಿ ಬಿಟ್ಟಿದೆ ಇಲ್ಲಿನ ಜನಕ್ಕೆ. ತಮಿಳು ಸ್ಟಾರ್ ಡೈರಕ್ಟರ್ ಶಂಕರ್ ಕೂಡಾ ಇಂಥ ಜಲಪಾತವನ್ನು ತನ್ನ ಚಿತ್ರದಲ್ಲಿ ಈ ರೀತಿ ಸೆರೆ ಹಿಡಿಯಲು ಸಾಧ್ಯವಿಲ್ಲ ಎಂಬ ಮಾತು ಸಿನೆಮಾ ನೋಡಲು ಆಗಮಿಸಿದ್ದ ಚೆನ್ನೈನ ತಮಿಳರ ಮಧ್ಯೆ ಕೇಳಿ ಬರುತ್ತಿತ್ತು. ಅಷ್ಟೊಂದು ಅದ್ಭುತ.. ಅತ್ಯದ್ಭುತ ಜೋಗದ ಸಿರಿ.. ಮಾಡಿದೆ ಮೋಡಿ ಈ ಪರಿ.

ಬಾಲ್ಕನಿಯಲ್ಲಂತೂ ಕನ್ನಡಿಗರ ಉತ್ಸಾಹ ಹೇಳ ತೀರದು. "ಒಂದೆ ಒಂದು ಸಾರಿ ಕಣ್ಮಂದೆ ಬಾರೆ.., ಅನಿಸುತಿದೆ ಯಾಕೋ ಇಂದು.... ಹಾಡುಗಳಿಗೆ ಎಲ್ಲರೂ ಕೋರಸ್ ಹಾಡುತ್ತಿದ್ದರು. ಅದು ಎಂಧವರಿಗೂ ಅಭಿಮಾನವನ್ನುಂಟು ಮಾಡುವು ಸನ್ನಿವೇಶ ಆಗಿತ್ತು.
****
ಕನ್ನಡದ ಗೆಳೆಯರಲ್ಲ ತಮ್ಮ ತಮ್ಮ ತಮಿಳು ಗೆಳೆಯರನ್ನು ಚಿತ್ರಕ್ಕೆ ಆಹ್ವಾನಿಸಿ ತೋರಿಸುತ್ತಿದ್ದಾರೆ. ಆನಂದ ಪಡುತ್ತಿದ್ದಾರೆ. ಚೆನ್ನೈನ ಕೆಲವು ಪ್ರಮುಖ ಬೀದಿಗಳಲ್ಲಿ ಮುಂಗಾರು ಮಳೆ ಪೋಸ್ಟರ್ ಕಾಣಿಸಿಕೊಂಡಿವೆ. ಬಸ್‌ನಲ್ಲಿ, ಶೇರ್ ಆಟೊದಲ್ಲಿ ಹೋಗುವಾಗ ಆ ಪೋಸ್ಟರ್ ಕಣ್ಣಿಗೆ ಬಿದ್ದರೆ ಎದೆಯಲ್ಲಿ ಏನೊ ಹಾಗೇ ಸುಮ್ಮನೆ...!

"ಮುಂಗಾರು ಮಳೆ" ನೋಡಿಕೊಂಡು ಶೇರ್ ಆಟೊದಲ್ಲಿ ರೂಮ್ ದಾರಿ ಹಿಡಿದಾಗ, ಹೊರಗೆ ಸಣ್ಣಗೆ ತುಂತುರು ಮಳೆ.. ಆಗ ನನ್ನ ಗೆಳೆಯು ಗುಣಗುತ್ತಿದ್ದ ಹೀಗೆ, "ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ..."

ಶನಿವಾರ, ಜುಲೈ 28, 2007

ಒಂದೇ ಪ್ಯಾರಾದಲ್ಲಿ ಕಥೆ


ನಾನು, ಅವನು ಮತ್ತು ಅವಳು

ನಾನು, ಅವನು ಮತ್ತು ಅವಳು. ಅವಳಿಗೆ ಅವನ ಮೇಲೆ ಪ್ರೀತಿ; ಅವನಿಗೂ ಇನ್ನಾರೋ ಮೇಲೆ ಪ್ರೇಮ. ನನಗೆ ಅವಳ ಮೇಲೆ ಒಲವು. ಇದನ್ನು ತಿಳಿದ ಅವನು ನನ್ನೊಂದಗಿನ ಸ್ನೇಹ ಕಡಿದುಕೊಂಡ. ಅವಳ ಪ್ರೀತಿ ನನ್ನಡೆಗೆ ತಿರುಗಿದ್ದು ಬೇಸಿಗೆಯ ಬಿರು ಮಳೆಯಂತೆ ಮಾತ್ರ. ಆ ಮೇಲೆ ಅವಳು ಸ್ಥಿತ ಪ್ರಜ್ಞ. ನಾನು ಈಗ ಹುಚ್ಚಾಸ್ಪತ್ರೆಯಲ್ಲಿ.

ಸೋಮವಾರ, ಜೂನ್ 18, 2007

ಸ್ವಗತ

ಮನದ ಮೂಲೆಯಲ್ಲಿ
ಬಯಕೆಗಳು ಪವಡಿಸುತ್ತಿವೆ.
ಮರಳುಗಾಡಿನಂತಿರುವ ಮನದಲಿ
ಓಯಸಿಸ್‍ಗಳಾಗಲು,
ಒಮ್ಮೊಮ್ಮೆ ಎಚ್ಚೆತ್ತುಕೊಳ್ಳಲು ಹವಣಿಸುತ್ತಿವೆ.
ಪರಿಸ್ಥಿತಿಯ ಒತ್ತಡಕ್ಕೆ ಮಣಿಯುತ್ತಿವೆ.
ತನ್ನತನವನ್ನು ಉಳಿಸಲು ಆಶ್ರಯಿಸುತ್ತಿವೆ
ಇನ್ನೊಬ್ಬರನ್ನು, ಬೇಡವೆಂದಾಗ ಮತ್ತೊಬ್ಬರನ್ನು
ಬೇಡುತ್ತವೆ, ಮತ್ತೊಮ್ಮೆ ತಿರಸ್ಕರಿಸುತ್ತಿವೆ
ಸ್ವಂತಕ್ಕಾಗಿ, ಸ್ವಹಿತಕ್ಕಾಗಿ
ಆಗಲೂ ಈಗಲೂ ಬಯಕೆಗಳಾಗಿಯೇ
ಉಳಿಯುತ್ತಿವೆ, ಬೆಳೆಯುತ್ತಿವೆ.

-ಮಲ್ಲಿ

ಓ.. ಗುಲಾಬಿಯೇ

ಮುಂಜಾನೆಯ ಮಂಜಿನಲಿ
ಮಿಂದೆದ್ದ ಗುಲಾಬಿಯೇ
ಯಾರಿಗಾಗಿ ಕಾಯುತ್ತಿರುವೇ
ದಿನಕರನ ದಿನಾರಂಭಕ್ಕಾಗಿಯೇ..?

ಮೆಲ್ಲನೆ ಅರಳುತ್ತ
ತಂಪನೆಯ ಕಂಪು ಬೀರುತ್ತ
ನಗೆ ಚೆಲ್ಲುತ್ತಾ
ಯಾರಿಗಾಗಿ ಕಾಯುತ್ತಿರುವೆ..?

ತಂಗಾಳಿಗೆ ಮೈ ಒಡ್ಡುತ್ತಾ
ಮೆಲ್ಲನೆ ಭೂತಾಯಿಗೆ ನಮಿಸುತ್ತಾ
ನನ್ನದೇನೂ ಇಲ್ಲಎಲ್ಲವೂ ನಿನ್ನದೆನ್ನುತ್ತಾ

ನಿರವತೆಯ ಮೌನ ಮುರಿಯತ್ತ
ಕಲ್ಲು ಹೃದಯವನ್ನೂ ಅಲಗಿಸುತ್ತ
ಹೂಗಳ ರಾಣಿಯೇ ಹೇಳು
ಯಾರಿಗಾಗಿ ಈ ಚಿತ್ತ....?

ಕನಸುಗಳಿಗೆ ಆಶೆ ನೀಡಿ
ಮನಸ್ಸುಗಳನ್ನು ಒಂದುಗೂಡಿಸುತ್ತಾ
ಸಂಜೆಯಾಗುತ್ತಲೇ ನೀ ಬಾಡುವೆ
ನಶ್ವರತೆಯನ್ನು ಸೂಚಿಸುತ್ತಾ....


-ಮಲ್ಲಿ

ಮಂಗಳವಾರ, ಮೇ 1, 2007

ಅವ್ವ

ಕಷ್ಟದ ಕಣ್ಣೀರು ಕೋಡಿ ಹರಿದಾಗಲೂ
ಸ್ಥೈರ್ಯ ತುಂಬಿ ಬೆಳೆಸಿದಾಕೆ,
ಬರೀ ಸೋಲು ಕಂಡುವನಿಗೆ
ಗೆಲುವಿನ ದಾರಿ ತೋರಿಸಿದಾಕೆ.. ಅವ್ವ

ಗೆದ್ದು ಬಂದಾಗ...
ಮರೆಯಲ್ಲಿ ನಿಂತು ಆನಂದಭಾಷ್ಪ ಸುರಿಸಿದಾಕೆ
ಎಂಥ ನೋವಿನಲ್ಲೂ ನಗು ತಂದಾಕೆ
ತಾನುಣ್ಣುವ ತುತ್ತನ್ನು
ತನ್ನ ಕರಳು ಕುಡಿಗೆ ತಿನ್ನಿಸಿದಾಕೆ.. ಅವ್ವ

ಮುನ್ನುಗ್ಗಲು ಕಸವು ತುಂಬಲು
ಹಿಮ್ಮೇಳವಾಗಿ ಶಕ್ತಿ ನೀಡಿದಾಕೆ
ರಾಗ ಕೆಟ್ಟು ಭಾವ ಸೋತಾಗ
ತಾನೇ ತಂಬೂರಿ ಕೈಗಿತ್ತಿಕೊಂಡಾಕೆ.. ಅವ್ವ

ಮಾತು ಕಲಿಸಿ; ನೀತಿ ತಿಳಿಸಿ
ಸದ್ಗತಿಯ ಸಾಧ್ಯತೆ ತೋರಿಸಿದಾಕೆ
ಸಾಧ್ಯ-ಅಸಾಧ್ಯಗಳ ತೋಳಲಾಟದಲ್ಲಿ
ತಾನೇ ನಿಂತು ನೆರವಾದಾಕೆ.. ಅವ್ವ

ಆದರೆ

ಆಕೆಗೆ ನೀ ಕೊಟ್ಟಿದ್ದಾರೂ ಏನು
ಬರೀ ಕಣ್ಣೀರು.. ತೋರಿಸಿದ್ದು
ವೃದ್ಧಾಶ್ರಮ ಬಾಗಿಲು...

-ಮಲ್ಲಿ

ಶುಕ್ರವಾರ, ಏಪ್ರಿಲ್ 13, 2007

ಮಾತನಾಡು...

ಕೆಂಡವಾದ ಭೂ ಒಡಲಿಗೆ
ತಂಪನೆರದ ಬೆಸಿಗೆಯ ಬಿರು ಮಳೆ
ಈ ಬೆಂದ ಹೃದಯಕ್ಕೆ
ಪ್ರೀತಿಯಮಳೆಗರೆಯಬಾರದೇ..?

ಆ ನಿನ್ನ ನಿರವ ಮೌನ,
ನನ್ನಲ್ಲೆಬ್ಬಿಸಿದೆ ನೂರಾರು ಅನುಮಾನ
ನಿನ್ನ ಮಾತಿಗೆ, ಹೂ ನಗೆಗೆ
ನಿರೀಕ್ಷೆ ನೊಗ ಹೊತ್ತು.

ನೊಗಭಾರ ಇಳಿಸಿ
ಭಾರವಾದ ಹೃದಯವನ್ನು
ಬರಸೆಳೆಯಬಾರದೇ..?

ಅಷ್ಟುಕ್ಕೂ ಯಾಕೆ ಮೌನ
ಮೌನ ಮಾತಾಗಿ, ಮೆತ್ತಗಾಗಿ
ಮುತ್ತಿಕ್ಕಬಾರದೇ, ಕಾಯುವ ಹೃದಯವನ್ನ.

ಕನಸು ಕಟ್ಚಿಕೊಂಡು ಅಲೆಮಾರಿಯಾಗಿದ್ದೇನೆ
ಕಾಣದ ದಾರಿಯಲ್ಲಿ ಕಾಲಿಡುತ್ತಿದ್ದೇನೆ
ನಿನ್ನ ಮೌನ ಮಾತಾಗುತ್ತದೆ, ಉಸಿರಾಗುತ್ತದೆ ಎಂದು

ಹೇಳು ಮಾತನಾಡಲಾರೆಯಾ..?

-ಮಲ್ಲಿ

ಸೋಮವಾರ, ಏಪ್ರಿಲ್ 9, 2007

ಎಲ್ಲಿರುವೆ..?


ಪ್ರತಿ ವರುಷ ವಸಂತ
ನನಗೆ ಮಾತ್ರ ನಿತ್ಯ ನವ ದಿಗಂತ
ಭಾನತ್ತೆರಕ್ಕೆ ಹಾರಿ ಬಾನಾಡಿಯಂತೆ
ಹುಡುಕುತ್ತಿದ್ದೇನೆ ಕಾಣದ ಚೆಲವು, ಮೂಡದ ಒಲವು..

ನಾನು ಅರಸುತ್ತಿದ್ದೇನೆ ಪ್ರೀತಿ,
ನೀ ಸಿಕ್ಕು ಸಿಗದಂತಿರುವ ಆತ್ಮ ಸಂಗಾತಿ
ಬಳಕುವ ಲತೆಯಲ್ಲಿ, ಬಿರಿವ ಹೂ ಮೊಗ್ಗೆ
ಸೂರ್ಯಕಾಂತಿಗೆ ಕಾಯುವಂತೆ
ಮೊಡದ ಮರೆಯಲಿ ಮುಖ ತೋರಿಸಿ
ಮರೆಯಾಗುವ ಚಂದಿರನಂತೆ
ಕನಸಲ್ಲಿ ಕಣ್ಣು ಮಿಟುಕಿಸಿ
ಎಲ್ಲಿ ಮಾಯಾವಾದೇ ಅಂದಗಾತಿಯೇ..?

ಎಲೆಯ ಮೇಲಿನ ಮಂಜಿನ ಹನಿಯಂತೆ
ಸಿಗದೆ ಜಾರುವ ಜಾಯಮಾನದವಳೆ
ಕಂಡಷ್ಟು, ಕಾಣದಷ್ಟು ನೀ ಸನಿಹ
ನನ್ನ ಕಲ್ಪನಾ ಲೋಕದಲಿ...

- ಮಲ್ಲಿ

ಗುರುವಾರ, ಏಪ್ರಿಲ್ 5, 2007

ಕನ್ನಡ ಚಂದ್ರ

ಕನ್ನಡದ ಪೂರ್ಣಚಂದ್ರ
ಅಸ್ತಂಗತ
ಕಂಬಿನಿ ಮೀಡಿಯುತ್ತಿವೆ
ಅಸಂಖ್ಯಾತ

ಕನ್ನಡ ಕಷ್ಟಕ್ಕೆ ಬಿದ್ದಾಗ
ಅಲ್ಲಿ ಎಲ್ಲೋ ಹೂಂಕರಿಸುತ್ತಿತ್ತು
ಧ್ವನಿಯೊಂದು..
ಈಗ ಸ್ತಬ್ಧ-ನಿಶ್ಯಬ್ಧ
ಪರಿಸರ-ಅಕ್ಷರ ಎರಡು ಉಸಿರು
ಮಹಾ ಚೇತನದ ಅನಿಕೇತನಕೆ

ಕನ್ನಡಿಗರಿಗೆ ತಬರನ ಕಥೆ -ವ್ಯಥೆ
ಹೇಳಿದವ ಕಥೆಯಾದ ಈಗ
ವಿಜ್ಞಾನದ ಅಜ್ಞಾನ ತೊಲಗಿಸಿ
ಪರಿಸರ, ಪಕ್ಷಿ, ಛಾಯಚಿತ್ರ
ಎನುತ ಸಾಹಿತ್ಯ ಸಮುದ್ರ ಈಜಿದ
ಕನ್ನಡದ ಚಂದ್ರ ಅಸ್ತಂಗತ...

- ದುಃಖಿ

ಬುಧವಾರ, ಏಪ್ರಿಲ್ 4, 2007

ಆ ಮುದುಕಿ

ಆ ಮುದುಕಿ ಮಲಗಿದ್ದಾಳೆ
ಚೆನ್ನೈನ ಆ ಜನನಿಬಿಡ ರಸ್ತೆಯಲ್ಲಿ

ಹಾಗೇ ಹೋಗಿ ಬರುವವರನ್ನು ನೋಡುತ್ತಾಳೆ
ಸ್ಥಿತ ಪ್ರಜ್ಞೆ ಕಣ್ಣುಗಳಿಂದ..
ಅವರು ನೋಡುತ್ತಾರೆ ಅವಳನ್ನು.
ಕರುಣೆ ಇದ್ದವರು ಕಾಸು ಎಸೆಯುತ್ತಾರೆ
ಇಲ್ಲದವರು ಕಿಸಕ್ಕೆಂದು ನಕ್ಕು ಮುನ್ನಡೆಯುತ್ತಾರೆ

ಅವಳ ಮಲಗಿದ ಶೈಲಿಯೋ..
ವಿಷ್ಣು ಕಮಲಾರೂಢ ರೀತಿ
ಅವಳಗಿಲ್ಲ ಯಾರದೋ ಭೀತಿ
ದಿನಕರ ದಿನ ಬೆಳಗಿ ಮುಳುಗೋವರೆಗೂ
ಹಾಗೆಯೇ ಮಲಗಿರುತ್ತಾಳೆ
ಅವಳ ಸುತ್ತ ಬಿದ್ದ ಕಾಸು ಒಮ್ಮೊಮ್ಮೆ ಕಿಸಕ್ಕೇನ್ನುತ್ತದೆ..
ಮಹಾನಗರದ ಸಮಸ್ತ ಆಗು ಹೋಗು ಕಂಡು.

ಅವಳು ಈಗಮ್ಮೊ..ಆಗೊಮ್ಮೆ
ತನ್ನಡೆಗೆ ಬರುವ ವಾಹನ, ಸೂಟು-ಬೂಟುಧಾರಿಗಳನ್ನುನೋಡುತ್ತಾಳೆ...
ಏನೋ ಹೇಳಲು ಹೋಗುತ್ತಾಳೆ.
ಮಾತು ಮಾತ್ರ ಗಂಟಲಲ್ಲೇ ಉಳಿಯುತ್ತದೆ
ಮತ್ತ ಅದೇ ಸ್ಥಿತ ಪ್ರಜ್ಞೆ ದೃಷ್ಠಿ, ತದೇಕ ಚಿತ್ತ ಎಲ್ಲರತ್ತ

ಬಸಗಾಗಿ ಕಾಯುತ್ತ
ನೋಡುತ್ತೇನೆ ನಾನು ಅವಳತ್ತ
ಅವಳು ಮಾತ್ರ ಕಾಸು-ಪಾಸು ಎನ್ನುತ್ತ
ಇನ್ನಾವುದರತ್ತ ಹರಿಸಿ ಚಿತ್ತ
ನಗುತ್ತಾಳೆ. ಬಸ್ ಬಂತೆಂದು ಧಾವಿಸುವಾಗ
ಒಂದು- ಎರಡೋ ರೂಪಾಯಿ ಎಸೆಯುತ್ತೇನೆ
ಅವಳು ಮಾತ್ರ ಹಾಗೇ ಮಲಗಿರುತ್ತಾಳೆ.

-ಮಲ್ಲಿ

ಬುಧವಾರ, ಮಾರ್ಚ್ 21, 2007

ಸಾವಿನ ಮನೆಯೆಡೆಗೆ...

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ

ಸಂಬಂಧಗಳ ಸಹವಾಸ ಸಾಕು ಎಂದು

ಇರಬಹುದು ಬದುಕುವದಕ್ಕೆ ಕಾರಣಗಳು ನೂರಾರು

ನಾಯುವುದಕ್ಕೆ ನನಗೆ ಕಾರಣಗಳು ಸಾವಿರಾರು

ಬಂಧ-ಅನುಬಂಧಗಳ ಹುಡಕಾಟದಲ್ಲಿ

ದೇಹ-ಮನಸ್ಸು ಜರ್ಜರಿತ

ಕೊನೆಗೂ ನಿಲುಕುಲಿಲ್ಲ

ನಾ ಬಯಿಸಿದ ಸಬಂಧ
ಬಯಿಸಿದ್ದಾದರೂ ಏನು...

ಬೊಗೆಸೆಯಷ್ಟು ಪ್ರೀತಿ

ಸಿಕ್ಕಿದ್ದೇಷ್ಟು ಸಾಸಿವೆ ಕಾಳದಷ್ಟು ಅಲ್ಲ.

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ


ಅಲ್ಲಿ ಎಲ್ಲೋ ನಗುತ್ತಿವೆ

ಹಳಸಿದ ಸಂಬಂಧಗಳು

ನನ್ನ ಕಥೆ-ವ್ಯಥೆ ಕಂಡು..
ನಗಲಿ, ನಕ್ಕು ನಕ್ಕು ಅಳಲಿ

ಬಳಲಿ ಬೆಂಡಾಗಲಿ..

ನನಗಿಲ್ಲ ಅದರ ಚಿಂತೆ

ಜೀವವನ್ನೇ ಧಿಕ್ಕರಿಸೇದ್ದವನಿಗೆ

ಇನ್ನಾವದರ ಚಿಂತೆ

ತೊಡೆದು ಹಾಕಿ ಎಲ್ಲ ಭ್ರಾಂತಿ

ಸಾಗುತ್ತಿದ್ದೇನೆ ಎಲ್ಲಿಯೂ ನಿಲ್ಲದಂತೆ

ಸಾವಿನ ಮನೆಯೆಡೆಗೆ..

ನಗುವನ್ನೇ ಮರೆತವನಿಗೆ ಅಳುವಿನ ಚಿಂತೆಯೇ

ಬದುಕನ್ನು ಬೇಡ ಎಂದವನಿಗೆ ಸಾವಿನ ಅಂಜಿಕಿಯೇ

ಬದುಕು ಬವಣೆಗಳ ತಲ್ಲಣದಿಂದ

ಹೊರಬರುವುದೇ ಈ ಕ್ಷಣದ ಸತ್ಯ; ಸಾವೇ ಸಾಂಗತ್ಯ

ನೀವು ಅನ್ನಬಹುದು ನಿರಾಶಾವಾದಿ

ಆದರೆ, ಇದು ಸತ್ಯ ಆಶೆಯಲ್ಲಿ ನಿರಾಶೆ

ಮನಗಂಡವರಿಗೆ ಮಾತ್ರ

ನನ್ನ ಭಾವ ಆಗುವುದು ಅರ್ಥ

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ

-ಮಲ್ಲಿ

ಸಾವಿನ ಮನೆಯೆಡೆಗೆ...

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ

ಸಂಬಂಧಗಳ ಸಹವಾಸ ಸಾಕು ಎಂದು

ಇರಬಹುದು ಬದುಕುವದಕ್ಕೆ ಕಾರಣಗಳು ನೂರಾರು

ನಾಯುವುದಕ್ಕೆ ನನಗೆ ಕಾರಣಗಳು ಸಾವಿರಾರು

ಬಂಧ-ಅನುಬಂಧಗಳ ಹುಡಕಾಟದಲ್ಲಿ

ದೇಹ-ಮನಸ್ಸು ಜರ್ಜರಿತ

ಕೊನೆಗೂ ನಿಲುಕುಲಿಲ್ಲ

ನಾ ಬಯಿಸಿದ ಸಬಂಧ
ಬಯಿಸಿದ್ದಾದರೂ ಏನು...

ಬೊಗೆಸೆಯಷ್ಟು ಪ್ರೀತಿ

ಸಿಕ್ಕಿದ್ದೇಷ್ಟು ಸಾಸಿವೆ ಕಾಳದಷ್ಟು ಅಲ್ಲ.

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ


ಅಲ್ಲಿ ಎಲ್ಲೋ ನಗುತ್ತಿವೆ

ಹಳಸಿದ ಸಂಬಂಧಗಳು

ನನ್ನ ಕಥೆ-ವ್ಯಥೆ ಕಂಡು..
ನಗಲಿ, ನಕ್ಕು ನಕ್ಕು ಅಳಲಿ

ಬಳಲಿ ಬೆಂಡಾಗಲಿ..

ನನಗಿಲ್ಲ ಅದರ ಚಿಂತೆ

ಜೀವವನ್ನೇ ಧಿಕ್ಕರಿಸೇದ್ದವನಿಗೆ

ಇನ್ನಾವದರ ಚಿಂತೆ

ತೊಡೆದು ಹಾಕಿ ಎಲ್ಲ ಭ್ರಾಂತಿ

ಸಾಗುತ್ತಿದ್ದೇನೆ ಎಲ್ಲಿಯೂ ನಿಲ್ಲದಂತೆ

ಸಾವಿನ ಮನೆಯೆಡೆಗೆ..

ನಗುವನ್ನೇ ಮರೆತವನಿಗೆ ಅಳುವಿನ ಚಿಂತೆಯೇ

ಬದುಕನ್ನು ಬೇಡ ಎಂದವನಿಗೆ ಸಾವಿನ ಅಂಜಿಕಿಯೇ

ಬದುಕು ಬವಣೆಗಳ ತಲ್ಲಣದಿಂದ

ಹೊರಬರುವುದೇ ಈ ಕ್ಷಣದ ಸತ್ಯ; ಸಾವೇ ಸಾಂಗತ್ಯ

ನೀವು ಅನ್ನಬಹುದು ನಿರಾಶಾವಾದಿ

ಆದರೆ, ಇದು ಸತ್ಯ ಆಶೆಯಲ್ಲಿ ನಿರಾಶೆ

ಮನಗಂಡವರಿಗೆ ಮಾತ್ರ

ನನ್ನ ಭಾವ ಆಗುವುದು ಅರ್ಥ

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ

-ಮಲ್ಲಿ

ಶನಿವಾರ, ಮಾರ್ಚ್ 17, 2007

ಮುಂಗಾರು ಸಿಂಚನ

ಮಲ್ಲಿಗೆಯ ಮುಖಕ್ಕೆ ಮುಂಗಾರು ಸಿಂಚನ
ಚಿತ್ತ ಚಿತ್ತಾರ ಮೂಡಿಸಿದೆ
ಆ ನಿನ್ನ ಕರಿ ಮುಂಗುರುಳಿನ ಕುಂಚ
ನನ್ನೆದೆಯ ಬಾಂದಳವೆಲ್ಲ ಕಂಪನ

ಸ್ನಿಗ್ಧ ಸೌಂದರ್ಯದ ಸುರತಿ
ನನ್ನ ನಗುವೆಲ್ಲಾ ನೀನು
ನನ್ನ ಕನಸು,ಕನವರಿಕೆ ನೀನು
ನೀನಿಲ್ಲದ ಬಾಳು ಬಾಳೇ..?

ಸಾವಿರ ಸಂಕೋಲೆ ದಾಟಿ
ಕೈಹಿಡಿವೆ ಈ ಜಗವ ಮೀಟಿ
ನೀನೊಬ್ಬಳಿದ್ದರೆ ಸಾಕು
ಕಾಲ ಕೆಳಗೆ ಆ ನಾಕು

ನಿನ್ನ ನಗುವಿನ ಅಲೆಗಳು
ನನ್ನ ಯಶಸ್ಸಿನ ಕಲೆಗಳು
ಆ ಅಳು, ದು:ಖ ದುಮ್ಮಾನ
ಇರಲಿ ಕಡಲಾಚೆ....

-Malli

ಬುಧವಾರ, ಫೆಬ್ರವರಿ 21, 2007

ಜಾಗತೀಕರಣ ಅಂದ್ರೆ ಇದಪ್ಪಾ..

ಛೇ.. ಅತಿ ಆತ್‍ಪಾ ಈ ಜಾಗತಿಕರಣ ಹಾವಳಿ... ಅಂತ ತಿಪ್ಪಣ್ಣ ಆ ಕಡೆಯಿಂದ ಗುಣಗತ್ತಾ ಬಂದ. ಯಾಕೋ ತಿಪ್ಪಣ್ಣ ಅಂಥದ್ದೇನಾತೀಗ.. ಹಂಗ್ಯಾಕ್ ಗೋಣಗ್ಲಾಕತ್ತಿ ಅಂಥ ನಾನು ನನ್ನದ ಮಾಸ್ತರ್ ಠೀವಿಯೋಳಗ್ ಅವಂಗ್ ಕೇಳಿದೆ.

ಏನ್ ಬಿಡ್ರಿ ಮಾಸ್ತರ್ ಈ ಜಾಗ್ತಿಕರಣ ಬಾಳಾತ್ರಿ.. ಇಂದಿನ ಪೆಪರ್ ನೋಡಿರೇನ್ ನೀವ್.. ಚೆನ್ನೈಯೋಳಗ ಯಾವ್ದೋ ಹೋಟಲ್ದಾಗ್ ಪರದೇಶಿ ಹಜಾಮರ ಬಂದಾರಂತ್... ಅಲ್ರೀ ಮಾಸ್ತರ್ ಇಲ್ಲಿನ್ ಹಜಾಮರೇನು ಸರಿಯಾಗಿ ಕಷ್ಟ್ ಮಾಡಾಂಗಲ್ಲಂತಿ ತಿಳ್ಕೋಂಡಾರೇನ್ರಿ ಈ ಸರಕಾರದವ್ರೋ.. ಅಂತಂದ್..........

ಓಹಾ ಇದಾ ವಿಚಾರ.. ಅಂತೇಂದಾನ್ದ್ರೂ ಬೆಳಿಗ್ಗೆ ನಾನು ಈ ಸುದ್ಧಿ ಓದಿದ್ದೇ. ಈಗ ತೆಲೆಯೋಳಗ ಈ ವಿಚಾರ ಗುಂಯಿಗಡ್ಲಿಕತ್ತು.

ಅಲ್ಲೀ ಮಾಸ್ತರ್, ನಮ್ಮ ನೀರ್ ಸೋಪ ಹಚ್ಚಿ ಕೆರಿತಾರ್.. ಅವರೇನ್ ಬಂಗಾರ ಹಚ್ಚಿ ಕೇರಿತಾರ್.. ಇವತ್ತ ಚೈನೈದಾಗ ಬಂದಾರ್ ಬೆಂಗಳೂರಗೆ ಬರ್ತಾರ್...ನಾಡಿದ್ದ ನಮ್ಮೂರಿಗೆ ಬರ್ತಾರಿವ್ರು.. ಆಗ ನಮ್ಮ ಗತಿ ಏನ್ರೀ ಅಂತ್ ತನ್ನ ಜೀವನೋಪಾಯದ ದೂರಾಲಚೆನೆಯಲ್ಲಿದ್ದ ತಿಪ್ಪಣ್ಣ.

ಹೌದೋ ತಿಪ್ಪಣ್ಣ ನೀ ಹೇಳೂದು ಖರೇ ಅದ. ಜಾಗ್ತಿಕರಣದಿಂದಾಗಿ ನಮ್ಮ ಊರಾಗೀನ ಶೆಟ್ರೀಗೂ ಉಳಿಗಾಲ ಇಲ್ಲ. ವಾಲ್ಟ ಮಾರ್ಟ್ ಅಂತೋನ್ನದು ಒಂದು ದೊಡ್ಡ ಕಂಪನಿ ಭಾರತಕ್ಕ್ ಬರೂದೈತಿ. ಆಗ ನೋಡಿ ನಮ್ಮ ಚಿಲ್ಲರೆ ಅಂಗಡಿ ಇಟ್ಕೋಂಡವರೆಲ್ಲಾ ಬಕ್ಕಾ ಬರ್ಲೆ ಬಿಳ್ತಾರ. ಹಂಗ್ಯ ಈಗ ನಾವಲ್ಯಾಗರಿದೂ ಪರಿಸ್ಥಿ ಬರಬೌದುಪಾ ಅಂತಂದೆ.

ಅವನು ಏನೋನೂ ಅನ್ತಾ ತನ್ನ ಕಟಿಂಗ್ ಶಾಪ್ ಹಾದಿ ಹೊಡೆದ ಹೊರಟ. ನನ್ನಾಕೆ ಸ್ಕೂಲಿಗೆ ಟೈಮಾಯ್ತು ಬನ್ನಿ ಎಂದು ಕರೆದಳು ನಾನು ಎದ್ದು ಒಳ ಹೋದೆ.

-ಮಲ್ಲಿಕಾರ್ಜನ್

ಮಂಗಳವಾರ, ಫೆಬ್ರವರಿ 20, 2007

ನನ್ನ ಅಜಂತಾ

ಯಾಕೆ ಸಿಗರೆಟ್ ಬಹಳ ಸೇದ್ತಿದ್ದಾರಾ ಅಂತಾ ನನ್ನ ಸಿನಿಯರ್ ಕೇಳಿದ್ರು.... ಇಲ್ಲಾ ಅಂತಾ ನಾನು ಹಾರಿಕೆ ಉತ್ತರಾ ಕೊಟ್ಟೇನಾದರ್ರೂ. ಅಂತಾರಳದಲ್ಲಿ ಅದು ನಿಜ.
ನಾನು ಇತ್ತೀಚೆಗೆ ಸಿಗರೇಟ್ ಜಾಸ್ತಿ ಸೇದ್ತಿದೀನಿ. ಹಾಗಂತ ನನ್ನ ಎಲ್ಲ ಫ್ರೇಂಡ್ಸ್ ಹೇಳ್ತಿದ್ದೀರಾ. ಅದು ನಿಜಾನೂ ಹೌದು.....

ಹೌದು ಸಿಗರೆಟ್ ಯಾಕ್ ಸೇದ ಬೇಕು ? ಮಜಾ ಮಾಡೋಕಾ, ಟೆನ್ಸನ್ ಕಡಿಮೆ ಮಾಡೋಕಾ, ಇಲ್ಲಾ ಸುಮ್ಮನೇನಾ ಅಥವಾ ಫಲಿಸದ ಪ್ರೀತಿಗಾಗಿಯೇ.... ಸೇದೋರಿಗೆ ನೂರೆಂಟು ಕಾರಣ.

ಸೇದಿದೇ ಇರೋದಿಕ್ಕ ಕಾರಣ ಇಲ್ಲ. ನಾನಂತೂ ಸೇದೋದು ಕಾರಣ ಇಲ್ಲದೇನೆ ಹಾಗಂತ ಅನ್ಕೊಂಡ್ರೂ ಆಳದಲ್ಲಿ ಕಾರಣ ಇದ್ದೇ ಇದೆ. ಅದು ಏನು ಅನ್ನೋದು ಇಲ್ಲಿ ಹೋಳೋಕ ಆಗಲ್ಲ. ಅಂತಂದ್ರೆ ಮತ್ತೆ ಯಾಕೆ ಇಲ್ಲಿ ಇದನ್ ಬರ್ತಿರಿದ್ದಾರೆ ಅಂತೀರಾ. ಅದಕ್ಕೂ ಕಾರಣ ಇದೆ ಕೇಳಿ.

ನಾನ ಸಿಗರೇಟ್ ಸೇದಾದ್ಮೇಲೆ ಅಜಂತಾ ಬೇಕು. ಅಯ್ಯೋ ಅಜಂತಾ ಕೂಡ್ಲೇ. ಹುಡುಗಿ ಅಂತಾ ತಿಳ್ಕೋಬೇಡಿಪಾ. ಅದು ಅಡಕಿ ಚೀಟಿ ಹೆಸರು. ಅದನ್ನೆ ಯಾಕೆ ತಿನ್ನೋದು ಅಂದ್ರೆ. ಸಿಗರೆಟ್ ಸೇದಿ ಆಪಿಸಿಗೆ ಬಂದು ಕಂಪ್ಯೂಟರ ಮುಂದೆ ಕೂಡ ಬೇಕಲ್ಲ. ಆಗ ನನ್ನು ಸುತ್ತ ಸಹದ್ಯೋಗಿಗಳಿಗೆ ನನ್ನ ಸಿಗರೇಟ್ ಸುವಾಸನೆ ಬಡಿಬಾರದು ಅಂತ ಈ ಮುನ್ನೆಚ್ಚರಿಕೆ...!

ನೀವು ಏನೇ ಹೇಳ್ರೀ ಈ ಅಜಂತ ಸೊಗಸು ತುಂಬಾ ಮಜಾರೀ.. ಹಾಗೆ ಬಾಯಿಲ್ಲಿ ಹಾಕೊಂಡು ತಕ್ಷಣ ಕರಗಿ ಬಿಡುತ್ತೆ ಅನ್ಕೊಂಡ್ರಾ.. ಅದ್ನಾ ಜಗೀಬೇಕು ಆಗ ಕರುಗುತ್ತೆ ಸಣ್ಣಗೆ. ಆದ್ರೇ ಒಂದು ನಮ್ಮ ಸರ್ಕಾರಗಳು ಪ್ರತಿಭಟನೆ ತಡೆಯೋಕೆ ಸಾಕುಷ್ಟು ಮನ್ನೆಚ್ಚರಿಕೆ ವಹಿಸ್ತಾರೆ ಆದ್ರೆ ಏನಾಗುತ್ತೆ. ಏನಾಗಬೇಕಿತ್ತೋ ಅದೇ ಆಗುತ್ತೆ. ಆದ್ರೆ ನನ್ನ ಮುನ್ನೆಚ್ಚರಿಕೆ ಮಾತ್ರ ಹಾಗಲ್ಲ. ಅದು ವಿಫಲವಾಗೋದೇ ಇಲ್ಲ.

ಹೀಗಾಗಿ ನಾನು ಯಾವಗ್ಲೂ ಬಚಾವ್ . ಏನಂತೀರಾ ಸಿಗರೇಟ್ ಮಿತ್ರರರೇ ನೀವು ಒಮ್ಮೆ ಟ್ರೈ ಮಾಡಿ ನೋಡಿ.


- ಮಲ್ಲಿಕಾರ್ಜುನ

ಮಂಗಳವಾರ, ಫೆಬ್ರವರಿ 13, 2007

ಪ್ರೀತಿ...


ಪ್ರೀತಿ ಎಂಬ ಎರಡೂವರೆ ಅಕ್ಷರ

ಆಶೆ ಆಕಾಂಕ್ಷೆಗಳು ಆಗರ


ಹೆಣ್ಣಿನ ಅಂತರಾಳ

ಹೊಕ್ಕು ನೋಡವ ತವಕ

ಒಮ್ಮೊಮ್ಮೆ ಎಟುಕಿತು..

ಮತ್ಚೋಮ್ಮೆ ಕುಟುಕೀತು..


ಪ್ರತಿ ಜೀವಿಯೂ ಬಯಸುವುದೂ

ಬೊಗಸೆಯಷ್ಟು ಹಿಡಿ ಪ್ರೀತಿಯನ್ನ

ಸಿಗದಿದ್ದರೆ ಜೀವನವೇ ಚಿತ್ರಾನ್ನ..!


ಸಹಿಸಿಕೊಂಡಷ್ಟು ಪ್ರೀತಿ ಸಹನೀಯ

ಇಲ್ಲದಿದ್ದರೇ ಜೀವನವೇ ನಿರಸ..

ಆಗದರಲಿ ಹಾಗೆ...

ಬೆಳಗಲಿ ಪತಿ ಪ್ರೇಮಿಯ ಹೃದಯ ಹಣತೆ


ಸಾಗಲಿ ಪ್ರೇಮಿಗಳ ನಿತ್ಯ ನೂತನ

ಜೀವನ ಪ್ರೇಮ ಕೊನೆಯಾಗದರಲಿ

ಎಲ್ಲಿಯೂ ನಿಲ್ಲದಿರಲಿ..



-ಮಲ್ಲಿಕಾರ್ಜುನ್


ಸೋಮವಾರ, ಫೆಬ್ರವರಿ 12, 2007

ನಿನಗೇಕೆ...?

ನನ್ನ ಹಾಡು ನನ್ನದು
ಸುಮ್ಮನೆ ಏಕೆ ಕೆಣಕುತ್ತಿ
ನನ್ನ ಹಾಡು ಎಂದು ನೀ..

ಹಾಡಿನ ಪಾಡು ನನ್ನದೆ
ಪಟ್ಟ ವ್ಯಧ್ಯೆಯು ನನ್ನದೆ
ನಿನಗೇಕೆ ಗೊಡವೆ ನನ್ನದೆಂದು...

ನಾ ಹಾಡುವುದು ನನಗಾಗಿ
ಕೇಳಿಸಿಕೊಳ್ಳದಿದ್ದರೂ ಹಾನಿಯಿಲ್ಲ ಲಾಭವೂ ಇಲ್ಲ.
ಇದು ನನ್ನ ಹಾಡು...

ಕೇಳ ಬೇಡ ನೀ..
ಯಾಕೆ ನನ್ನ ಹಾಡು ಎಂದು..



-ಮಲ್ಲಿಕಾರ್ಜುನ

ಬುಧವಾರ, ಫೆಬ್ರವರಿ 7, 2007

ಪಾಸ್‌ ಇದೆಯಾ..?

ಪಾಸ್‌ ಇದೆಯಾ..?
ಅತ್ತಿಂದ ಧ್ವನಿ ಬಂತು
ಬೆಂಗಳೂರ ಸಿಟಿ ಬಸ್ಸಿಂದಿಳಿದಾಕ್ಷಣ
ತೆಲೆ ಎತ್ತಿ ನೋಡಿದೆ
ಮಬ್ಬುಗತ್ತಲಿನಲ್ಲಿ

ಮೇಲುಗಣ್ಣಿನ ಹುಡುಗ
ಮೈ ಮೇಲೆ ಅಲ್ಲಲ್ಲಿ ಅರಿವೆ
ಕೋಡಬೇಕೋ ಕೋಡಬೇಡವೋ
ಯೋಚಿಸುವ ಮೊದಲೆ
ನನ್ನ ಕೈಕಿಸೆಯೊಳಗಿಳಿದು
ಅವನ ಕೈಗೆ ಪಾಸ್‌ ನೀಡಿತ್ತು...

ಮತ್ತೊಂದು ದಿನ ....

ಬಸ್‌ ಪಾಸ್‌ ಇದೆಯಾ..?
ಕೇಳಿತು ಅತ್ತ ಕಡೆಯಿಂದಬಸ್ಸಿಂದಿಳಾದಕ್ಷಣ.
ನೋಡಿದೆ, ಮೈ ತುಂಬಾ
ಬಟ್ಟೆ ಕೈಗಳು ತುಂಬಾ ಬಂಗಾರ
ಆದರೂ, ಪಾಸ್‌ ಇದೆಯಾ.... ?
ಇದ್ದರೂ ಇಲ್ಲ ಅಂದೆ.

ದುರುಗಟ್ಟಿದ ಆತ...
ದುರಳರು ದುರುಗಟ್ಟುತ್ತಾರೆ
ಆದರೂ `ಪಾಸ್‌'ಗಾಗಿ ಹಪಿಹಪಿಸುತ್ತಾರೆ..
ಇದೇ ನಗರ ಜೀವನಾನಾ...?

ಒಂದಡೇ ಇಲ್ಲದವರೂ ಬೇಡುತ್ತಾರೆ
ಇದ್ದವರೂ ಬೇಡುತ್ತಾರೆ....
ಇಲ್ಲ ಮತ್ತು ಇದ್ದವರ ನಡುವೆ
ಕೊಡವವನು ಯಾರು..?


-ಮಲ್ಲಿಕಾರ್ಜುನ್‌