ಶನಿವಾರ, ಏಪ್ರಿಲ್ 12, 2008

ದೂರ ನಿಲ್ಲಿ ಕವನಗಳೇ ..


ಸಾಕಾಗಿದೆ ಕವನಗಳ
ಸಹವಾಸ, ಹೂತ್ತುಗೂತ್ತಿಲ್ಲದೆ
ದಿಗ್ಗನೇ ಎದ್ದು ನಿಲ್ಲುವ ಭಾವಗಳಿಗೆ
ಅಕ್ಷರ ಅಂಗಿ ತೊಡಿಸುವ
ಪದಗಳೇ ದೂರ ನಿಲ್ಲಿ.

ಕಲ್ಪನೆ, ಕೌತುಕ ,
ಕಾಮವಾಂಛೆ ಮೀರಿ
ನಿಲ್ಲಲು ಸೆಣಿಸುತ್ತಿದ್ದೇನೆ
ಅಡ್ಡ ಬಂದು ಸೆಡ್ಡು
ಹೊಡೆಯಬೇಡಿ, ಪದಗಳ
ಬೇಡಿಯೊಳಗೆ ಬಂಧಿಯಾಗಲು
ನನಗಿಷ್ಟವಿಲ್ಲ

ಕನಸು, ಕನವರಿಕೆ
ನೀಗಲೆಂದೇ ದೂರ
ಹೋಗಿ ಎಂಬ ನಿವೇದನೆ
ನಿಮಗೆ, ಅದು ಹಮ್ಮು
ಎಂದರೆ ನಾನಲ್ಲ ಹೂಣೆ

ಆಕಾಶದ ಆಚೆ ಹಾರಿ
ಭೂ ಲೋಕವೆಲ್ಲಾ ತೂರಿ
ಸ್ವತಂತ್ರ, ಸ್ವೇಚ್ಚೆಯಡಿ
ಸಾಗುವ ಹುಮ್ಮಸ್ಸು ನನಗೆ
ತೊದರಗಾಲು ಹಾಕಬೇಡಿ
ದೂರ ನಿಲ್ಲಿ ಕವನಗಳೇ ....

4 ಕಾಮೆಂಟ್‌ಗಳು:

dinesh ಹೇಳಿದರು...

exclnt poem...enjoyed

dinesh ಹೇಳಿದರು...

exclnt poem...enjoyed

jomon varghese ಹೇಳಿದರು...

ವ್ಹಾಹ್ ! ಸುಂದರ ನಿವೇದನೆ. ತಿಪ್ಪಾರರೇ ಕವಿತೆ ತುಂಬಾ ಚೆನ್ನಾಗಿದೆ. ಇನ್ನೂ ಸುಂದರವಾದ ಕವಿತೆಗಳನ್ನು ಬರೆಯಿರಿ ಮಾರಾಯ್ರೆ, ಕವನಗಳ ಸಹವಾಸ ಸಾಕಾಗಿದೆ ಅಂತೀರಲ್ಲಾ?

ಧನ್ಯವಾದಗಳು.

ಜೋಮನ್

manjula ಹೇಳಿದರು...

tippar avare bahala dinagala nantara blog odtiro nange nimma kavitegalu nan baravanigeyatta prerepisuttive! nijakku e kavite adbuthavagide!


manjula belagali