ಗುರುವಾರ, ಜುಲೈ 28, 2016

ಸೋತವನ ರಾತ್ರಿ ಪದ್ಯಗಳು-1

ಕವಿತೆ ಹುಟ್ಟೊ ಕಾಲದಲ್ಲಿ ಮುಂಗಾರಿನ ಮಿಂಚು
ಎದುರಿಗಿದ್ದವಳ ಕಣ್ಣಲ್ಲಿ ಪ್ರೇಮ ನಿವೇದನೆಯ ಸಂಚು
ಹಗಲಲ್ಲಿ ಕಂಡ ಬಾವಿಗೆ ಬೀಳಲು ಭಾವನೆಗಳ ಹೊಂಚು
ಇದನರಿತು ಹೊರಟವನ ಬ್ಯಾಗಿನಲ್ಲಿತ್ತು ಸಾವಿನ ಅಂಚು
- ಸೋತವನು

****

ಅಹಮಿಗೆ ಪೆಟ್ಟು ಬೀಳುವ ಕ್ಷಣ
ನಾನು ನಾನೆಂಬುವುದೆ ಪರಕೀಯ
ಇರುವ ನಾಲ್ಕು ಕ್ಷಣಗಳಲ್ಲಿ
ನೂರು ದಾರಿ ಹಲವು ಕವಲು
ಕೊನೆಗೆ ಸೇರುವುದೆಲ್ಲವೊ ಶೊನ್ಯ ಸಾಧನೆ
-ಸೋತವನು

****

ಹಾಡುವ ಕನಲಿಕೆ ಎದೆಯೊಳಗೆ
ತುರಿಸುವ ತಿಕ್ಕಾಟಗಳು ಅದರೊಳಗೆ
ಎದ್ದೇಳುವ ಬಿರಿಸು ಭಾವಗಳಿಗೆ
ಜೀವ ತುಂಬುವ ಕಲೆ ಅವಳಿಗೆ
ಮೇಲೆ ಹಾರಿ ಕೆಳಗೆ ಬೀಳುವ ಜಿದ್ದು
ಗೆಲ್ಲುವುದಕ್ಕಲ್ಲ ಸೋಲುವುದಕ್ಕೆ
ಗೆಲುವಿಗೆ ಒಂದೇ ಒಂದು ಖುಷಿ
ಸೋಲಿಗೆ ಗೆಲುವಿನ ಸಾವಿರ ನಿರೀಕ್ಷೆ
ಹಾಡುವ ಕನಲಿಕೆ ಕೊನೆಯಾಗುವುದೇ?
-ಸೋತವನು

ಕಾಮೆಂಟ್‌ಗಳಿಲ್ಲ: